Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬ್ರಿಟಿಷ್ ವಿರೋಧಿ ಬಂಡಾಯದಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ : ಡಾ. ಕಾಂತರಾಜ್

localview news

ಬೆಳಗಾವಿ : ನೂರೈವತ್ತು ವರ್ಷಗಳ ಇತಿಹಾಸವಿರುವ ಬ್ರಿಟಿಷ್ ವಿರೋಧಿ ಬಂಡಾಯದಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯವಾಗಿದೆ. ಆದರೆ ಬ್ರಿಟಿಷ್ ವಿರೋಧದ ಬಂಡಾಯದ ಚರಿತ್ರೆಯಲ್ಲಿ ಮಹಿಳೆಯರನ್ನು ಕಡೆಗಣಿಸುತ್ತ ಬರಲಾಗಿದೆ. 1857ರ ಸ್ವಾತಂತ್ರ‍್ಯ ದಂಗೆಗಿAತ ಪೂರ್ವದಲ್ಲಿ1817ರ ಸಂದರ್ಭದಲ್ಲಿ ಭೀಮಾಬಾಯಿ ಹೋಳ್ಕರ್ ಎನ್ನುವ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮಳಿಗಿಂತಲೂ ಮೊದಲೇ ಬ್ರಿಟಿಷರ ವಿರುದ್ಧ ಬಂಡಾಯದ ಕಹಳೆ ಊದಿದವಳು.

ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕಿತ್ತೂರಿನ ಚೆನ್ನಮ್ಮಳ ಪಾತ್ರ ಮುಕುಟಪ್ರಾಯವಾದುದು ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ವಿ ಕಾಂತರಾಜ್ ಅವರು ಹೇಳಿದರು. ಬಂಡಾಯ ಸಾಹಿತ್ಯ ಸಂಘಟನೆ ಬೆಳಗಾವಿ ಜಿಲ್ಲಾ ಘಟಕ 'ಸ್ವಾತಂತ್ರ‍್ಯ-75'ರ ನಿಮಿತ್ಯ ಆಯೋಜಿಸಿದ್ದ "ಬ್ರಿಟಿಷ್ ವಿರೋಧಿ ಬಂಡಾಯ : ಮಹಿಳೆಯರ ಪಾತ್ರ" ಎನ್ನುವ ವಿಷಯದ ವೆಬಿನಾರ್ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು. ಬ್ರಿಟಿಷ್ ವಿರೋಧಿ ಬಂಡಾಯದಲ್ಲಿ ಹಜ್ರತ್ ಬೇಗಂ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ ಮುಂತಾದ ರಾಣಿಯರು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ದಬ್ಬಾಳಿಕೆಯನ್ನು ಉಗ್ರವಾಗಿ ವಿರೋಧಿಸಿದಂತೆ ದೇಶದ ಸಾಮಾನ್ಯ ಮಹಿಳೆಯರೂ ಕೂಡಾ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಬಂಡಾಯದಲ್ಲಿ ತಮ್ಮನ್ನು ಅರ್ಪಣೆ ಮಾಡಿಕೊಂಡವರಿದ್ದಾರೆ. ರುಡರ್ಡ್ ಕ್ಲಿಪಿಂಗ್ ಎನ್ನುವ ಚರಿತ್ರೆಕಾರ ದಾಖಲಿಸಿದಂತೆ 1857ರ ಸಂದರ್ಭದಲ್ಲಿ ಸಾಮನ್ಯ ವೇಶ್ಯೆಯರೂ ಕೂಡಾ ಸ್ವಾತಂತ್ರ‍್ಯಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬ್ರಿಟಿಷ್ ವಸಾಹತು ವಿರುದ್ಧ ಬಂಡಾಯವೆದ್ದ ಚಳುವಳಿಗಾರರ ಯೋಜನೆಗಳನ್ನು ಕಾರ್ಯಗತ ಗೊಳಿಸುವುದು, ಜನಸಾಮಾನ್ಯರಿಗೆ ತಲುಪಿಸುವುದು ಸೇರಿದಂತೆ ಚಳುವಳಿಗಾರರಿಗೆ ಆಹಾರ, ವಸ್ತ್ರ, ಸಲಕರಣೆಗಳನ್ನು ಪೂರೈಸಿ, ಪೋಲಿಸರಿಗೆ ಸೆರೆಸಿಕ್ಕು ಅವರ ದೌರ್ಜನ್ಯಕ್ಕೆ ಒಳಗಾಗಿ ಮಡಿದವರಿದ್ದಾರೆ. ಆಶಾದೇವಿ, ಭಗವತಿದೇವಿ ಕೌರ, ರಹೀಮ್ ಕೌರ, ಇಂದ್ರಾ, ಜಮೀಲಾಖಾನ್, ಶೋಭಾದೇವಿ ಮುಂತಾದವರ ದೊಡ್ಡ ಪಟ್ಟಿಯೇ ಇದೆ. ಇಂತಹ ಮಹಿಳಾ ಹೋರಾಟಗಾರರ ಚರಿತ್ರೆ ಪುನರ್ರೂಪಿಸಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಖ್ಯಾತ ಲೇಖಕಿ ಡಾ. ವಿನಯಾ ವಕ್ಕುಂದ ಅವರು ಮಾತನಾಡಿ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಮಹಿಳೆಯರ ಪಾಲುದಾರಿಕೆ ಕುರಿತು ಪುಸ್ತಕ ದಾಖಲೆಯೇ ಬೇರೆ, ಜನಕಥನವೇ ಬೇರೆಯಾಗಿದೆ. ನೀರು ತರುವ ಕೊಡದಲ್ಲಿ ಆಹಾರ ತುಂಬಿಕೊAಡು ಚಳುವಳಿಗಾರರಿಗೆ ಪೂರೈಸಿದ ಜನಕಥನ ನಮ್ಮ ನಡುವೆ ಇದೆ, ಹಜರತ್ ಮಹಲ್ ಎನ್ನುವ ಮಹಿಳೆ ತನ್ನ ಹಣೆಯ ಮೇಲಿನ ಸೆರಗನ್ನು ದೇಶದ ಬಾವುಟವನ್ನಾಗಿ ಮಾಡುತ್ತೇವೆ ಎನ್ನುವ ಮಾತುಗಳು ನಮ್ಮನ್ನು ರೋಮಾಂಚನಗೊಳಿಸುತ್ತವೆ.

ಉತ್ತರ ಕನ್ನಡದ ಗಾಂಧಿದೇವಿ, ಧಾರವಾಡದ ಶಾಂತಲಾ ಧರ್ಮರಾಜ್ ಅಂತವರು ಎಷ್ಟೋ ಜನ ಚರಿತ್ರೆಯಲ್ಲಿ ದಾಖಲಾಗಿಲ್ಲ. ಅದಕ್ಕಾಗಿ ನಾವು ಚರಿತ್ರೆಯನ್ನು ಮರಳಿಕಟ್ಟಬೇಕಾಗಿದೆ. ಚರಿತ್ರೆಯನ್ನು ವರ್ತಮಾನದ ತುರ್ತಿಗೆ ಬೇಕಾಗಿರುವ ಮದ್ದನ್ನಾಗಿ ಪರಿವರ್ತಿಸಬೇಕಾಗಿದೆ. ಮಹಿಳೆಗೆ ಅನ್ಯಾಯವಾಗದ ರೀತಿಯಲ್ಲಿ ಜೀವಪರವಾಗಿ ಕಟ್ಟಬೇಕಾದ ಅಗತ್ತಯವಿದೆ. ದೇಹರಾಜಕಾರಣ ಮತ್ತು ಅಧಿಕಾರ ರಾಜಕಾರಣ ತನ್ನನ್ನು ಬಳಕೆಯ ವಸ್ತುವನ್ನಾಗಿಸಿರುವುದನ್ನು ಮಹಿಳೆ ತಿಳಿಯಬೇಕಾಗಿದೆ. ಪುರುಷಶಾಹಿಗಿಂತ ಅವಳ ಪ್ರಜ್ಞೆಯ ತಡೆ ಅವಳಿಗೆ ಮಾರಕವಾಗಿರುವುದನ್ನು ಅರಿಯಬೇಕಾಗಿದೆ ಎಂದು ಪ್ರತಿಪಾದಿಸಿದರು. ಸಂವಾದದಲ್ಲಿ ಮೆಹಬೂಬ್ ಸಾಬ್ ನತ್ತೂ ಪಸಾರಿ, ಮಮತಾ ಅರಸಿಕೆರೆ, ರವಿ ಪಾಟೀಲ, ಕುಮಾರಸ್ವಾಮಿ ಬಿಜ್ಜಿಹಳ್ಳಿ, ರಮೇಶ್ ತೇಲಿ, ಯೆರಿಯಪ್ಪ ಬೆಳಗುರ್ಕಿ, ಪಾರ್ವತಿ ಕನಕಗಿರಿ, ಪ್ರವೀಣ ಪೋಲಿಸ ಪಾಟೀಲ್ ಮುಂತಾದವರು ಭಾಗವಹಿಸಿದ್ದರು. ಬಂಡಾಯದ ಹಿರಿಯ ಚಿಂತಕ ಬರಗೂರು ರಾಮಚಂದ್ರಪ್ಪ, ಬಸವರಾಜ ಕಲ್ಗುಡಿ, ರಾಜಪ್ಪ ದಳವಾಯಿ, ಪುಷ್ಪಭಾರತಿ, ಮುಮ್ತಾಜ್ ಬೇಗಮ್, ಓ ನಾಗರಾಜ್, ನಾಗಭೂಷಣ ಬಗ್ಗನಡು, ಶಿವರುದ್ರ ಕಲ್ಲೋಳಿಕರ, ರವೀಂದ್ರ ನಾಯ್ಕರ್, ಅನಸೂಯಾ ಕಾಂಬಳೆ, ಕೆ ಬಿ ಚಂದ್ರಿಕಾ, ಶೋಭಾ ನಾಯಕ, ಸುಜಾತಾ ಚಲವಾದಿ, ಕವಿತಾ ಕುಸಗಲ್, ಮಲ್ಲೇಶ ಪಾವಗಡ, ಎಮ್ ಡಿ ವಕ್ಕುಂದ, ಚಂದ್ರಕಲಾ ಹಳ್ಳಿ ಮುಂತಾದವರು ಭಾಗವಹಿಸಿದ್ದರು.

ಆರಂಭದಲ್ಲಿ ಕಾವೇರಿ ಬುಕ್ಯಾಳಕರ, ಸುಧಾ ಕೊಟಬಾಗಿ ಕ್ರಾಂತಿಗೀತೆ ಹಾಡಿದರು. ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಪ್ರಾಸ್ತಾವಿಕ ಮಾತನಾಡಿದರು, ಅಡಿವೆಪ್ಪ ಇಟಗಿ ವಂದಿಸಿದರು. ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ ತಾಂತ್ರಿಕ ನಿರ್ವಹಣಣೆಯ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು.