Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಎಐಡಿಎಸ್ಓನಿಂದ ಭಗತ್ ಸಿಂಗ್ ಜನ್ಮ ವಾರ್ಷಿಕೋತ್ಸವ ಆಚರಣೆ

localview news

AIDSO ವಿದ್ಯಾರ್ಥಿ ಸಂಘಟನೆಯಿಂದ ಅಕ್ಟೋಬರ್ 1ರಂದು ಸೆಂಟ್ ಜೋಸೆಫ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸಂತಿ ಬಸ್ತವಾಡದಲ್ಲಿ ಭಗತ್ ಸಿಂಗ್ ಅವರ 114ನೇ ಜನ್ಮ ವಾರ್ಷಿಕವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಆಚರಣೆಗೆ ಪ್ರೋತ್ಸಾಹ ನೀಡಿದರು ಹಾಗೂ ಬೆಂಬಲಿಸಿದರು.

ಈ ಸಮಯದಲ್ಲಿ ಮಾತನಾಡಿದ ರುತಿಕ್ ಹಾಗೂ ವೈಭವ್ ಅವರು ಭಗತ್ ಸಿಂಗ್ ಅವರ ವಿಚಾರಗಳನ್ನು ಹಾಗೂ ಜೀವನದ ಘಟನೆಗಳ ಕುರಿತು ಈ ದೇಶದಲ್ಲಿ ಇರುವ ಹಸಿವು ಬಡತನ ನಿರುದ್ಯೋಗ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ತೊಲಗಿಸಿ ಸಮಾಜವಾದಿ ಭಾರತವನ್ನು ಕಟ್ಟುವ ಅವರ ಜೀವನದ ಕನಸುಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಎಐಡಿಎಸ್ಓ ಬೆಳಗಾವಿ ಕಾರ್ಯಕರ್ತಾದ ರುತಿಕ್ ಕಾಂಬ್ಳೆ, ವೈಭವ್ ಸುತಾರ್, ರಮನ್ ಕೊರವಿ, ಲಕನ್ ಮುನವಳ್ಳಿ, ಸುದೀಪ್ ಸುರುತಿ, ಮತ್ತು ಸಿದ್ದು.ಕೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.