Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಆರೋಗ್ಯ ಸಮತೋಲನಕ್ಕೆ ಕ್ರೀಡೆ ಅವಶ್ಯ : ರಾಹುಲ್ ಜಾರಕಿಹೊಳಿ

localview news

ಯಮಕನಮರಡಿ:' ಮನುಷ್ಯ ಆರೋಗ್ಯವಾಗಿ ಜೀವನ ನಡೆಸಲು ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆಯಾಗಿದೆ. ಆರೋಗ್ಯ ಸಮತೋಲನಕ್ಕೆ ಕ್ರೀಡೆ ಅವಶ್ಯವಾಗಿದೆ. ಅಧ್ಭುತ ಆಲೋಚನೆ ಜೀವನಕ್ಕೆ ಕ್ರೀಡೆ ಅವಶ್ಯಕ 'ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಸಿಎಎಸ್ ಶಾಲಾ ಮೈದಾನದಲ್ಲಿ ಸಂಕಲ್ಪ ಎಜ್ಯೂಕೇಶನ್ ಮತ್ತು ರೂರಲ್ ಡೆವಲಪ್ಮೆಂಟ್ ಸೊಸೈಟಿಯಿಂದ ವೃದ್ಧಾಶ್ರಮಕ್ಕೆ ದೇಣಿಗೆ ನೀಡುವ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯ ಗೆಲುವು ಪಡೆದ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.

ಪ್ರತಿಯೊಬ್ಬರಿಗೂ ಕ್ರೀಡೆಗಳ ಅವಶ್ಯಕತೆ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ರೋಗಗಳಿಗೆ ಒಳಪಡುತ್ತಿದ್ದಾನೆ. ಈ ನಿಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿ ಜೀವನ ನಡೆಸಲು ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ರವೀಂದ್ರ ಜಿಂಡ್ರಾಳಿ ಮಾತನಾಡಿ, ಆಟ ನಿಮ್ಮದು ಪ್ರೋತ್ಸಾಹ ನಮ್ಮದು ಈ ಕ್ರೀಡೆ ಎಲ್ಲರನ್ನೂ ಒಂದು ಗೂಡಿಸುತ್ತದೆ. ಅಂತ ಹೇಳಿದರು ಕಿರಣ ರಜಪೂತ ಮಾತನಾಡಿ ಸ್ಥಳೀಯ ಭಾಗದಲ್ಲಿ ಕ್ರಿಕೆಟ್ ಆಟ ಅತ್ಯಂತ ಜನಪ್ರಿಯತೆ ಪಡೆದಿದೆ. ಇದನ್ನು ಸಂಘಟಿಸಿದ ಸಂಘಟನಾಕಾರ ಮುಜಾಹಿದ ನಾಲಬಂದ ಇವರ ಕಾರ್ಯ ವೈಖರಿಯನ್ನು ಕೊಂಡಾಡಿದರು.

ಶಿಕ್ಷಕರು, ಆರಕ್ಷಕರು, ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರ ಮದ್ಯ ಚತುರ್ಥ ಕ್ರಿಕೆಟ್ ಪಂದ್ಯಾವಳಿಯನ್ನುಆಯೋಜಿಸಲಾಗಿತ್ತು. ಶಿಕ್ಷಕರ ತಂಡದ ನಾಯಕರಾದ ರಮಜಾನ ನದಾಫ ತಂಡ ಪ್ರಥಮ ಸ್ಥಾನ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಾವೀದ್ ಜಕಾತಿ, ಅಸ್ಲಂ ಪಕಾಲಿ, ದೇವಪ್ಪ ಹುನ್ನಿರಿ, ಸದಾನಂದ ಗುಡಿಕಡೆ, ದಸ್ತಗಿರಿ ಬಸಾಪೂರೆ, ಡಾ. ಸರವೇಶ ಗುರೋ, ಮುಜಾಹಿರ್ ನಾದಬಂದ್ , ರಮ್ಜಾಮ್ ನಧಾಪ್, ಅಬ್ಜಿತ್ ಪಾಟೀಲ, ಪ್ರಕಾಶ ಬರಗಾಲೆ, ಯಮಕನಮರಡಿ ಗ್ರಾಮದ ಮುಖಂಡರು ಇದ್ದರು.