Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಾಯಣ್ಣನಿಗೆ ಅವಮಾನ ಮಾಡಿದ ಕಿಡಿಗೇಡಿಗಳು

localview news

ಮುಖ್ಯಮಂತ್ರಿಯವರಿಂದ ದೇಶಭಕ್ತ ಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಮರ್ಪಣೆಗೆ ಆದೇಶ ಮಾಡಿದ್ದರೇ, ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಸ್ವಕ್ಷೇತ್ರ ಶಿಕಾರಿಪುರದಲ್ಲಿ ರಾತ್ರೋರಾತ್ರಿ ರಾಯಣ್ಣನವರಿಗೆ ಅಪಮಾನ ಮಾಡಿದ ಘಟನೆ ನಡೆದಿದೆ‌ಈಸೂರು ದಂಗೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ್ದ ಶಿಕಾರಿಪುರದಲ್ಲಿ, ಬ್ರಿಟಿಷರಿಗೆ ಸೋಲನ್ನುಣಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ತ್ಯಾಗ ಮಾಡಿದ ಹುತಾತ್ಮ,ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರಿಗೆ ಅನ್ಯಾಯ. ಇಂತಹ ಹೀನ ಕೃತ್ಯ ಮಾಡಿದವರಿಗೆ ಧಿಕ್ಕಾರವಿರಲಿ ಎಂದು ರಾಯಣ್ಣನ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನೇಕೊಟ್ಟ ಹುತಾತ್ಮ, ಸ್ವ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂತಹ ಮಹಾನ್‍ವೀರ ಹುಟ್ಟಿದ ದಿನಆಗಸ್ಟ್ 15, ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ರಾಯಣ್ಣನವರನ್ನು ಬ್ರಿಟಿಷರು ನೇಣಿಗೆ ಹಾಕಿದ್ದು ಜನವರಿ 26 ಅಂದು ಭಾರತ ದೇಶ ಗಣರಾಜ್ಯವಾದ ದಿನ. ಇಂತಹ ರಾಷ್ಟ್ರವೀರನನ್ನು ಪಡೆದ ಭಾರತ ಧನ್ಯವಾಗಿದೆ. ಇಂತಹ ಮಹಾನ್ ಪುರುಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ನಗರದಲ್ಲಿ ರಾತ್ರೋ ರಾತ್ರಿ ಹೇಡಿಗಳ ರೀತಿಯಲ್ಲಿ ತೆರೆವುಗೊಳಿಸಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅಪಮಾನ.

ಶಿಕಾರಿಪುರ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿರುವ ಭೂಮಿ, ಇಂತಹ ಭೂಮಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆಅವಮಾನ ಮಾಡಿರುವುದು ಈಸೂರು ದಂಗೆಗೂ ಮಾಡಿರುವ ಅವಮಾನ. ಮಾನ್ಯಶ್ರೀ ಬಸವರಾಜ ಬೊಮ್ಮಾಯಿಯವರುಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಲ್ಲಿಸಲು ಆದೇಶ ಹೊರಡಿಸಿದ್ದಾರೆ. ಅದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ದೇಶಭಕ್ತನ ಮೂರ್ತಿ ತೆರವುಗೊಳಿಸಲಾಗಿದೆ.

ಶಿವಮೊಗ್ಗದ ಸಂಸದರಾದ ಬಿ. ವೈ. ರಾಘವೇಂದ್ರರವರು, ಶಾಸಕರಾದ ಬಿ. ಎಸ್. ಯಡಿಯೂರಪ್ಪನವರು ಹಾಗೂತಾಲ್ಲೂಕು ಆಡಳಿತ ತನ್ನ ತಪ್ಪಿಗೆ ಕ್ಷಮೆಯಾಚಿಸಿ, ರಾಯಣ್ಣನವರ ಮೂರ್ತಿಯನ್ನು ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಬೇಕಾಗಿ ಹಾಲುಮತ ಮಹಾಸಭಾದವರು ಆಗ್ರಹ ಪಡಿಸಿದ್ದಾರೆ.