ಏರ್ ಇಂಡಿಯಾವನ್ನು ಖರಿದಿ ಮಾಡಲು ಮುಂದಾದ ಟಾಟಾ ಸನ್ಸ್
ಮುಂಬೈ: ಸಾಲದ ಹೊರೆ ಹೊತ್ತಿರುವ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾದ ಬಿಡ್ಡಿಂಗ್ ಪ್ರಕ್ರಿಯೆಯನ್ನು ಸಪ್ಟೆಂಬರ್ 15 ರಂದು ಪೂರ್ಣಗೊಳಿಸುವ ನಿರೀಕ್ಷೆಯಲ್ಲಿತ್ತು.
ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಈ ಪ್ರಕ್ರಿಯೆಗೆ ಸೆಪ್ಟೆಂಬರ್ 15 ರ ಗಡುವು ನಿಗದಿಪಡಿಸಲಾಗಿದೆ ಮತ್ತು ಬದಲಾಗುವುದಿಲ್ಲ ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದರು.
ಪ್ರಸ್ತುತ, ಏರ್ ಇಂಡಿಯಾ 43,000 ಕೋಟಿ ಸಾಲವನ್ನು ಹೊಂದಿದೆ ಅದರಲ್ಲಿ 22,000 ಕೋಟಿ ರೂಪಾಯಿಗಳನ್ನು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ಗೆ ವರ್ಗಾಯಿಸಲಾಗುವುದು ಎಂದು ತಿಳಿದು ಬಂದಿದೆ.
2018 ರಲ್ಲಿ ಏರ್ ಇಂಡಿಯಾದಲ್ಲಿ 76% ಷೇರುಗಳಿಗಾಗಿ ಖರೀದಿದಾರರನ್ನು ಹುಡುಕಲು ವಿಫಲವಾದ ನಂತರ ಕೇಂದ್ರ ಸರ್ಕಾರವು ರಾಷ್ಟ್ರೀಯ ವಾಹಕದ ಮಾರಾಟವನ್ನು ಪೂರ್ಣಗೊಳಿಸುವ ನಿರೀಕ್ಷೆಯಲ್ಲಿತ್ತು ಹಾಗು ಟಾಟಾ ಸನ್ಸ್ ಈ ಬಿಡ್ಡಿಂಗನಲ್ಲಿ ತನ್ನ ಬಿಡ್ಡನ್ನು ಸಲ್ಲಿಸಿದೆ ಎಂದು ತಿಳಿಸಿದೆ.