Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮನೆ ನಿರ್ಮಾಣ ಆದೇಶ ಪತ್ರ ಹಸ್ತಾಂತರ; ಸಂತ್ರಸ್ತರ ಮೊಗದಲ್ಲಿ ನಗು ತರಿಸಿದ ಶಾಸಕಿ

localview news

ಬೆಳಗಾವಿ : 2019ರ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ‌ ಉಂಟಾದ ನೆರೆಹಾವಳಿಯಿಂದ ಹಾನಿಗೀಡಾಗಿರುವ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ಥಿ ಕಾಮಗಾರಿಗಳ ಸಲುವಾಗಿ ಮಾವಿನಕಟ್ಟೆ ಗ್ರಾಮದ 15 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಹಸ್ತಾಂತರಿಸಲಾಯಿತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ಲಕ್ಷ್ಮಿ ತಾಯಿ ಕೋ ಆಪರೇಟಿವ್ ಸೊಸೈಟಿ ಚೇರಮನ್ ಚನ್ನರಾಜ ಹಟ್ಟಿಹೊಳಿ ಆದೇಶ ಪತ್ರಗಳನ್ನು ವಿತರಿಸಿದರು. 2 ವರ್ಷಗಳಾದರೂ ಫಲಾನುಭವಿಗಳಿಗೆ ಪರಿಹಾರ ಸಿಕ್ಕಿರಲಿಲ್ಲ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪಟ್ಟು ಬಿಡದೆ ನಿರಂತರ ಪ್ರಯತ್ನ ಮಾಡಿ ಸರ್ಕಾರದಿಂದ ಆದೇಶ ಪತ್ರಗಳನ್ನು ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ಮೂಲಕ ಸಂತ್ರಸ್ತರ ಮುಖದಲ್ಲಿ ನಗುತರಿಸಿದ್ದಾರೆ. ಆದೇಶ ಪತ್ರ ಹಸ್ತಾಂತರದ ಸಂದರ್ಭದಲ್ಲಿ ಮಾವಿನಕಟ್ಟಿಯ ಹಿರಿಯರಾದ ಸಿದ್ರಾಮ ಗಡಾದ, ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.