ಹೈನುಗಾರಿಕೆ ಉತ್ತೇಜಿಸಲು ಧರ್ಮಸ್ಥಳ ಸಂಘದಿಂದ ದೇಣಿಗೆ
ಹೊಸೂರ: ಸಮೀಪದ ಇಂಗಳಗಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಹೈನುಗಾರಿಕೆ ಉತ್ತೇಜಿಸಲು ಸಂಘದ ಅಭಿವೃದ್ಧಿಗಾಗಿ 1 ಲಕ್ಷ ರೂಪಾಯಿ ಅನುದಾನವನ್ನು ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಮತ್ತು ಯೋಜನಾಧಿಕಾರಿ ಆಶಾ ರವರು ಸಂಘದ ಅಧ್ಯಕ್ಷರಿಗೆ ನೀಡಿದರು.
ಒಂದು ಲಕ್ಷ ರೂಪಾಯಿ ಮಂಜುರಾತಿ ಪತ್ರ ನೀಡಿ ಕೇಶವ ದೇವಾಂಗ ಮಾತನಾಡಿ, ರೈತರು ಕೇವಲ ಕೃಷಿ ಮಾತ್ರ ಮಾಡಿದರೆ ಅವರ ಆದಾಯ ಹೆಚ್ಚಾಗುವದಿಲ್ಲ. ಕೃಷಿಯೊಂದಿಗೆ ಇತರ ಉಪ ಕಸುಬು ಮಾಡಿದಾಗ ಕೃಷಿ ಲಾಭದಾಯಕವಾಗುತ್ತದೆ.
ಪ್ರತಿಯೊಬ್ಬ ರೈತರು ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಕಡ್ಡಾಯವಾಗಿ ಮಾಡಿದರೆ ಮಾತ್ರ ಹೆಚ್ಚುವರಿ ಲಾಭ ಪಡೆದು ಸ್ವಾವಲಂಭನೆಯ ಬದುಕು ಸಾಗಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಲಾಭಗಳಿಸುವಗೊಸ್ಕರ ಅನೇಕ ಯೋಜನೆ ತರದೆ ಹಳ್ಳಿಯ ರೈತರ ಜೀವನ ಹಸನಾಗಿಸಲು ಮತ್ತು ಪ್ರತಿಯೊಂದು ಗ್ರಾಮದ ಅಭಿವೃದ್ಧಿಯೊಂದಿಗೆ ಜನರ ಸೇವೆ ಮಾಡುವ ಸಂಕಲ್ಪದೊಂದಿಗೆ ಸಂಘ ಪರಿಶ್ರಮಿಸುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ರೈತರಿಗೆ, ಕೂಲಿ ಕಾರಗಮಿಕರಿಗೆ, ಬಡ ಜನತೆಗೆ ಸಹಕಾರಿಯಾಗುವ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕೆಎಮ್ಎಫ್ ನಿರ್ದೇಶಕ ಈಶ್ವರಚಂದ್ರ ಇಂಗಳಗಿ, ಕೃಷಿ ಅಧಿಕಾರಿ ದೇವೇಂದ್ರ ಮತ್ತು ಹೊಸೂರ ಸಂಘದ ಕಾರ್ಯದರ್ಶಿ ಶಂಕರ ಕಳ್ಳಿ ಸಂಘದ ಅಧ್ಯಕ್ಷರು, ನಿರ್ದೇಶಕರಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಮತ್ತು ಮೇಲ್ವಿಚಾರಕರು ಇದ್ದರು. ಸಂಘದ ಅನ್ನಪೂರ್ಣ ಕಾರ್ಯಕ್ರಮ ನಿರ್ವಹಿಸಿದರು.