Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಾಹುಲ್ ಜಾರಕಿಹೊಳಿ ಭೇಟಿಯಾದ ಗೋಕಾಕ ರಾಷ್ಟ್ರೀಯ ಕರಾಟೆ ಸ್ಪರ್ಧೆ ಯವಕರು

localview news

ಗೋಕಾಕ: ಅಗಸ್ಟ್ 28 ರಿಂದ 30 ರವರೆಗೆ ನವದೆಹಲಿಯಲ್ಲಿ ನಡೆದಂತಯ ಯೂತ್ ಗೇಮ್ಸ್ ಫಡೇರೆಷಣ ಆಫ್ ಇಂಡಿಯಾ ದ ಯುತ್ ಗೇಮ್ಸ್ ಆಲ್ ಇಂಡಿಯಾ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗೋಕಾಕದ ಯುವಕರು ವಿಜೇತರಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಭೇಟಿಯಾದರು.

ಇಲ್ಲಿನ ಹಿಲ್ ಗಾರ್ಡನ್ ಕಛೇರಿಯಲ್ಲಿ ಬುಡೊಬಾಸ್ ಇಂಟರ್ ನ್ಯಾಶನಲ್ ಕರಾಟೆ ಡು ಅಕಾಡೆಮಿ ಗೋಕಾಕದ ತರಬೇತಿಗಾರರಾದ ದುರ್ಯೋಧನ ಕಡಕೋಳ ಹಾಗೂ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಮಹೇಶ್ ಜೊತೆನವರ, ಓಂಕಾರ ದಂಡಾಪುರ, ಪ್ರಜ್ವಲ ನಾಯಕ ಅವರು ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.

ನಂತರ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ ಯುವ ಜನತೆ ಕ್ರೀಡೆಯಲ್ಲಿ ಹೆಚ್ಚಿಗೆ ಭಾಗವಹಿಸಬೇಕು, ಶಿಕ್ಷಣ ಹಾಗೂ ಕ್ರೀಡೆಗೆ ಒತ್ತು ನೀಡಿ ನಮ್ಮ ನಾಡಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿ ತರಬೇತಿಗಾರರಿಗೆ ಹಾಗೂ ವಿಜೇತರಿಗೆ ಸನ್ಮಾನಿಸಿದರು.