Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸ್ವಾತಂತ್ರ್ಯ ಪಡೆದಿರುವ ನಾವು ಸತ್ಕಾರ್ಯ ಮಾಡೋಣ: ಜಕನೂರ

localview news

ಹೊಸೂರ: ಲಕ್ಷಾಂತರ ದೇಶಭಕ್ತ ವೀರರ ಪ್ರಾಣಾರ್ಪಣೆಯಿಂದ ಪಡೆದಿರುವ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ನಾವೆಲ್ಲ ಸಮಾಜದದಲ್ಲಿ ಸತ್ಕಾರ್ಯ ಮಾಡುವದರೊಂದಿಗೆ ನಮ್ಮ ಋಣ ತೀರಿಸೊಣ ಎಂದು ಡಾ.ರವೀಂದ್ರ ಜಕನೂರ ಹೇಳಿದರು.

ಅಖಂಡ ಭಾರತ ಸಂಕಲ್ಪ ದಿನ ಹಾಗೂ 75ನೇ ಆಜಾದಿ ಅಮೃತ ಅಂದೊಲನ ಅಂಗವಾಗಿ ಶನಿವಾರ ರಾತ್ರಿ 12 ಘಂಟೆಗೆ ಧ್ವಜಾರೋಹಣ ಹಾಗೂ ಮುಕ್ತ ಓಟದ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬ್ರಿಟಿಷ್ ರು ಮದ್ಯರಾತ್ರಿಯಲ್ಲಿ ದೇಶ ಬಿಟ್ಟು ಹೋಗುವಾಗ ದೇಶ ವಿಭಜನೆ ಮಾಡುವ ಮೂಲಕ ಭಾರತಕ್ಕೆ ಅಭಿವೃದ್ಧಿ ಹೊಂದಲಾರದಂತ ಕುತಂತ್ರಮಾಡಿದರು ಇಂದು ದೇಶ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಹೊಂದುತಿದ್ದು ಜಗತ್ತಿನ ಬಲಾಢ್ಯ ದೇಶದೊಂದಿಗೆ ಸಮಾನವಾಗಿ ನಿಲ್ಲುವ ಶಕ್ತಿ ಬಂದಿದೆ ಎಂದರು. ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ, ತಾಪಂ ಮಾಜಿ ಸದಸ್ಯ ಜಗದೀಶ ಬೂದಿಹಾಳ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಅನೇಕರು ಹುತಾತ್ಮರಾದರೆ ಸ್ವತಂತ್ರ ಭಾರತದ ನಂತರ ಎದುರಿಸಿದ ಯುದ್ದಗಳಲ್ಲಿ ಭಾರತಾಂಬೆಯ ಅನೇಕ ವೀರರನ್ನ ಕಳೆದುಕೊಂಡಿದ್ದೆವೆ. ಹುತಾತ್ಮ ಯೋಧರ ಹೊರಾಟ ಎಂದಿಗೂ ವ್ಯರ್ಥವಾಗಲು ಈ ದೇಶದ ಜನತೆ ಬಿಟ್ಟಿಲ್ಲ. ಇಂದಿಗೂ ಲಕ್ಷಾಂತರ ಯುವಕರು ಭಾರತೀಯ ಸೈನ್ಯ ಸೇರುವ ಉತ್ಸಹದಲ್ಲಿದ್ದಾರೆ.

ಇಂತಹ ಯುವಕರಿಗೆ ನವ ಸ್ಪೂರ್ತಿ ತುಂಬಲೆಂದು ರನ್ ಪಾರ್ ಯುನಿಟಿ ಅಡಿಯಲ್ಲಿ ಮುಕ್ತ ಓಟದ ಸ್ಪರ್ಧೆ ಎರ್ಪಡಿಸಿ ರಾಜ್ಯದ ನಾನಾ ಭಾಗದಿಂದ ಬಂದಿರುವ ಸ್ಪರ್ಧಾಳುಗಳಿಂದ ಗ್ರಾಮೀಣ ಪ್ರತಿಭೆಗಳಿಗೆ ನವಚೇತನ ಮೂಡಿದಂತಾಗಿದೆ ಎಂದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಅಖಂಡ ಭಾರತ ತುಂಡಾದ ಸಮಯದಲ್ಲಿ ಪ್ರತಿ ವರ್ಷ ಧ್ವಜಾರೋಹಣ ಮಾಡುವ ಮೂಲಕ ಪ್ರತಿಯೊಬ್ಬ ಯುವಕರು ಅಖಂಡ ಭಾರತದ ಪುನರ್ನಿರ್ಮಾಣಕ್ಕೆ ಕಂಕಣ ಬದ್ದರಾಗುವ ಸಂಕಲ್ಪಕ್ಕಾಗಿ ಮದ್ಯರಾತ್ರಿ 12 ಘಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಸ್ವಾತಂತ್ರ್ಯತೊಇತ್ಸವದ ಅಮೃತ ಮಹೋತ್ಸವ ಅಂಗವಾಗಿ ಎರ್ಪಡಿಸಿದ್ದ ಮುಕ್ತ ಓಟದ ಸ್ಪರ್ಧೆಯಲ್ಲಿ ಮಂಡ್ಯ, ಮೈಸೂರು, ಬೆಂಗಳೂರು, ಬಾಗಲಕೋಟ ಹಾವೇರಿ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾಳುಗಳು ಭಾಗವಹಿಸಿ ಆಜಾದಿ ಅಂದೊಲನದ ರನ್ ಪಾರ್ ಯುನಿಟ್ ಕಾರ್ಯವನ್ನು ಯಶಸ್ವಿಯಾಗಿ ನೆರವೆರಿಸಿದರು ಎಂದರು.

ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಾದ ಬಸವರಾಜ ಶಿದ್ನಾಳ, ಮಂಜು ಕಿತ್ತೂರ, ಬಸವರಾಜ ಗಾಣಿಗೇರ ಸಮ್ಮುಖದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸೋಮಲಿಂಗಪ್ಪ ಮೂಲಿಮನಿಯವರಿಂದ ಧ್ವಜಾರೋಹಣ ನೇರವೆರಿಸಿದರು. ವೇದಿಕೆಯ ಮೇಲೆ ಪ್ರಶಸ್ತಿ ದಾನಿಗಳಾದ ಗ್ರಾಪಂ ಸದಸ್ಯ ಮುನೀರ ಶೇಖ, ಕಿರಣ ಬಾಳೆಕುಂದರಗಿ, ಮಲ್ಲಿಕಾರ್ಜುನ ವಕ್ಕುಂದ,ಜಗದೀಶ ಬೂದಿಹಾಳ, ಅಪ್ಪಯ್ಯ ಬೋಳೆತ್ತಿನ, ಸಚಿನ ಕಲಘಟಗಿ,ಶಿವು ಅಪ್ಪೊಜಿ, ಗೌಡಪ್ಪ ಹೊಸಮನಿ, ಎಸ್.ಕೆ.ಮೆಳ್ಳಿಕೇರಿ, ,ಮೋಹನ ವಕ್ಕುಂದ, ಶೇಖರ ಇಳಿಗೇರ, ಅಜ್ಜಪ್ಪ ಸಂಗೋಳ್ಳಿ ಮಂಜು ಮೂಲಿಮನಿ, ಮಂಜು ಬುಡಶೆಟ್ಟಿ, ನವೀನ ಗಣಾಚಾರಿ,ಪ್ರದೀಪ ವಕ್ಕುಂದ, ನಿತ್ಯಾನಂದ ಬೋಳೆತ್ತಿನ, ಸುನೀಲ ಪಾಟೀಲ, ಶಿವಪ್ಪ ಸಂಗೊಳ್ಳಿ,ಸೋಮಲಿಂಗಪ್ಪ ಕೋಟಗಿ, ಸೋಮಪ್ಪ ಗಣಾಚಾರಿ ಸುಭಾಷ ಸಂಗೋಳ್ಳಿ ಇತರರು ಇದ್ದರು.