ಜನರ ಸೇವೆಗೆ ನಿಂತ ಪಾಲಿಕೆ ನಗರ ಸೇವಕಿ ವೀಣಾ
ಬೆಳಗಾವಿ : ಬೆಳಗಾವಿ ವಾರ್ಡ್ 31ರ ಪಾಲಿಕೆಯ ನೂತನ ನಗರ ಸೇವಕಿ ವೀಣಾ ವಿಜಾಪುರ ಬುಧವಾರ ತಮ್ಮ ವಾರ್ಡ್ನ ಜನರಿಗೆ ಉಚಿತ ವ್ಯಾಕ್ಸಿನ್ ಲಸಿಕೆ ಕೊಡಿಸುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಎಲ್ಲ ವರಿಷ್ಠರ ಸೂಚನೆಯ ಮೆರೆಗೆ ಪಾಲಿಕೆಯ ನಗರ ಸೇವಕಿಯಾಗಿ ಆಯ್ಕೆಯಾದ ಬಳಿಕ ನನಗೆ ಮೊದಲ ಜನರ ಸೇವೆಗೆ ಅಣಿಯಾಗುವಂತೆ ತಿಳಿಸಿದ್ದು, ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಂಡು ಕೊರೊನಾ ಮುಕ್ತ ಬೆಳಗಾವಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಹಾಗೂ ಸರೋಜಿನಿ ಸೇರಿದಂತೆ ಮೊದಲಾದವರು ಹಾಜರಿದ್ದರು.