ರೈತರ ಮಕ್ಕಳಿಗೆ ಬೆನ್ನಲುಬಾದ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಇ ಕೆಳಗಿನ ಪಟ್ಟಿಯಂತೆ ಜಾರಿಗೊಳಿಸಿದೆ.
ಕ್ರಮ ಸಂ. | ಕೋರ್ಸ್ ಹೆಸರು/ವಿಧಗಳು | ಹುಡುಗರು/ಪುರುಷರು | ಹುಡುಗಿಯರು/ಅನ್ಯಲಿಂಗದವರು |
---|---|---|---|
1 | ಪದವಿಯ ಮುಂಚೆ ಪಿ.ಯು.ಸಿ/ಐ.ಟಿ.ಐ/ಡಿಪ್ಲೋಮ | ರೂ.2500/- | ರೂ.3000/- |
2 | ಎಲ್ಲಾ ಬಿ.ಎ/ಬಿ.ಎಸ್.ಸಿ/ಬಿ.ಕಾಂ,ಇತ್ಯಾದಿ; ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸಗಳನ್ನು ಹೊರತುಪಡಿಸಿ. | ರೂ.5000/- | ರೂ.5500/- |
3 | ಎಲ್.ಎಲ್.ಬಿ/ಪ್ಯಾರ ಮೆಡಿಕಲ್/ಬಿ.ಫಾರ್ಮ್/ ನರ್ಸಿಂಗ್, ಇತ್ಯಾದಿ, ವೃತ್ತಿಪರ ಕೋರ್ಸ್ ಗಳು | ರೂ.7500/- | ರೂ.8000/- |
4 | ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳು | ರೂ.10000 | ರೂ.11000/- |
ಈ ಶಿಷ್ಯವೇತನಕ್ಕೆ ಈ ಕೆಳಕಂಡ ಅರ್ಥವಿವರಣೆಗಳನ್ನು ಪರಿಗಣಿಸತಕ್ಕದ್ದು.
(ಅ) ರೈತ (Farmer), ಎಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವಂತಹ / ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವಂತಹ ವ್ಯಕ್ತಿ.
(ಆ) ಮಕ್ಕಳು, ಎಂದರೆ ಕಾನೂನಿನ ಪ್ರಕಾರ ದತ್ತು ಪಡೆದಿರುವ ಮಕ್ಕಳು ಸೇರಿದಂತೆ ಪೋಷಕ / ಪೋಷಕರ ಜೈವಿಕ ಸಂತತಿ. ಒಂದು ಪಕ್ಷ ಯಾವುದೇ ಮಕ್ಕಳಿಗೆ ಪೋಷಕ/ ಪೋಷಕರು ಇಲ್ಲದ ಇದ್ದ ಸಂದರ್ಭದಲ್ಲಿ ಉಳುಮೆ ಮಾಡುವಂತಹ | ಕೃಷಿ ಮಾಡುವಂತಹ ಜಮೀನನ್ನು ಅವರು ಹೊಂದಿರತಕ್ಕದ್ದು, ಈ ಷರತ್ತು, ಅವರುಗಳಿಗೆ ಈ ಯೋಜನೆಯ ಲಾಭವನ್ನು ಪಡೆಯಲು ಅನುಕೂಲವಾಗುತ್ತದೆ.
ಈ ಶಿಷ್ಯವೇತನವು (Scholarship) ಈ ಮುಂದಿನ ಷರತ್ತುಗಳನ್ನು ಒಳಗೊಂಡಿರುತ್ತದೆ
ಈ ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ, ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ / ಪ್ರಶಸ್ತಿ (award), ಪ್ರತಿಫಲ (reward) - ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ, ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿದು ಬಂದಿದೆ.