Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶ್ರಾವಣಮಾಸವು ಭಾರತೀಯರಿಗೆ ಅತ್ಯಂತ ಪ್ರಮುಖ ಹಬ್ಬ : ಶ್ರೀ ಚಂದ್ರಶೇಖರ ಶ್ರೀಗಳ ಅಭಿಮತ

localview news

ರಾಯಬಾಗ :ಮಾಸಗಳಲ್ಲೇ ಶ್ರಾವಣ ಮಾಸವು ಅತ್ಯಂತ ಪ್ರಮುಖ ಮಾಸವಾಗಿದೆ. ಈ ತಿಂಗಳಲ್ಲಿ ಶ್ರಾವಣ ಶಿವರಾತ್ರಿ ಪ್ರಮುಖವಾದುದಾಗಿದೆ. ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ನಮ್ಮದಾಗುತ್ತದೆ. ಶಿವನ ಆರಾಧನೆಯು ವ್ಯಕ್ತಿಯ ಮನಸ್ಸನ್ನು, ಇಂದ್ರೀಯವನ್ನು, ದೇಹವನ್ನು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಎಂದು ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಹುಕ್ಕೇರಿ ಶಾಖೆ ರಾಯಬಾಗದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರದಿನ ಶ್ರೀಮತಿ ಭಾಗ್ಯವಂತಿ ಮಹಾದೇವ ಬಿರಾದಾರ ದಂಪತಿ ಯವರನ್ನು ಸನ್ಮಾನಿಸಿ ಮಾತನಾಡಿದರು. ಶ್ರಾವಣ ಮಾಸವು ಭಾರತೀಯರಿಗೆ ಅತ್ಯಂತ ಪ್ರಮುಖವಾದ ಮಾಸ. ಶುಭ ಕಾರ್ಯಗಳಿಗೆ ಪ್ರಶಸ್ತವಾದ, ಹಬ್ಬ ಹರಿದಿನಗಳು ಹೆಚ್ಚಿರುವ ಈ ಮಾಸವನ್ನು ಬಹಳ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ ಎಂದರು.

ಯುವ ಧುರೀಣ ಅರುಣ ಐಹೊಳೆ ಮಾತನಾಡಿ, ಶ್ರಾವಣವೆಂದರೆ ಪ್ರಸನ್ನ ಚಿತ್ತದ ಭಕ್ತಿಯ, ಸಾತ್ವಿಕ ಮಾತುಗಳ ಸಂಭ್ರಮದ ಮಾಸ. ಭೀಮನ ಅಮಾವಾಸ್ಯೆ ಮುಗಿಯುತ್ತಿದ್ದಂತೆ ಹಬ್ಬಗಳ ಸರಮಾಲೆ ಶುರುವಾಗುತ್ತದೆ. ಹಿಂದೂಗಳಿಗೆ ಶ್ರಾವಣ ಮಾಸ ಪವಿತ್ರವಾದುದು. ವರ್ಷಪೂರ್ತಿ ಇರುವ ಹಲವು ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಈ ತಿಂಗಳಲ್ಲೇ ಆಚರಿಸಲ್ಪಡುತ್ತದೆ. ಏನೇ ಮಾಡು, ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂದು ಹೇಳುವುದುಂಟು. ಮನುಷ್ಯರಷ್ಟೇ ಅಲ್ಲ, ಪ್ರಕೃತಿ ಮಾತೆ ಕೂಡ ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತಾಳೆ. ಹಾಗಾಗಿ ಶ್ರಾವಣ ಮಾಸ ಎಂದರೆ ಎಲ್ಲೆಡೆ ಒಂದು ರೀತಿಯ ಸಂಭ್ರಮವೆಂದರು.

ಈ ಸಂದರ್ಭದಲ್ಲಿ ಎಸ್ ಎಸ್ ಕಾಂಬಳೆ, ಸಿದ್ಧಲಿಂಗಯ್ಯ ಹಿರೇಮಠ, ರವಿ ರಂಗೋಳಿ ಸೇರಿದಂತೆ ಇತರರು ಇದ್ದರು.