ಜೊಮಾಟೊ ಕಂಪನಿಯಿಂದ್ ಹೊರ ನಡೆದ ಸಹ-ಸಂಸ್ಥಾಪಕ ಗೌರವ್ ಗುಪ್ತಾ
ಜೊಮಾಟೊ ಸಹ-ಸಂಸ್ಥಾಪಕ ಗೌರವ್ ಗುಪ್ತಾ ಫುಡ್ ಟೆಕ್ ಪ್ಲಾಟ್ಫಾರ್ಮ್ನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಕಂಪನಿಯು ಮಂಗಳವಾರ ಬ್ಲಾಗ್ ಮೂಲಕ ತಿಳಿಸಿದೆ. ಗುಪ್ತಾ 2015 ರಲ್ಲಿ ಜೊಮಾಟೊಗೆ ಸೇರಿಕೊಂಡಿದ್ದರು ಮತ್ತು 2018 ರಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಒಒ) ಮತ್ತು 2019 ರಲ್ಲಿ ಸಂಸ್ಥಾಪಕರಾಗಿ ಏರಿದರು.
ನಾನು ನನ್ನ ಜೀವನದಲ್ಲಿ ಹೊಸ ತಿರುವು ಪಡೆಯುತ್ತಿದ್ದೇನೆ ಮತ್ತು ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ, ನನ್ನ ಜೀವನದ ಈ ನಿರ್ಣಾಯಕ ಅಧ್ಯಾಯದಿಂದ ಬಹಳಷ್ಟು ಕಲಿತುಕೊಂಡಿದ್ದೇನೆ - ಕಳೆದ 6 ವರ್ಷಗಳಲ್ಲಿ ಎಲ್ಲಾ ಅನುಭವ ಮತ್ತು ಎಲ್ಲಾ ಪ್ರೀತಿಗಾಗಿ ಕೃತಜ್ಞರಾಗಿರಬೇಕು ಎಂದು ಗೌರವ್ ಗುಪ್ತಾ ಟ್ವಿಟ್ ಮೂಲಕ ವಿದಾಯ ಹೇಳಿದ್ದಾರೆ.
I am taking a new turn in my life and will be starting a new chapter, taking a lot from this defining chapter of my life – the last 6 years @zomato. Grateful for all the experiences and all the love.https://t.co/LfUOzsz6sP
— Gaurav Gupta (@grvgpta) September 14, 2021