Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೃಷಿ ಮಸೂದೆ ತಡೆಹಿಡಿರಿ:ಕೋಡಿಹಳ್ಳಿ

localview news

ಬೆಳಗಾವಿ:ಕಾವೇರಿ, ಮಹದಾಯಿಯಲ್ಲಿ ರಾಜಕೀಯ ಡ್ರಾಮಾ ಆಗಬಾರದು. ಈ ಎರಡು ನದಿಯ ವಿಚಾರವಾಗಿ ಸರಕಾರ ವಿಳಂಬ ನೀತಿ ಅನುಸರಿಸಿದರೆ ನಾವೇ ಅಡಿಗಲ್ಲು ಹಾಕಿ ಯೋಜನೆ ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷ್ಣಾಗೆ ಸಂಭಂದಿಸಿದಂತೆ ಸಕಾಲಕ್ಕೆ‌ ಯೋನನೆ ತೆಗೆದಯಕೊಂಡು ಮಾಡಲಾಗುವುದು ಈಗಾಲೇ ಸರಕಾರ ಹೇಳಿದೆ. ಕೃಷ್ಣಾದ ನ್ಯಾಯಾಧೀಕರಣದ ತೀರ್ಪು ಬಂದರೂ ಕೂಡ ದೊಡ್ಡ ಪ್ರಮಾಣದಲ್ಲಿ ಕೃಷ್ಣಾ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯೋಜನೆಯನ್ನು ಅನುಷ್ಠಾನ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ನೀರನ್ನು ಬಳಕೆ ಮಾಡಲು ಮೇಕೆದಾಟು ಯೋಜನೆಯಲ್ಲಿ ಅನುಷ್ಠಾನ ಮಾಡಿದರೆ ನಾವು ಆ ನೀರನ್ನು ಬಳಕೆ ಮಾಡಿಕೊಳ್ಳಲು ಅನಕೂಕವಾಗುತ್ತದೆ. ಮಹದಾಯಿ ನದಿ ವಿಚಾರವನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಾಡು ಮಾಡಿದ್ದಾರೆ‌. ಆದ್ದರಿಂದ ಗೋವಾದವರು ಈಗ ಪ್ರಶ್ನೆ ಮಾಡಲು ಪ್ರಾರಂಭ ಮಾಡಿದ್ದಾರೆ‌. ಮಹದಾಯಿ ಮತ್ತು ಕಾವೇರಿ ವಿಚಾರದಲ್ಲಿ ಸರಕಾರದ ವಿಳಂಬ ನೀತಿ ಮುಂದುವರೆದರೆ ನಾವೇ ಅಡಿಗಲ್ಲು ಹಾಕಿ ನಾವೇ ಕಾಮಗಾರಿಯನ್ನು ಪ್ರಾರಂಭ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು‌.

ಇಡೀ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸಾರಿಗೆ ನೌಕರರಿಗೆ ಮಲತಾಯಿ ಧೋರಣೆ ಮುಂದುವರೆಯಬಾರದು ಆ.27 ರಂದು ಸಾರಿಗೆ ನೌಕರರ ಸಭೆ ಕರೆಯಲಾಗಿದ್ದು, ಸೆ.6 ರಿಂದ ಯಾವ ರೀತಿ ಹೋರಾಟ ಮಾಡಬೇಕೆಂಬ ಚರ್ಚೆ ನಡೆಸಲಾಗುವುದು ಎಂದರು‌. ಸಾರಿಗೆ ನೌಕರರಿಗೆ ಪ್ರಮುಖ ಬೇಡಿಕೆಯನ್ನು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿಭಟನೆಯಲ್ಲಿ ಗುರುತಿಸಿಕೊಂಡವರಿಗೆ ಸರಕಾರ ಅವರನ್ನು ಕೆಲಸದಿಂದ ವಜಾ ಮಾಡಿದ್ದು ಖಂಡನೀಯ.

ಇದು ಸರಕಾರ ತಪ್ಪು ನಿರ್ಧಾರ ಕೈಗೊಂಡಿದ್ದಾರೆ. ನಮಗೂ ನ್ಯಾಯಯುತ ಜೀವನ ನಡೆಸಲು ಬಿಡುತ್ತಿಲ್ಲ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಸರಕಾರ ಅದಕ್ಕೆ ಮನ್ನಣೆ ನೀಡಬೇಕೆಂದರು.

ಖಾಸಗಿ ಸಂಸ್ಥೆಯನ್ನು ಉದ್ದಾರ ಮಾಡುವಲ್ಲಿ ಸಂಘಟನಾ ಶಕ್ತಿಯನ್ನು ಹತ್ತಿಕ್ಕುವ ಹುನ್ನಾರ ಸರಕಾರ ಮಾಡುತ್ತಿದೆ. ಸಾರಿಗೆ ಸಂಸ್ಥೆ ದೊಡ್ಡದಾಗಿದ್ದು, ಸರಕಾರದ ಧೋರಣೆ ಸರಿಯಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ಪ್ರವೇಶ ದ್ವಾರದಲ್ಲಿ ರೈತರು ಸತ್ಯಾಗ್ರಹ‌ ಮಾಡುತ್ತಿದ್ದಾರೆ. ಇದನ್ನು ಕೈ ಬಿಡಬೇಕೆಂದು ಒತ್ತಾಯವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಕೃಷಿ ಮಸೂದೆಯ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ ತಿಳುವಳಿಕೆ ಹೇಳಿದೆ ಆದರೂ ಕೃಷಿ ಮಸೂದೆ ಅಂಗಿಕಾರ ಮಾಡಿರುವುದು ದುರ್ದೈವದ ಸಂಗತಿ ಎಂದರು.

ದೇಶದಲ್ಲಿ ಸುಮಾರು 16 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಮಾಡುವ ರಾಜ್ಯವಿದೆ. ಕರ್ನಾಟಕ ರಾಜ್ಯ ಮೂರು ಕೃಷಿ ಮಸೂದೆಯನ್ನು ತಿದ್ದುಪಡಿ ಮಾಡಿರುವುದು ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಮಾಡಿದರು. ಇದನ್ನು ತಡೆ ಹಿಡಿಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ ಎಂದರು.