Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪ್ರತ್ಯೇಕ ಗ್ರಾಮ ಪಂಚಾಯತಿಗೆ ಬೇಡಿಕೆ :ಮನಿಯದ ಸರ್ಕಾರ

localview news

ಬೆಳಗಾವಿ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಮಜರೆ ಗ್ರಾಮ ಫರೀದಖಾನವಾಡಿ ಹಾಗೂ ವಿನಾಯಕವಾಡಿ, ರಹವಾಸಿಗಳ ವಿನಂತಿ,ಕಳೆದ್ 6 ತಿಂಗಳಿಂದ ಪ್ರತ್ಯೇಕ ಗ್ರಾಮ ಪಂಚಾಯತಿ ಆಗುವ ಬಗ್ಗೆ ದಿನಾಂಕ 23/03/2021 ರಂದು ಮನವಿಯನ್ನು ನೀಡಿದ್ದರು ಆದರೆ ಇವರೆಗೂ ಯಾವುದೇ ಕ್ರಮಗಳು ಕೈಗೊಂಡಿರುವುದಿಲ್ಲಾ ಮೊದಲು ಮಾನ್ಯ ತಹಶೀಲದಾರ ಕಾಗವಾಡ ಇವರಿಗೆ 11/02/2021 ರಂದು ಅವರಿಗೆ ಮನವಿಯನ್ನು ಸಲ್ಲಿಸಿ ಪುರಸಭೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಪುರಸಭೆ ಯಾಗಿರುವುದರಿಂದ ಸಾಕಷ್ಟುಕರಗಳು ತೆರೆಗೆಗಳು ಗ್ರಾಮೀಣ ಶಿಕ್ಷಣದಿಂದ ವಂಚಿತರಾಗುವುದು ಘನ ಕರ್ನಾಟಕ ಸರಕಾರ ಹಾಗೂ ಘನ ಭಾರತ ಸರಕಾರದ ಯೋಜನೆಗಳು ಸದುಪಯೋಗವಾಗದೆ ಗ್ರಾಮಗಳು ರೈತಾಪಿ ಕೂಲಿಕಾರರು ಹೊಂದಿರುವ ಗ್ರಾಮಗಳಾಗಿದ್ದು, ನಾವು ಪುರಸಭೆಗೆ ಕರಗಳು ಮತ್ತು ಹೆಚ್ಚಿನ ತೆರಗೆಗಳು ಭರಿಸುವಷ್ಟು ಶಕ್ತಿ ಇರುವುದಿಲ್ಲಾ ಗ್ರಾಮವೂ 6000 ಸಾವಿರ ಜನ ಸಂಖ್ಯೆ ಹೊಂದಿರುವ ಗ್ರಾಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ 3000 ಜನ ಸಂಖ್ಯೆ ಹೊಂದಿರುವ ಗ್ರಾಮಪಂಚಾಯತಿಗಳನ್ನು ಗ್ರಾಮಪಂಚಾಯತಿಗಳವಾಗಿ ಸರಕಾರ ಮಾಡಿರುತ್ತದೆ. ಸದರಿ ಗ್ರಾಮವು ಪುರಸಭೆ ವ್ಯಾಪ್ತಿಯಿಂದ 6 ಕಿಮಿ ಅಂತರದಲ್ಲಿರುತ್ತದೆ ಅಂತಾ ಮಾನ್ಯ ತಹಶೀಲದಾರ ಅವರಿಗೆ ಮನವಿ ಸಲ್ಲಿಸಿ ಅಳಲನ್ನು ತೋರಿಕೊಂಡಿದ್ದಾರೆ ' ಹಾಗೂ ಮಾನ್ಯ ಉಪವಿಭಾಗಾಧಿಕಾರಿಗಳು ಚಿಕ್ಕೋಡಿ ಇವರಿಗೆ ದಿನಾಂಕ 11/02/2021 ರಂದು ಹಾಗೂ 23/03/2021 ರಂದು ಸಹ ಮನವಿಯನ್ನು ನೀಡಿದ್ದಾರೆ. ಅದೇ ರೀತಿ ಮಾನ್ಯ ಮುಖ್ಯಾಧಿಕಾರಿಗಳು ಪುರಸಭೆ ಉಗಾರ ಖುರ್ದ, ಇವರಲ್ಲಿಯೂ ಸಹ 11/02/2021 ರಂದು ಮನವಿಯನ್ನು ಮಾಡಿರುತ್ತೇವೆ ಎಂದು ಹೇಳಿದ್ದಾರೆ ಹಾಗೂ ಶ್ರೀ ಶ್ರೀಮಂತ ಬಾ ಪಾಟೀಲ ಮಾನ್ಯ ಜವಳಿ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವರು ಕರ್ನಾಟಕ ಸರಕಾರ ಬೆಂಗಳೂರು ಹಾಗೂ ಶಾಸಕರು ಕಾಗವಾಡ ಇವರಲ್ಲಿ ದಿನಾಂಕ 28/02/2021 ರಂದು ಮನವಿಯನ್ನು ಮಾಡಿ ಹಾಗೂ ಮಾನ್ಯ ಶ್ರೀ ಲಕ್ಷ್ಮಣ ಸಂಗಪ್ಪಾ ಸವದಿ ಉಪಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಇವರಲ್ಲಿ ದಿನಾಂಕ 28/02/2021 ರಂದುಮನವಿಯನ್ನು ಸಲ್ಲಿಸಿದ್ದೇವೆ ಅದೇ ರೀತಿ ಮಾನ್ಯ ಶ್ರೀ ಮಹಾಂತೇಶ ಕವಟಗಿಮಠ ಮಾನ್ಯ ವಿಧಾನ ಪರಿಷತ ಸಚೇತಕರು ಬೆಂಗಳೂರು ಕರ್ನಾಟಕ ಸರಕಾರ ಇವರಲ್ಲಿ ದಿನಾಂಕ 28/02/2021 ಮನವಿಯನ್ನು ಸಲ್ಲಿಸಿದೇವೆ ಮಾನ್ಯ ಸಂಸದರು ಶ್ರೀ ಅಣ್ಣಾಸಾಹೇಬ ಶಂಕರ ಜೋಲೆ ಸಂಸದರು ಭಾರತ ಸರಕಾರ ನವದೆಹಲಿ, ಇವರಲ್ಲಿ ದಿನಾಂಕ 26/02/2021 ರಂದು ಮನವಿ ಮಾಡಿರುತ್ತೇವೆ. ಅವರು ತಮ್ಮಗೆ 01/03/2021 ರಂದು ಸದರಿ ಗ್ರಾಮಪಂಚಾಯತಿಯ ಬೇಡಿಕೆಯಬಗ್ಗೆ, ಅವರ ಪತ್ರ ಸಂಖ್ಯೆ: 34/2021 ತಮ್ಮಲಿ ಸೂಕ್ತ ಕ್ರಮಕೈಗೊಳಲು ತಮ್ಮ ಪತ್ರದ ಮುಖಾಂತರ ತಿಳಿಸಿರುತ್ತಾರೆ ಈ ವಿನಂತಿಗಳನ್ನು ನೀಡಿದರು ಕೋಡಾ ಯಾವುದೇ ಗ್ರಾಮವಂಚಾಯತಿಯ ದಾಖಲೆ ಸಂಗ್ರಹಣೆಯಾಗಲ್ಲಿ ಗ್ರಾಮದ ಮಾಹಿತಿಯಣಾಗಲ್ಲಿ ಅಧಿಕಾರಿಗಳು ನಮ್ಮ ಕಡೆಗಳಿಂದ ಮಾಹಿತಿ ಪಡೆದಿರುವುದಿಲ್ಲಾ ನಮ್ಮ ಸದರಿ ಗ್ರಾಮವು ಈ ಮುಂಚೆಯೆ ಕಂದಾಯ ಗ್ರಾಮವಾಗಿ ಹಲವಾರು ವರ್ಷಗಳು ಕಳೆದಿವೆ ಎಂದು ಹೇಳಿದ್ದಾರೆ.

ಗ್ರಾಮವು ತನ್ನದೇಯಾದ ಭೌಗೋಳಿಕ ವಿಸ್ತೀರ್ಣ ಹೊಂದಿರುತ್ತದೆ. ನಾವು ಈ ಮುಂಚೆ ಉಗಾರ ಪುರಸಭೆ ಇವರಲ್ಲಿ ಧರಣಿಸಹ ಮಾಡಿರುತ್ತೇವೆ ನಮ್ಮ ಕೂಗು ಯಾರಿಗೂ ಕೇಳುತಿಲ್ಲ ನಮ್ಮ ಪ್ರತ್ಯೇಕ ಗ್ರಾಮಪಂಚಾಯತಿಯ ಬೇಡಿಕೆ 15 ದಿನಗಳ ಅವಧಿಗಳಲ್ಲಿ ಕಾರ್ಯರೂಪಕ್ಕೆ ಬರದೇಹೂದಲ್ಲಿ ನಾವು ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಹಾಗೂ ಸರಕಾರವು ಪುರಸಭೆಯ ಚುನಾವಣೆಯ ಬಗ್ಗೆ ತಯಾರಿಯಲ್ಲಿ ಇರುತ್ತಾರೆ ನಾವು ಚುನಾವಣೆ ಬಹಿಷ್ಕಾರ ಸಹ ಮಾಡಲಿದ್ದೇವೆ. ಮಾನ್ಯರಲ್ಲಿ ನಾವು ವಿನಂತಿ ಬೇಡಿಕೆ ಇಡೇರಿಸಿ ಗ್ರಾಮಗಳ ಉದ್ಧಾರವೇ ದೇಶದ ಪ್ರಗತಿ ಅಂತಾ ಹೇಳಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಕನಸನ್ನು ನನಸು ಮಾಡಲು ಹಾಗೂ ಗ್ರಾಮದ ಸರ್ವೋತೋಮುಖ ಅಭಿವೃದ್ಧಿಗೆ ಸಹಕರಿಸಿ ಅಂತಾ ತಮ್ಮಲಿ ಮನವಿಯನ್ನು ಮಾಡುತ್ತಿದೇವೆ ಎಂದು ಹೇಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.