Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪಂಚಮಿಯ ದಿನ ಅನಾಥ ಮಕ್ಕಳಿಗೆ ಹಾಲು ಹಂಚಿದ ಯುವ ನಾಯಕ

localview news

ಗೋಕಾಕ: ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ಸದಸ್ಯರು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಲ್ಲ ನಾಗದೇವರಿಗೆ ಹಾಲು ಎರೆಯದೆ, ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿಯ ಬದಲು ಬಸವ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದರು.

ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ವತಿಯಿಂದ ನಗರದ ಶಿವ ಫೌಂಡೇಶನ್ ಅನಾಥಾಶ್ರಮದ ಮಕ್ಕಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಹಾಲು ವಿತರಣೆ ಮಾಡಿದರು.

ಕಲ್ಲ ನಾಗದೇವರಿಗೆ ಹಾಲು ಎರೆಯುವುದಕ್ಕಿಂತ ಬಡ ಮಕ್ಕಳಿಗೆ ನೀಡಬೇಕು. ಅದೆಷ್ಟೋ ಜನ ಆಹಾರವಿಲ್ಲದೆ, ಉಪವಾಸ ಇರುತ್ತಾರೆ. ಅಂತಹವರಿಗೆ ಹಾಲು, ಹಣ್ಣು, ಊಟ ನೀಡಿ ಹಬ್ಬ ಆಚರಣೆ ಮಾಡಬೇಕು. ಕುಡಿಯುವ ಹಾಲನ್ನು ಕಲ್ಲ ನಾಗಕ್ಕೆ ಹಾಕಿ ಹಾಳು ಮಾಡಬೇಡಿ ಎಂದು ರಾಹುಲ್ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ರಮೇಶ ಕೋಲಕಾರ, ಶಿವ ಫೌಂಡೇಶನ್ ಮುಖ್ಯಸ್ಥ ರಮೇಶ ಪೂಜೇರಿ, ಮುಖಂಡರಾದ ಬಿ.ಶಾನೂರ, ಪಾಂಡು ಮನ್ನಿಕೇರಿ, ಜುಬೇರ್ ಮಿರ್ಜಾಬಾಯಿ, ಸುನೀಲ ಮೇತ್ರಿ, ಎ.ಬಿ. ಖಾಜಿ ಸೇರಿ ವೇದಿಕೆಯ ಸದಸ್ಯರು ಹಾಗೂ ಇನ್ನಿತರರು ಇದ್ದರು.

ಕೆ.ಎಚ್.ಐ. ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕ ಹಾಗೂ ಮಾನವ ಬಂದುತ್ವ ವೇದಿಕೆ ದೂಪದಾಳ ಘಟಕದ ವತಿಯಿಂದ ಪಟ್ಟಣದ ಕೆ.ಎಚ್.ಐ. ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹಾಲು, ಹಣ್ಣುಹಂಪಲು ವಿತರಿಸಿ ಬಸವ ಪಂಚಮಿ ಆಚರಿಸಿದರು.

ತುಕ್ಕಾನಟ್ಟಿಯ ಬಾಗೇವಾಡಿ ಫೌಂಡೇಶನ್, ದೂಪದಾಳದ ಅಭಾಜಿ ಕರಿಯರ್ ಅಕಾಡೆಮಿ, ಮಹಾಲಕ್ಷ್ಮಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಾದ ಕಾಡೇಶ ತಳವಾರ, ಮಾನವೀಯತೆಯನ್ನು ಒಂದುಗೂಡಿಸುವ ವೇದಿಕೆಯ ಮಾನವ ಬಂಧುತ್ವ ವೇದಿಕೆ. ಮೌಢ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಾಗೂ ಪೌಷ್ಠಿಕಾಶವುಳ್ಳ ಹಾಲವನ್ನು ವ್ಯರ್ಥ ಮಾಡದೇ ಅಗತ್ಯವಿದ್ದವರಿಗೆ ನೀಡುವ ಉದ್ದೇಶದಿಂದ ವೇದಿಕೆಯ ವತಿಯಿಂದ ನಾಗರ ಪಂಚಮಿಯ ಬದಲು ಬಸವ ಪಂಚಮಿಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಮೂಲ ಪ್ರೇರಣೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರಾಗಿದ್ದಾರೆ ಎಂದು ಹೇಳಿದರು.

ನಾವು ಧರ್ಮದ ವಿರೋಧಿಗಳಲ್ಲ. ಹಬ್ಬಗಳನ್ನು ಎಲ್ಲರೂ ಆಚರಿಸಬೇಕು. ಆದರೆ, ಅವುಗಳಲ್ಲಿರುವ ಕೆಲವು ಮೌಢ್ಯದ ಆಚರಣೆಗಳಿಂದ ನಾವು ಹೊರಬರಬೇಕಿದೆ. ಈ ನಿಟ್ಟಿನಲ್ಲಿ ವೇದಿಕೆ ಶ್ರಮಿಸುತ್ತಿದೆ. ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಪೌಷ್ಠಿಕಾಂಶವುಳ್ಳ ಹಾಲನ್ನು ನಾಗರ ಪಂಚಮಿಯಂದು ಪೂಜೆಯ ನೆಪದಲ್ಲಿ ವ್ಯರ್ಥ ಮಾಡದೇ ಮಕ್ಕಳು, ಬಡವರು, ನಿರ್ಗತಿಕರಿಗೆ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ಘನಶ್ಯಾಮ, ಡಾ.ರಾಹುಲ್ ವೈದ್ಯ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪ್ರಕಾಶ ಡಾಂಗೆ, ಸಾಗರ ಭಾಗೇವಾಡಿ, ರೆಹಮಾನ್ ಮೊಕಾಶಿ, ರವಿ ನಾವಿ, ಮಂಜುಳಾ ರಾಮಘಾನಟ್ಟಿ, ಸಕ್ಕುಬಾಯಿ ಗಾಡಿವಡ್ಡರ, ಮಾರುತಿ ವಿಜಯನಗರ, ಪುಟ್ಟು ಖಾನಾಪುರೆ ಸೇರಿದಂತೆ ಇನ್ನಿತರರು ಹಾಜರಿದ್ದರು.