ಪಟ್ಟಣಕುಡಿ ಕಸವಿಲೇವಾರಿ ಘಟಕ ಬೇರೆ ಕಡೆ ಸ್ಥಾಪಿಸುವಂತೆ ಒತ್ತಾಯ
ಬೆಳಗಾವಿ:ಪಟ್ಟಣಕುಡಿ ಗ್ರಾಮದ ಸರ್ವೆ ನಂ.93ನಲ್ಲಿ ನಿರ್ಮಿಸುತ್ತಿರುವ ಕಸ ವಿಲೇವಾರಿ ಘಟಕವನ್ನು ರಿ.ಸ.ನಂ 175ರಲ್ಲಿ ಸ್ಥಳಾಂತರಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣಕುಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರಕಾರದಿಂದ ಪಟ್ಟಣಕುಡಿ ಗ್ರಾಮದಲ್ಲಿನ ಕಸ ವಿಲೇವಾರಿ ಘಟಕವನ್ನು ಗ್ರಾಮದ ಹೊರಗೆ ಶೆಡ್ ಹಾಗೂ ಕಸ ಬೇರ್ಪಡಿಸಿ ಗೊಬ್ಬರ ತಯಾರಿಸಲು ಗ್ರಾಪಂ ಸದಸ್ಯರು ಗ್ರಾಮ ಹದ್ದಿಯ ಸರ್ವೆ ನಂಬರ್ 93ರಲ್ಲಿ ಸ್ಥಳ ಗುರುತಿಸುತ್ತಾರೆ. ಆದರೆ ಈ ಸ್ಥಳದಲ್ಲಿ ಸಾರ್ವಜನಿಕರ ಒಪ್ಪಿಗೆ ಪಡೆದು ಗ್ರಾಮಸ್ಥರಿಗೆ ತೊಂದರೆಯಾಗದಂತೆ ಸ್ಥಳವನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಆದರೆ ಯಾರ ಅನುಮತಿ ಪಡೆಯದೆ 93ರಲ್ಲಿ ಕಸ ವಿಲೇವಾರಿ ಘಟಕ ಮಾಡದಂತೆ ಒತ್ತಾಯಿಸಿದರು.
ಈಗಾಗಲೇ ಈ ಪ್ರದೇಶದಲ್ಲಿ ಪರಿಶಿಷ್ಟ, ಪರಿಶಿಷ್ಟ ಪಂಗಡ ಸೇರಿದಂತೆ ಇನ್ನಿತರರು ಹಿಂದೂಳಿದ ವರ್ಗಗಗಳ ನಿವೇಶನ ರಹಿತ ಕುಟುಂಬಗಳು ಇಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದ್ದರಿಂದ ಇದನ್ನು ಬೇರೆ ಕಡೆ ಜಾಗೆಯನ್ನು ಗುರುತಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಟ್ಟಣಕುಡಿ ಗ್ರಾಮಸ್ಥರು ಉಪಸ್ಥಿತರಿದ್ದರು.