Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯುನಿಯನ್ ಬ್ಯಾಂಕ್ ನಲ್ಲಿ ಕೃಷಿ ಸಾಲ ಮನ್ನಾಕ್ಕೆ ರೈತರ ಆಗ್ರಹ

localview news

ಬೆಳಗಾವಿ : ಯುನಿಯನ್ ಬ್ಯಾಂಕ್ ದಲ್ಲಿ ಕಟಬಾಕಿಯಾದ ಕೃಷಿಸಾಲದ ಬಡ್ಡಿ ಮನ್ನಾ ಮಾಡಿ ಅಸಲಿನಲ್ಲಿ ಶೇ 60-90 ರಷ್ಟು ಬಿಟ್ಟು ಒಂದೆ ಬಾರಿಗೆ (ಓಟಿಎಸ್) ಸಾಲ ಮರುಪಾವತಿ ಮಾಡಲು ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

ನಗರದ ಟಿಳಕವಾಡಿಯಲ್ಲಿರುವ ಯುನಿಯನ್ ಬ್ಯಾಂಕ್ ಪ್ರಾದೇಶಿಕ ಕಛೇರಿಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೆರಿ, ರಾಜ್ಯ ಕಾರ್ಯದರ್ಶಿ ಮಹಾಂತೇಶ ಕಮತ ನೆತೃತ್ವದಲ್ಲಿ ಪ್ರಾದೇಶಿಕ ಅಧಿಕಾರಿ ವಿಠಲ ಬನಶಂಕರಿ ಅವರಿಗೆ ಮನವಿ ನೀಡಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸಿದರೆ ಕಳೆದ ಏರಡು ವರ್ಷದಿಂದ ಮಹಾಮಾರಿ ಕರೊನಾದ ಹಾವಳಿಯಿಂದ ಕೃಷಿಕರ ಜೀವನ ದುಸ್ಥರವಾಗಿದ್ದು ಇಂತಹ ಪರಿಸ್ಥಿತಿಯ ಅವಲೋಕನ ಮಾಡಿ ಅನೇಕ ಬ್ಯಾಂಕ್ ಗಳು ರೈತರ ಕಟಬಾಕಿ ಕೃಷಿ ಸಾಲದ ಅಸಲಿನಲ್ಲಿ 60-90ಶೇ ಕಡಿತಗೊಳಿಸಿ ರೈತನ ಕಷ್ಟಕ್ಕೆ ಸ್ಪಂದಿಸುತಿದ್ದರೆ ಯುನಿಯನ್ (ಕಾರ್ಪೂರೆಶನ್) ಬ್ಯಾಂಕ್ ಅಸಲಿನಲ್ಲಿ ಮನ್ನಾ ಮಾಡದೆ ಮೂಂಡುತನ ಮಾಡುವದನ್ನೆ ಮುಂದುವರೆಸುತ್ತಿರುವದು ನ್ಯಾಯಸಮ್ಮತವಲ್ಲ ಎಂದರು.

ರೈತ ಮುಖಂಡ ಎಸ್.ಎಸ್.ಸಿದ್ದನಗೌಡರ ಮಾತನಾಡಿ, ರೈತರು ಒಂದಿಲ್ಲ ಒಂದು ಸಂಕಷ್ಟದ ಸುಳಿಗೆ ಸಿಕ್ಕು ಜೀವನ ನಡೆಸುವದೆ ಭಾರವಾಗಿ ಪರಿಣಮಿಸುತ್ತಿದೆ. ಇಂತಹ ಪರಸ್ಥಿತಿ ಅವಲೊಕಿಸಿ ಅನೇಕ ರಾಷ್ಟೀಕೃತ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳು ರೈತರ ಕಟಬಾಕಿ ಸಾಲದ ಬಡ್ಡಿ ಮನ್ನಾ ಮಾಡಿ ಅಸಲಿನಲ್ಲಿ ಶೇ 60-90 ರಷ್ಟು ಮನ್ನಾ ಮಾಡಿ ಉಳಿದ ಮೊತ್ತಕ್ಕೆ ಕಾಲಾವಕಾಶ ನೀಡಿ ಸಾಲ ಮರುಪಾವತಿಗೆ ಅವಕಾಶ ನೀಡುತ್ತಿರುವಾಗ ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿದ್ದ ಯುನಿಯನ್ (ಕಾರ್ಪೂರೆಶನ್) ಬ್ಯಾಂಕ್ ಇಂದು ರೈತರ ಕೊರಳಿಗೆ ಉರಳಾಗುತ್ತಿದೆ.

ರೈತರ ಕಷ್ಟವನ್ನರಿತು ಕಟಬಾಕಿ ಸಾಲದ ಅಸಲಿನಲ್ಲಿ ಶೇ 60-90 ದಷ್ಟು ಮನ್ನಾ ಮಾಡಿ ಒಂದೆ ಬಾರಿಗೆ (ಓಟಿಎಸ್)ಸಾಲ ಮರುಪಾವತಿಗೆ ಅನಕೂಲ ಮಾಡಿಕೊಡಲು ಸರ್ಕಾರದ ಮೂಲಕ ಯುನಿಯನ್ (ಕಾರ್ಪೂರೆಶನ್) ಶಾಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರೈತರ ಈ ಮನವಿಗೆ ಸ್ಪಂದಿಸಿ ಕಟಬಾಕಿ ಸಾಲಗಾರ ರೈತರಿಗೆ ಆಸರೆಯಾಗಬೇಕು, ಜಾಮೀನರಾದವರ ಖಾತೆಗಳಲ್ಲಿ ಜಮೆಯಾದ ಬೆಳೆ ಪರಿಹಾರ, ಫಸಲ ಭೀಮಾ, ಕಿಸಾನ ಸಮ್ಮಾನ ಹಾಗೂ ಇತರ ಹಣವನ್ನು ಲಾಕ್ ಮಾಡಿರುವದನ್ನ ತೆರವುಗೊಳಿಸಬೇಕು.

ರೈತರ ಜೋತೆ ಇದೆ ರೀತಿ ಚಲ್ಲಾಟವಾಡುತಿದ್ದರೆ ಯುನಿಯನ್ (ಕಾರ್ಪೂರೆಶನ್) ಹಠಾವೋ ಚಳುವಳಿ ಪ್ರಾರಂಭಿಸಬೇಕಾಗುವ ಅನಿವಾರ್ಯತೆ ಬಂದಿದೆ. ಏಕೆಂದರೆ ರೈತರಿಗೆ ಸರಿಯಾದ ಬೆಳೆ ಬಂದು ಅದಕ್ಕೆ ಯೋಗ್ಯದರದ ಬೆಲೆ ಸಿಕ್ಕಿದ್ದರೆ ಸಾಲವನ್ನು ಬಡ್ಡಿ ಸಮೇತ ಮರುಪಾವತಿ ಮಾಡುತಿದ್ದೆವು ಆದರೆ ಇಂದಿನ ಬೆಲೆ ಏರಿಕೆ ಪರಿಸರದ ವಿಕೊಪದಿಂದ ರೈತನಿಗೆ ಕೃಷಿಯಲ್ಲಿ ನಷ್ಟ ಉಂಟಾಗಿ ಮಾಡಿದ ಸಾಲವನ್ನು ತೀರಿಸದೆ ಆತ್ಮಹತ್ಯೆಗೆ ದಾರಿಯಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಕಟಬಾಕಿ ಸಾಲದ ಅಸಲನ್ನು ಕಡಿತಮಾಡಿ ಶೇ 10-20ಪ್ರತಿಶತ ಅಸಲಿನೊಂದಿಗೆ ಮರುಪಾವತಿ ಮಾಡಿಕೊಬೇಕೆಂದರು.

ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕ್ ಅಧಿಕಾರಿ ವಿಠಲ ಬನಶಂಕರಿ, ರೈತರ ಮನವಿಯನ್ನು ಮೆಲಾಧಿಕಾರಿಗಳಿಗೆ ತಿಳಿಸಿ ಬರುವ ದಿನಗಳಲ್ಲಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗುರುಶಿದ್ದಪ್ಪ ಕೊಟಗಿ, ಮಂಜು ಬಾಳೆಕುಂದರಗಿ, ಮಡಿವಾಳಪ್ಪ ಗಣಾಚಾರಿ, ಸಂಜು ಪಾಟೀಲ್, ಪ್ರಕಾಶ ನಾಯ್ಕ ಮುಂತಾದವರು ಇದ್ದರು. ಟಿಳಕವಾಡಿ ಪಿಎಸ್ಐ ಮನಿಕಂಠ ಪೂಜಾರ ನೆತೃತ್ವದಲ್ಲಿ ಬ್ಯಾಂಕ್ ಕಛೇರಿಗೆ ಭದ್ರತೆ ಒದಗಿಸಿದ್ದರು.