Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೆವಿಜಿ ಬ್ಯಾಂಕದ ಮೊಂಡುತನಕ್ಕೆ ಸಿದ್ದಗೌಡರ ಆಕ್ರೋಶ

localview news

ಹೊಸೂರ :ಅತಿವೃಷ್ಠಿ, ಅನಾವೃಷ್ಠಿ ಮದ್ಯದಲ್ಲಿ ಕರೊನಾದ ಹಾವಳಿಯಿಂದ ಕೃಷಿಕರ ಜೀವನ ದುಸ್ಥರವಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಅನೇಕ ಬ್ಯಾಂಕ್ ಗಳು ಕೃಷಿ ಸಾಲಕ್ಕೆ 60-90ಶೇ ಕಡಿತಗೊಳಿಸಿ ರೈತನ ಕಷ್ಟಕ್ಕೆ ಸ್ಪಂದಿಸುತಿದ್ದರೆ ಕೆವಿಜಿ ಬ್ಯಾಂಕ್ ಮೊಂಡತನ ಮಾಡುವದು ನ್ಯಾಯಸಮ್ಮತವಲ್ಲ ಎಂದು ರೈತಮುಖಂಡ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಅಕ್ರೋಶ್ ವ್ಯಕ್ತಪಡಿಸಿದರು.

ಗ್ರಾಮದ ಕೆವಿಜಿ ಬ್ಯಾಂಕ್ ಶಾಖಾಧಿಕಾರಿ ಮೂಲಕ ಕೆವಿಜಿ ಬ್ಯಾಂಕ್ ಅಧ್ಯಕ್ಷರಿಗೆ ಸೊಮವಾರ ಮನವಿ ಸಲ್ಲಿಸಿ ಮಾತನಾಡಿ, ಕಳೆದ ಆರು ವರ್ಷಗಳಿಂದ ರೈತರು ಒಂದಿಲ್ಲ ಒಂದು ಸಂಕಷ್ಟದ ಸುಳಿಗೆ ಸಿಕ್ಕು ಜೀವನ ನಡೆಸುವದೆ ಭಾರವಾಗಿ ಪರಿಣಮಿಸುತ್ತಿದೆ.

ಇಂತಹ ಪರಸ್ಥಿತಿ ಅವಲೊಕಿಸಿ ಅನೇಕ ರಾಷ್ಟೀಕೃತ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳು ರೈತರ ಕಟಬಾಕಿ ಸಾಲದ ಬಡ್ಡಿ ಮನ್ನಾ ಮಾಡಿ ಅಸಲಿನಲ್ಲಿ ಶೇ 60-90 ರಷ್ಟು ಮನ್ನಾ ಮಾಡಿ ಉಳಿದ ಮೊತ್ತಕ್ಕೆ ಕಾಲಾವಕಾಶ ನೀಡಿ ಸಾಲ ಮರುಪಾವತಿಗೆ ಅವಕಾಶ ನೀಡುತ್ತಿರುವಾಗ ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿದ್ದ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಇಂದು ರೈತರ ಕೊರಳಿಗೆ ಉರಳಾಗುತ್ತಿದೆ.

ಆದ್ದರಿಂದ ತಕ್ಷಣ ಮೇಲಾಧಿಕಾರಿಗಳು ರೈತರ ಕಷ್ಟವನ್ನರಿತು ಕಟಬಾಕಿ ಸಾಲದ ಅಸಲಿನಲ್ಲಿ ಶೇ 60-90 ದಷ್ಟು ಮನ್ನಾ ಮಾಡಿ ಒಂದೆ ಬಾರಿಗೆ (ಓಟಿಎಸ್)ಸಾಲ ಮರುಪಾವತಿಗೆ ಅನಕೂಲ ಮಾಡಿಕೊಡಬೇಕೆಂದರು. ರೈತ ಮುಖಂಡ,ಎಸ್.ಕೆ.ಮೆಳ್ಳಿಕೇರಿ, ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ಅ12 ರಂದು ರೈತ ಮುಖಂಡರು ಕೆವಿಜಿ ಬ್ಯಾಂಕ್ ಮುಖ್ಯ ಶಾಖೆ ಧಾರವಾಡಕ್ಕೆ ಹೊರಡಲಿದ್ದು ಅಲ್ಲಿ ಕೆವಿಜಿ ಬ್ಯಾಂಕ್ ಅಧ್ಯಕ್ಷರು ರೈತರ ಮನವಿಗೆ ಸ್ಪಂದಿಸಿ ಕಟಬಾಕಿ ಸಾಲಗಾರ ರೈತರಿಗೆ ಆಸರೆಯಾಗಬೇಕು ಇಲ್ಲದಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಕೆವಿಜಿ ಬ್ಯಾಂಕ್ ಹಠಾವೋ ಚಳುವಳಿ ಪ್ರಮುಖ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರಾದ ಶ್ರೀಶೈಲ ಬಾಳೇಕುಂದರಗಿ, ಸೋಮಲಿಂಗಪ್ಪ ಹುಂಬಿ ಮಾತನಾಡಿ, ಸರಿಯಾದ ಬೆಳೆ ಬಂದು ಅದಕ್ಕೆ ಯೋಗ್ಯದರದ ಬೆಲೆ ಸಿಕ್ಕಿದ್ದರೆ ಸಾಲವನ್ನು ಬಡ್ಡಿ ಸಮೇತ ಮರುಪಾವತಿ ಮಾಡುತಿದ್ದೆವು ಆದರೆ ಇಂದಿನ ಬೆಲೆ ಏರಿಕೆ ಪರಸರದ ವಿಕೊಪದಿಂದ ರೈತನಿಗೆ ಕೃಷಿಯಲ್ಲಿ ನಷ್ಟ ಉಂಟಾಗಿ ಮಾಡಿದ ಸಾಲವನ್ನು ತೀರಿಸದೆ ಆತ್ಮಹತ್ಯೆಗೆ ದಾರಿಯಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಕಟಬಾಕಿ ಸಾಲದ ಅಸಲನ್ನು ಕಡಿತಮಾಡಿ ಶೇ 10-20ಪ್ರತಿಶತ ಅಸಲಿನೊಂದಿಗೆ ಮರುಪಾವತಿ ಮಾಡಿಕೊಬೇಕೆಂದು ಹೇಳಿದರು.

ಶಾಖಾ ಪ್ರಭಂಧಕ ಎಮ್.ಡಿ.ಗರಗ ಮನವಿ ಸ್ವೀಕರಿಸಿ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದು ಈಗಾಗಲೆ ಕಟಬಾಕಿ ಸಾಲದ ಬಡ್ಡಿಯಲ್ಲಿ ರೈತರಿಗೆ ವಿನಾಯತಿ ನೀಡುತಿದ್ದು ಹೆಚ್ಚಿನ ವಿನಾಯತಿ ಕೇಳುತ್ತಿರುವ ಬಗ್ಗೆ ಹಾಗೂ ಅ12 ರಂದು ಧಾರವಾಡ ಮುಖ್ಯ ಶಾಖೆಗೆ ಹೊಗಲಿರುವ ರೈತರ ನೀಯೋಗಕ್ಕೆ ಸಕಾರತ್ಮಕವಾಗಿ ಸ್ಪಂದಿಸಲು ವಿನಂತಿ ಮಾಡುವದಾಗಿ ಪ್ರತಿಭಟನಾಕಾರ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತರು ಕೆವಿಜಿ ಬ್ಯಾಂಕ್ ಬಾಗಿಲು ಹಾಕಿ ಪ್ರತಿಭಟನೆ ನಡೆಸಿ ಘೋಷಣೆ ಹಾಕಿದರು. ಗ್ರಾಮದ ರೈತ ಮುಖಂಡರಾದ, ಮಹಾಂತೇಶ ವಿವೇಕಿ, ಗುರಸಿದ್ದಪ್ಪ ಗಾಣಗಿ, ಬಸಪ್ಪ ಸುತಗಟ್ಟಿ, ಮಂಜುನಾಥ ಪಣದಿ, ಮಹಾದೇವಪ್ಪ ಗಾಣಿಗೇರ, ಮಲ್ಲಪ್ಪ ಬುರ್ಲಿ, ಶಿವಾನಂದ ಯರಗಟ್ಟಿಮಠ,ಬಸಪ್ಪ ಪೆಟೆಂದ, ಮಲ್ಲಪ್ಪ ಕುದರಕಾರ, ಎಸ್.ಎಂ.ಮಾಕಿ, ಶ್ರೀಶೈಲ ಗಾಣಿಗೇರ, ಮಲ್ಲಿಕಾರ್ಜುನ ಹುರಕಡ್ಲಿ, ಕಾಶಿಮಸಾಂಬ ಮಳಗಲಿ, ಮಡಿವಾಳಪ್ಪ ಗುಮಗೋಳ, ರಾಖೇಶ ನಾಗನಗೌಡ್ರ, ಶಂಕರೆಪ್ಪ ಭಾಂವಿಹಾಳ, ಉಮೇಶ ಬುಡಶೆಟ್ಟಿ, ಸೋಮಲಿಂಗ ಮೂಲಿಮನಿ, ಮೋಹನ ವಕ್ಕುಂದ, ಮಡಿವಾಳಪ್ಪ ಜಾಧವ, ಮಡಿವಾಳಪ್ಪ ಹುರಕಡ್ಲಿ, ನೂರಾರು ರೈತರು ಇದ್ದರು.

ಮುರಗೋಡ ಠಾಣೆಯ ಪಿ ಎಸ್ ಐ ಪ್ರವೀಣ ಗಂಗೊಳ್ಳಿ ಮಾರ್ಗದರ್ಶನದಲ್ಲಿ ಎ ಎಸ್ ಐ ಏಪ್.ವಾಯ್. ಮಲ್ಲೂರ ಹಾಗೂ ಪೋಲಿಸ್ ಜಗದೀಶ್ ಗುದ್ಲಿ ಸ್ಥಳದಲ್ಲಿ ಬಿಗಿ ಭದ್ರತೆ ನೀಡಿದ್ದರು.