Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶ್ರಾವಣ ಮಾಸದ ಕೊನೆಯ ಸೋಮವಾರದಂದು ವಿಶೇಷ ಪೂಜೆ

localview news

ಹೊಸೂರ: ಶ್ರಾವಣ ಮಾಸದ ನಿಮಿತ್ಯ ಸಮೀಪದ ಮಾಟೋಳ್ಳಿ ಗ್ರಾಮದಲ್ಲಿ ಬಸವೇಶ್ವರ ಭಜನಾ ಸಂಘದಿಂದ ಇಂದು ತಿಂಗಳ ಪರ್ಯಂತ ಗ್ರಾಮದಲ್ಲಿ ಭಜನಾ ಸಪ್ತಾಹ ನಡೆದು ಶ್ರಾವಣ ಕೊನೆಯ ಸೊಮವಾರದಂದು ಗ್ರಾಮದ ಸ್ವಾಗತ ರಸ್ತೆಯಲ್ಲಿರುವ ಅಶ್ವಾರೋಢ ಬಸವೇಶ್ವರ ಪುತ್ತಳ್ಳಿಯಲ್ಲಿ ಸಮಾರೋಪ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಪ್ರಮುಖರಾದ ಮಹಾಂತೇಶ ಅಂಗಡಿ, ಗ್ರಾಪಂ‌ ಸದಸ್ಯ ಮಹಾದೇವ ಅಂಗಡಿ ಮಾತನಾಡಿ, ಗ್ರಾಮದಲ್ಲಿ ಬಸವೇಶ್ವರ ಹಾಗೂ 12ನೇ ಶತಮಾನದ ಶರಣರ ವಚನಗಳನ್ನು ಭಜನೆ ಮಾಡುತ್ತಾ ಪ್ರತಿ ದಿನ ಬೆಳಿಗಿನ ಜಾವ ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಜನರಲ್ಲಿ ವಚನ ಸಾರವನ್ನು ಬಿತ್ತಿ ಧಾರ್ಮಿಕ ವಿಚಾರ ಬೆಳೆಸುವಲ್ಲಿ ಭಜನಾ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಗ್ರಾಮದ ಭಜನಾ ಸಂಘದ ಈರಣ್ಣ ಪೇಟೆಂದ, ಈರಣ್ಣ ಛಬ್ಬಿ, ರುದ್ರಪ್ಪ ಅಂಗಡಿ,ಬಾಳಪ್ಪ ನಂದೆಣ್ಣವರ, ಪ್ರಕಾಶ ಅಂಗಡಿ, ಸಂತೋಷ ಮಾಕಿ, ಗಂಗಾಧರ ಅಂಗಡಿ, ಬಸು ಮಾದರ, ಶಿವಾನಂದ ಅಂಗಡಿ, ಬಾಬು ಖಾನಪ್ಪನವರ, ಮುತ್ತು ಕಲಭಾಂವಿ, ಪ್ರಕಾಶ ಯತ್ತಿನಗುಡ್ಡ, ಶ್ರೀಶೈಲ ಹಕಾರಿ, ಪಂಚಯ್ಯ ಹೀರೆಮಠ ಮುಂತಾದವರು ಇದ್ದರು.

ಗ್ರಾಮದ ಸಮಸ್ತ ಜನತೆಗೆ ಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮದ ಭಕ್ತರಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.