ವಿದ್ಯುತ್ ದ್ವೀಪಗಳಿಂದ ಕಂಗೊಳ್ಳಿಸುತ್ತಿರುವ ಉತ್ತರ ಕರ್ನಾಟಕದ ಶಕ್ತಿ ಸೌಧ
ಬೆಳಗಾವಿ :ಸ್ವಾತಂತ್ರ್ಯೋತ್ಸವದ ಅಂಗವಾಗಿ ದ್ವೀಪದ ಅಲಂಕಾರದಲ್ಲಿ ಕಂಗೊಳ್ಳಿಸುತ್ತಿರುವ ಉತ್ತರ ಕರ್ನಾಟಕದ ಶಕ್ತಿಸೌಧ ಸುವರ್ಣ ವಿಧಾನ ಸೌಧ.
ಉತ್ತರ ಕರ್ನಾಟಕದ ಶಕ್ತಿಸೌಧ ಎಂದು ಕರೆಸಿಕೊಳ್ಳುವ ಬೆಳಗಾವಿಯ ಸುವರ್ಣ ವಿಧಾನ ಸೌಧ ನಾಳೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ನೋಡುಗರ ಹುಬ್ಬೇರಿಸುವಂತೆ ಮಾಡಿತ್ತು.
ಕ್ರಿಯಾಶೀಲತೆ ಇಲ್ಲದೆ ಬಿಳಿ ಆನೆಯಂತಾಗಿದ್ದ ಸುವರ್ಣ ವಿಧಾನಸೌಧ ಕೇವಲ ಅಧಿವೇಶನದಲ್ಲಿ ಸಮಯದಲ್ಲಿ ಮಾತ್ರ ರಾತ್ರಿ ವೇಳೆ ಮಿಂಚುತ್ತಿತ್ತು. ಸದ್ಯ ಸ್ವಾತಂತ್ರ್ಯ ದಿನವನ್ನು ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಕ್ತಿ ಸೌಧಕ್ಕೆ ವಿದ್ಯುತ್ ದ್ವೀಪಾಲಂಕಾರ ನೋಡುಗರ ಮನಸೋರೆಗೊಂಡಿತ್ತು.ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಕ್ರೀಡಾಂಗಣ, ಮಹಾನಗರ ಪಾಲಿಕೆ, ಪ್ರಾದೇಶಿಕ ಆಯುಕ್ತರ ಕಚೇರಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಅಲಂಕಾರಿಕ ವಸ್ತುಗಳು ನೋಡುಗರ ಕಣ್ಣು ಕುಕ್ಕುವಂತಿತ್ತು.