Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಾಲೆ ತೆರಿಯುತ್ತಿರೋ ಸಾವಿನ ಬಾಗಿಲು ತೆಗೆಯುತ್ತೀರೋ: ದೇಸಾಯಿ ಪ್ರಶ್ನೆ

localview news

ಬೆಳಗಾವಿ:  ಇದೇ ದಿನಾಂಕ 23 ರಿಂದ 9 ಹಾಗೂ 10ನೇ ತರಗತಿಗಳನ್ನು ಪ್ರಾರಂಭಿಸುವ ನಿರ್ದಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿರುವ ಕುರಿತಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಿರಿಯ ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿನದತ್ತ ದೇಸಾಯಿ ಅವರು ತಮ್ಮ ಕಳಕಳಿಯ ವಿನಂತಿಯನ್ನು ಪತ್ರಿಕಾ ಪ್ರಕಟನೆಯ ಮೂಲಕ ವಿನಂತಿಸಿಕೊAಡಿದ್ದಾರೆ. ಈಗ ವಿದ್ಯಾರ್ಥಿಗಳಿಗೆ ಲಸಿಕೆಗಳಂತೂ ಆಗಿಲ್ಲ.

ಮೊದಲ ಡೋಜ್ ತೆಗೆದುಕೊಂಡವರೇ ಎರಡನೇ ಡೋಜ್‌ಗಾಗಿ ಪರಿದಾಡುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಗಲು ಸಾಧ್ಯವೂ ಇಲ್ಲ. ಲಸಿಕೆ ಇಲ್ಲದೇ ವರ್ಗದ ಕೋಣೆಯಲ್ಲಿ ಹುಡುಗರನ್ನೂ ಕೂಡಿಸಿದರೆ. ಒತ್ತಾಯದಿಂದ ಮಾಸ್ಕ ಹಾಕಿಸಬಹುದು ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಲು ಸಾಧ್ಯವೆ. ಎರಡು ಮೀಟರ್‌ಗೊಬ್ಬ ವಿದ್ಯಾರ್ಥಿಯನ್ನು ಕೂಡಿಸಿದರೆ ಒಂದು ಕೋಣೆಯಲ್ಲಿ ಹೆಚ್ಚೆಂದರೆ ಹತ್ತು ಹುಡುಗರು ಕೂಡಬಹುದು ಅಷ್ಟೆ. ಇದರಿಂದ ಹೆಚ್ಚಿನ ಕೋಣೆಗಳನ್ನು, ಕಲಿಸಬೇಕಾಗುವ ಶಿಕ್ಷಕರನ್ನು ಹೊಂದಿಸಲಾಗುತ್ತದೆಯೆ. ಇದು ಕೋಣೆ ಒಳಗಿರುವ ವಿಷಯವಾಯಿತು. ಕೋಣೆ ಹೊರಗಡೆಯ ವಿಷಯಕ್ಕೆ ಬಂದಾಗ ಮಕ್ಕಳ ವಯೋಸಹಜ ಸ್ವಭಾವದಂತೆ ಮಕ್ಕಳು ಕೂಡಿ ಆಡುವುದು, ಜಿಗಿಯುವು, ಮಾತನಾಡುವುದು ಮಾಡಿಯೇ ಮಾಡುತ್ತಾರೆ.

ಇದನ್ನು ತಡೆಯುವುದು ಸಾಧ್ಯವೇ ಇಲ್ಲ. ಯಾವುದೇ ಪಾಲಕರೂ ಮಕ್ಕಳ ಜೀವಕ್ಕಿಂತ ಶಿಕ್ಷಣ ಹೆಚ್ಚಿನದೆಂದು ಹೇಳಲು ಸಾಧ್ಯವಿಲ್ಲ. ಲಸಿಕೆಯಿಲ್ಲದೇ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದೂ ಇಲ್ಲ. ಯಾರುತಾನೆ ಈ ಸಾವಿನ ಬಾಗಿಲಿಗೆ ಮಕ್ಕಳನ್ನು ಕಳುಹಿಸಲು ಬಯಸುತ್ತಾರೆ. ಅಕಸ್ಮಾಕ ವಿದ್ಯಾರ್ಥಿಗಳು ಮರಣ ಹೊಂದಿದರೆ ಯಾರು ಜವಾಬ್ಧಾರಿಯಾಗುತ್ತಾರೆ. ಅದಕ್ಕಾಗಿ ಮೊದಲು ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕುರಿತಂತೆ ಸಾರ್ಕಾರ ಕ್ರಮ ಕೈಕೊಳ್ಳಲಿ. ಲಸಿಕೆ ನಂತರ ಶಿಕ್ಷಣ ವಿಚಾರ ಮಾಡಲಿ.ಇದೊಂದು ಸರ್ಕಾರದ ಅವೈಜ್ಞಾನಿಕ ನಿರ್ಣಯವಾಗಿದ್ದು ಇದನ್ನು ಕೈಬಿಡಬೇಕೆಂದು ನನ್ನ ಕಳಕಳಿಯ ವಿನಂತಿಯೆAದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.