Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದ ಮಾಜಿ ತಾಪಂ ಸದಸ್ಯ

localview news

ಬೆಳಗಾವಿ:ಯಮಕನಮರಡಿ ಮತ ಕ್ಷೇತ್ರದಲ್ಲಿ ಕೋಟ್ಯಾಂತರ ರೂ . ಶುದ್ಧ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ಯಮಕನಮರಡಿ: ಯಮಕನಮರಡಿ ಮತ ಕ್ಷೇತ್ರದ ಶಾಸಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸೂಚನೆ ಮೇರೆಗೆ, ಹೆಬ್ಬಾಳ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಜಲ ಜೀವನ ಮಿಷನ ಕುಡಿಯುವ ನೀರಿನ ಯೊಜನೆ ಅಡಿಯಲ್ಲಿ ವಿವಿಧ ಕಾಮಗಾರಿಗೆ ಮಾಜಿ ಜಿ.ಪಂ, ತಾ ಪಂ ಸದಸ್ಯರು ಶನಿವಾರ ಚಾಲನೆ ನೀಡಿದರು.

ಗೋಟುರ 68 ಲಕ್ಷ ರೂ. , ಕೊಚರಿ 40 ಲಕ್ಷ ರೂ. , ಚಿಕ್ಕಾಲಗುಡ 70 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಯಮಕನಮರಡಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೊಚರಿ ಗ್ರಾಮಕ್ಕೆ 40 ಲಕ್ಷ ರೂ. ವೇಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಸುಮಾರು 270 ನಳಗಳನ್ನು ಅಳವಡಿಸಲಾಗುತ್ತಿದೆ. ಗೋಟುರ ಗ್ರಾ ಪಂ ವ್ಯಾಪ್ತಿಯಲ್ಲಿ ಸುಮಾರು 680 ಮನೆಗಳಿಗೆ ನಳಗಳನ್ನು ಅಳವಡಿಸಲಾಗುತ್ತಿದೆ. 70 ಲಕ್ಷ ರೂ. ವೇಚ್ಚದಲ್ಲಿ ಚಿಕ್ಕಾಲಗುಡದಲ್ಲಿ 360 ಮನೆಗಳಿಗೆ ನಳಗಳನ್ನು ಅಳವಡಿಸಲಾಗುತ್ತಿದೆ ಎಂದು ಮಾಜಿ ಜಿ. ಪಂ ಸದಸ್ಯರು ಹೇಳಿದರು.

ಹೆಬ್ಬಾಳ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ್ ಮಗದುಮ್, ಮಾಜಿ ತಾ ಪಂ ಸದಸ್ಯ ನಿಂಗನಗೌಡ ಪಾಟೀಲ, ಪ್ರಕಾಶ ಬಸಾಪುರ , ಲಕ್ಷ್ಮಿಕಾಂತ್ ಗಿಜವಣಿ , ಸುರೇಶ್ ಹುದ್ದಾರ್ಶಿವಗೌಡ ಪಾಟೀಲ, ರೇವಣ್ಣಾ ಮಾಳಂಗಿ, ಭೀಮಪ್ಪ ಮಗದುಮ್ಮ , ಸೂರ್ಯಕಾಂತ ನಾಯಿಕ, ಅನೀಲ ದೇಸಾಯಿ ಹಾಗೂ ಇತರರು ಇದ್ದರು.