Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿಕೇಂದ್ರವನ್ನಾಗಿಸಲು ವಿನಂತಿ

localview news

ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಜನಸಮುದಾಯದ ಭಾವನೆಗಳಿಗೆ ಪೂರಕವಾಗಿ ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿಕೇಂದ್ರವನ್ನಾಗಿಸಲು ವಿನಂತಿಸಿದ್ದಾರೆ.

ಭಾಷಾವಾರು ಪ್ರಾಂತಗಳ ರಚನೆಯಾದ ನಂತರ ಇಂದಿನವರೆಗಿನ ಸುಧೀರ್ಘ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲವೆಂಬ ಖೇಧಕರ ಭಾವನೆ ಈ ಭಾಗದ ಜನತೆಯದಾಗಿದೆ. ಅದಕ್ಕೆ ಪೂರಕವಾಗಿಯೇ ಈ ಭಾಗದ ಜನತೆ ನಿರಂತರವಾಗಿ ಈ ಕುರಿತು ಪಕ್ಷಾತೀತವಾದ ಹೋರಾಟಗಳ ಮುಖಾಂತರ ಸರಕಾರದ ಗಮನಸೆಳೆಯಲು ಪ್ರಯತ್ನಿಸಿದ್ದಾರೆ.

ಆದರೆ ಶ್ರೀ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮತ್ತು ಶ್ರೀ ಯಡಿಯೂರಪ್ಪ ನವರು ಉಪಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಣಯ ಕೈಗೊಂಡು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಿದ ಸಂದರ್ಭದಲ್ಲಿ ಈ ಭಾಗದ ಜನತೆ ತಮ್ಮ ಕನಸು ಸಾಕಾರಗೊಳ್ಳುವ ಮಹಾದಾಸೆ ಹೊಂದಿದ್ದರು. ಹಾಗೂ ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಆಡಳಿತಾತ್ಮಕ ಬದಲಾವಣೆಯ ನಿರೀಕ್ಷೆಗೆ ಅನುಗುಣವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಕಾರ್ಯದರ್ಶಿ ಮಟ್ಟದ ಸರಕಾರದ ಪ್ರಮುಖ ಕಾರ್ಯಾಲಯಗಳನ್ನು (ಸೆಕ್ರೇಟರಿಯಟ್) ಪ್ರಾರಂಭಿಸುವ ಮೂಲಕ ಈ ಭಾಗದ ಜನತೆಯ ಆಡಳಿತಾತ್ಮಕ ಕಾರ್ಯಗಳಿಗೆ ದೊರೆಯಬೇಕಾದ ಅಂತಿಮ ಆದೇಶ ಬೆಳಗಾವಿಯ ಸುವರ್ಣಸೌಧದಿಂದ ದೊರೆಯಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಬೆಳಗಾವಿಯಲ್ಲಿ ಪ್ರತಿವರ್ಷ ಅರ್ಧ ಅವಧಿಯ ವಿಧಾನಸಭೆ ಅಧಿವೇಶನ ಇಲ್ಲಿಯೇ ನಡೆಯಬೇಕೆಂಬ ಕೊರಿಕೆಯನ್ನು ಸರಕಾರದ ಮುಂದೆ ಇಟ್ಟಿದ್ದರು.

ಹಾಗೆಯೇ ಗಡಿ ಸಮಸ್ಯೆಗೂ ಸಹ ಅಂತಿಮ ವಿಧಾಯ ಹೇಳುವ ದೃಷ್ಟಿಕೋನದಿಂದ ಬೆಳಗಾವಿಯನ್ನು ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಆದರೆ ಬೆಳಗಾವಿಯ ಸುವರ್ಣಸೌಧ ಅಸ್ತಿಹಕ್ಕೆ ಬಂದು ಸುಮಾರು 15 ವರ್ಷಗಳು ಗತಿಸಿದರೂ ಈ ಪ್ರಮುಖ ಬೇಡಿಕೆಗಳು ಈಡೇರದೇ ಇರುವುದು ಖೇಧದ ಸಂಗತಿಯಾಗಿದ್ದು, ಈ ಭಾಗದ ಜನರಲ್ಲಿ ಭ್ರಮನಿರಸನವನ್ನುಂಟುಮಾಡಿದೆ. ಇದೇ ಕಾರಣದಿಂದಾಗಿ ಮಠಾಧೀಶರು, ಸಂಘಟನೆಗಳು, ಉತ್ತರ ಕರ್ನಾಟಕದ ಅಭಿವೃದ್ಧಿಪರ ಇರುವ ಚಿಂತಕರು ನಿರ್ಮಾಣವಾಗಿದೆ. ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತ ನಿರ್ಣಾಯವಾಗಿದೆ.

ಆದರೆ, ಈ ಸಂದರ್ಭದಲ್ಲಿಯೇ ಉತ್ತರ ಕರ್ನಾಟಕ ಭಾಗದ ಚಿಂತಕರು ಮತ್ತು ಹೋರಾಟಗಾರರಾದ ತಾವುಗಳು ರಾಜ್ಯದ ಮತ್ತು ಉತ್ತರ ಕರ್ನಾಟಕ ಭಾಗದ ಸಮಗ್ರ ಚಿತ್ರನ ತಿಳಿದವರಾಗಿದ್ದು, ಸಮರ್ಥ ಆಡಳಿತಗಾರರಾಗಿದ್ದೀರಿ, ಹಾಗೆಯೇ ಈ ಹಿಂದಿನ ರಾಜಕೀಯ ಜೀವನದಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಮುಖ ಬೇಡಿಕೆಗಳ ಸಕ್ರೀಯವಾಗಿ ಹೋರಾಟಗಳಲ್ಲಿ ಭಾಗವಹಿಸಿದ್ದಿರಿ. ಈಗ ತಮ್ಮ ನೇತೃತ್ವದಲ್ಲಿಯೇ ರಾಜ್ಯ ಸರಕಾರ ರಚನೆಯಾಗಿರುವದರಿಂದ ಮುಖ್ಯಮಂತ್ರಿಗಳಾದ ತಾವು ಉತ್ತರ ಕರ್ನಾಟಕ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಿ, ಐತಿಹಾಸಿಕ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ರಾಜಕೀಯ ಇಚ್ಚಾಶಕ್ತಿಯನ್ನು ಪ್ರದರ್ಶಿಸುತ್ತೀರೆಂಬ ಆಶಾಭಾವನೆ ಮತ್ತು ಬಲವಾದ ನಂಬಿಕೆ ನಮ್ಮದಾಗಿದೆ. ಕಾರಣ ಈ ಕೆಳಗಿನ ಮೂರು ಪ್ರಮುಖ ಬೇಡಿಕೆಳನ್ನು ಈಡೇರಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿರೆಂಬ ವಿಶ್ವಾಸ ನಮ್ಮದಾಗಿದೆ.

1. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಜ್ಯದ ಆಡಳಿತಾತ್ಮಕ ವ್ಯವಸ್ಥೆಯ ಕಾರ್ಯದರ್ಶಿ ಮಟ್ಟದ ಕಾರ್ಯಾಲಯಗಳನ್ನು ಪ್ರಾರಂಭಿಸಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನಿಯೋಜನೆಗೊಳಿಸುವ ಮೂಲಕ ಸೆಕೇಟರಿಯಟ್ ಪ್ರಾರಂಭಿಸುವದು. ರಾಜ್ಯಮಟ್ಟದ ಎಲ್ಲ ಇಲಾಖೆಗಳ ನಿರ್ದೇಶಕ ಮಟ್ಟದ ಕಾರ್ಯಾಲಯಗಳನ್ನು ಬೆಳಗಾವಿಯ ಪ್ರಾರಂಭಿಸುವದು.
2. ಬೆಳಗಾವಿಯ ಸುವರ್ಣಸೌಧದಲ್ಲಿ ವರ್ಷದ ಅರ್ಧ ಅವಧಿಯ ಅದಿವೇಶನವನ್ನು ನಡೆಸುವದು.
3. ಬೆಳಗಾವಿಯನ್ನು ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಘೋಷಿಸುವದು.

ಮಾನ್ಯರಾದ ತಾವುಗಳು ನಮ್ಮ ಈ ಮೂರು ಪ್ರಮುಖ ಬೇಡಿಕೆಗಳಿಗೆ ಸ್ಪಂಧಿಸಿ ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿರೆಂಬ ಭರವಸೆ ನಮ್ಮದಾಗಿದೆ. ಈ ಕುರಿತು ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಮತ್ತು ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಿಸಿದ್ದ ಮನವಿ ಪತ್ರಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಹೇಳಿದ್ದಾರೆ.