Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಾಸಕ ಶ್ರೀಮಂತ ಪಾಟೀಲ್ ಗೆ ಹಣದ ಆಮಿಷ ಒಡ್ಡಿದವರ ವಿರುದ್ಧ ತನಿಖೆಯಾಗಲಿ: ಕುಟುಕಿದ ಡಿ.ಕೆ.ಶಿವಕುಮಾರ

localview news

ಬೆಳಗಾವಿ: ಆಪರೇಷನ್ ಕಮಲದಲ್ಲಿ ಶ್ರೀಮಂತ ಪಾಟೀಲ್ ಹಣದ ಆಮಿಷಕ್ಕೆ ಒಳಗಾಗಿರುವ ಸಂತ್ಯಾಶ ಹೊರಬಂದಿದೆ. ಬೆಂಗಳೂರು ಅಥವಾ ಬೆಳಗಾವಿಯಲ್ಲಿ ಎಸಿಬಿ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು, ಆಮಿಷ ಒಡ್ಡಿದವರ ವಿರುದ್ಧ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಒತ್ತಾಯಿಸಿದ್ದಾರೆ.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು, ಬಿಜೆಪಿಯದ್ದು ಸ್ವಚ್ಛ ಆಡಳಿತ ಎಂದು ಬೊಗಳೆ ಹೊಡೆಯಲಾಗುತ್ತಿದೆ. ಕಮಲದ ಆಮಿಷಕ್ಕೆ ಒಳಗಾದ ಮಾಜಿ ಸಚಿವರು ಹೃದಯಾಳದಿಂದ ಬಾಯಿ ಬಿಟ್ಟಿದ್ದಾರೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಯಲಿ ಎಂದು ಕುಟುಕಿದರು.

ಸಮರ್ಥ ತಂಡ ಬೆಳಗಾವಿಗೆ: ಪಾಲಿಕೆ ಚುನಾವಣೆಯಲ್ಲಿ ಸೋಲಾಗಿದೆ ನಿಜ, ಜಿಲ್ಲಾ ಚುನಾವಣಾ ಆಯೋಗ ನಮಗೆ ಮತದಾರರ ಸಂಖ್ಯೆ ನೀಡಿದ್ದು, ಬಿಜೆಪಿಗೆ ನೀಡಿದ್ದೇ ಬೇರೆ ಇದೆ. ಇದರಿಂದ ಮತದಾರರಿಗೆ ಗೊಂದಲವಾಗಿದೆ. ಇದರಿಂದ, ಕಾಂಗ್ರೆಸ್ ಗೆ ಸಾಕಷ್ಟು ತೊಂದರೆಯಾಗಿದೆ. ಮತದಾನ ಪ್ರತಿಶತ ಏನೇ ಇರಲಿ. ಅದು ಗೊಂದಲವೇ ಇದೆ. ಅದರ ಬಗ್ಗೆ ನಮ್ಮ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಕೊಡಲಿದ್ದೇವೆ ಎಂದರು. ಇದರ ಬಗ್ಗೆ ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಎಐಸಿಸಿಯಿಂದ ಸತ್ಯಸಂಶೋಧನಾ ಸಮಿತಿ ಬಂದು ತಪಾಸಣೆ ‌ನಡೆಸಲಿದೆ ಎಂದರು.

ಪಾಲಿಕೆ ಚುನಾವಣೆ ಪಾರದರ್ಶಕವಾಗಿಲ್ಲ‌ ಎಂದು ಕಾಂಗ್ರೆಸ್ ಸೋಲು ಕಂಡ ಅಭ್ಯರ್ಥಿಗಳು ಎಂಇಎಸ್ ಜತೆ ಸೇರಿಕೊಂಡು‌ ನ್ಯಾಯಾಲಯದ ‌ಮೊರೆ ಹೋಗುತ್ತಿರುವುದು ಅದು ಕಾಂಗ್ರೆಸ್ ಅಭ್ಯರ್ಥಿಗಳ ನಿಲುವು. ಅದಕ್ಕೆ ನಾನೇಕೆ ಬೇಡ ಎನ್ನಲಿ. ಜತೆಗೆ ಎಂಇಎಸ್ ನವರಿಗೆ ಪಾಲಿಕೆ ಚುನಾವಣೆಯಲ್ಲಿ ಮೋಸವಾಗಿದೆ ಎಂದು ಡಿಕೆ ಎಂಇಎಸ್ ಬಗ್ಗೆ ಮೃದುದೋರಣೆ ತೋರಿದರು.

ಪಾಲಿಕೆ ಚುನಾವಣೆ ಗೆದ್ದರೆ ಶೇ 50 ರಷ್ಟು ತೆರಿಗೆ ವಿನಾಯತಿ ನೀಡುತ್ತಿದ್ದೆವು, ನುಡಿದಂತೆ ನಡೆಯುತ್ತೇವೆ. ಆದರೆ ಕೈ ತಪ್ಪಿದೆ ಎಂದು ಅಸಮದಾನ ಹೊರಹಾಕಿದರು.

ಗ್ರಾಮೀಣ ಜನತೆ ಸಮಸ್ಯೆಗಳನ್ನು ಆಲಿಸಲು ಮುಂದಾಗಲಿದ್ದೇವೆ‌. ಅಕ್ಟೋಬರ್ 2 ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತವಾಗಿ ಪ್ರತಿಯೊಂದು ಗ್ರಾ.ಪಂಗಳಿಗೆ ಭೇಟಿ, ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಸಭೆ ನಡೆಸಲಾಗುವುದು. ಪ್ರತಿ ಹಳ್ಳಿಯಲ್ಲಿ ಗ್ರಾಮೀಣ ಜನತೆ ಸಮಸ್ಯೆಯನ್ನು ಆಲಿಸಿ, ಶೀಘ್ರವೇ ಪರಿಹಾರ ಕೊಡಿಸಲಾವುದು. ಅದಕ್ಕಾಗಿ ಕಾಂಗ್ರೆಸ್ ಸಮರ್ಥ ತಂಡ ಬೆಳಗಾವಿಗೆ ಬರಲಿದೆ ಎಂದರು.

ಕೇಂದ್ರ ಸರ್ಕಾರ ವೈಫಲ್ಯ ಆಡಳಿತಕ್ಕೆ ಸಿಎಂ ರಾಜೀನಾಮೆಯೇ ಸಾಕ್ಷಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜನರಿಗೆ ಒಳ್ಳೆಯ ಆಡಳಿತ ನೀಡದಿರುವುದು ಸಿಎಂಗಳ ರಾಜೀನಾಮೆಗೆ ಸಾಕ್ಷಿ, ಗುಜರಾತ್ ನಲ್ಲಿ ಮೂರು ಮುಖ್ಯಮಂತ್ರಿಗಳ ಬದಲಾವಣೆಯಾಗಿದ್ದಾರೆ. ಕೇಂದ್ರ ಸರ್ಕಾರ ವೈಫಲ್ಯದಿಂದ ಬಿ.ಎಸ್.ಯಡಿಯೂರಪ್ಪ ಕಣ್ಣೀರಿನ ವಿದಾಯ ಹೇಳಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ದ ಡಿಕೆಶಿ ಗುಡುಗಿದರು.

ತೈಲ ಬೆಲೆ, ಅಡುಗೆ ಎಣ್ಣೆ ಗಗನಕ್ಕೇರುತ್ತಿವೆ. ಇದನ್ನು ವಿರೋಧಿಸಿ ಎತ್ತಿನ ಗಾಡಿ ಮೂಲಕ ವಿಧಾನ ಸೌಧವರೆಗೂ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿಯವರು ಭಾರತೀಯರ ಕಣ್ಣಲ್ಲಿ ರಕ್ತ ತರಿಸುತ್ತಿದ್ದಾರೆ. ಬಡ ಕುಟುಂಬಗಳ ರೋಧನೆ ಅವರಿಗೆ ತಿಳಿಯುತ್ತಿಲ್ಲವೇ, ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ದ್ರುವ್ ನಾರಾಯಣ, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಅಶೋಕ ಪಟ್ಟಣ, ಫಿರೋಜ್ ಸೇಠ್, ಎ.ಬಿ. ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ರಾಜು ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.