Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪಾ ಶಿವರುದ್ರಪ್ಪಾ ಕರಲಿಂಗನ್ನವರಿಗೆ ರಾಹುಲ್ , ಪ್ರಿಯಾಂಕಾ ಜಾರಕಿಹೊಳಿ ಸನ್ಮಾನ

localview news

ಗೋಕಾಕ:ಸ್ವಾತಂತ್ರೋತ್ಸವದ ಅಂಗವಾಗಿ ಅಕ್ಕತಂಗೇಹಾಳ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪಾ ಶಿವರುದ್ರಪ್ಪಾ ಕರಲಿಂಗನ್ನವರ ಅವರಿಗೆ ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ವತಿಯಿಂದ ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಶನಿವಾರ ಸನ್ಮಾನಿಸಿದರು.

ಈ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಲು ಹಿರಿಯರ ಸ್ವಾತಂತ್ರ್ಯಗಾರರ ಹೋರಾಟ ಪ್ರೇರಣೆ ಅಗತ್ಯವಿದೆ. ನಮ್ಮ ಯುವಕರ ಸಂಘಟನೆಯು ಬಲಿಷ್ಠವಾಗಿ ಬೆಳೆಯಬೇಕೆಂದರೆ, ಹಿರಿಯ ಹೋರಾಟಗಾರರ ಹಾದಿಯಲ್ಲಿ ಸಾಗಬೇಕು. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್ ಹೋರಾಟದ ಹಾದಿಯನ್ನು ಯುವಕರಿಗೆ ತಿಳಿಸಬೇಕಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹಗಲಿರುಳು ರಕ್ತ ಶುರಿಸಿದ್ದಾರೆ. ಇಂತಹ ದೇಶ ಪ್ರೇಮ ಹಿರಿಯರನ್ನು ಸದಾಕಾಲ ನೆನಪಿಸಬೇಕು ಎಂದು ರಾಹುಲ್ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಮಾತನಾಡಿ, ಕಾಂಗ್ರೆಸ್ ಇತಿಹಾಸ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಡಕವಾಗಿದೆ. ಈ ದೇಶಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ಮಹತ್ವದ ಪಾತ್ರ ವಹಿಸಿ, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿವರೆಗೂ ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಶ್ರಮಿಸುತ್ತಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಕಾಂಗ್ರೆಸ್ ಪಕ್ಷ ಉಪ್ಪಿನ ಸತ್ಯಾಗ್ರಹ , ಅಸಹಕಾರ ಚಳುವಳಿ, ಭಾರತ ಬಿಟ್ಟು ತೊಲಗಿ ಸೇರಿದಂತೆ ವಿವಿಧ ಹೋರಾಟಗಳನ್ನು ಮಾಡಿದ್ದಾರೆ. ಇವರ ಹೋರಾಟಗಳಿಂದ ನಾವು ಸ್ವತಂತ್ರವಾಗಿದ್ದೆವೆ. ಆದ್ದರಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಗಣ್ಯರನ್ನು ಕಾಂಗ್ರೆಸ್ ಪಕ್ಷದಿಂದ ಸನ್ಮಾನ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ, ಪಾಂಡು ಮನ್ನಿಕೇರ, ಬಸಣಗೌಡ ಹೊಳೆಯಾಚಿ, ಕಲ್ಪನಾ ದೋಷಿ, ಮಾರುತಿ ವಿಜಯನಗರ, ಪುಟ್ಟು ಖಾನಾಪೂರಿ, ಪ್ರವೀಳಾ ಗುಡ್ಡಾಕಾಯು, ಸುನೀಲ ಗುಡ್ಡಾಕಾಯು, ಬಸಣ್ಣನಗೌಡ ಹೊಳೆಹಟ್ಟಿ, ಮಾರುತಿ ಗುಟಗುದ್ದಿ, ವಿಠ್ಠಲ ಪರಸನ್ನವರ, ನಿಹಾಲ ಹುಲಿಕಟ್ಟಿ, ಮಂಜುನಾ ರಾಮಗಾನಟ್ಟಿ, ರಾಹುಲ ಬಡೇಸಗೊಳ, ಬಸಣ್ಣನಗೌಡ ಹೊಳೆಹಟ್ಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇತರರು ಇದ್ದರು.