Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಂಜಯ ಪಾಟೀಲ ಹೇಳಿಕೆ ಖಂಡಿಸಿದ ಪಂಚಮಸಾಲಿ ಸಮುದಾಯ

localview news

ಬೆಳಗಾವಿ: ಕಳೆದ ಕೆಲವು ದಿನಗಳ ಹಿಂದೆ ನಡೆದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬ್ಯಾನರ್ ರೋಡ್ ಪೊಲಿಟಿಕ್ಸ್ ವಿಚಾರವಾಗಿ ಮಾತನಾಡುತ್ತಿದ್ದಾಗ ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ ಕಾಂಗ್ರೇಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ರು. ಈ ಬಗ್ಗೆ ಹಲವಾರು ಮಹಿಳಾ ಕಾರ್ಯಕರ್ತರು, ರಾಜಕೀಯ ನಾಯಕರು ಖಂಡಿಸಿದ್ರು.

ಈ ವಿಚಾರವಾಗಿ ರವಿವಾರ ಬೆಳಗಾವಿ ಜಿಲ್ಲಾ ಲಿಂಗಾಯತ ಪಂಮಸಾಲಿ ಸಂಘಟನೆ ಹಾಗೂ ಬಸವ ಸೇನೆ ಮುಖಂಡರು ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಜಿಲ್ಲಾ ಲಿಂಗಾಯತ ಪಂಮಸಾಲಿ ಸಂಘಟನೆ ಅಧ್ಯಕ್ಷ ಆರ್.ಕೆ. ಪಾಟೀಲ ಮಾತನಾಡಿ, ಸಮಾಜದ ಜವಾಬ್ದಾರಿಯುತ ವ್ಯಕ್ತಿ ಒಂದು ಹೆಣ್ಣಿನ ವಿಚಾರವಾಗಿ ಈ ತರ ಟೀಕೆ ಮಾಡಿದ್ದು ಖಂಡನೀಯ, ಇದು ಇಡೀ ಮಹಿಳಾ ಕುಲಕ್ಕೆ ಅವಮಾನ. ನಮ್ಮ ಸಮುದಾಯದ ಜವಾಬ್ದಾರಿಯುತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕುರಿತು ಈ ತರ ಹೇಳಿಕೆ ನಾಚಿಕೇಡಿತನ. ಒಂದು ರಾಷ್ಟೀಯ ಪಕ್ಷ ಜವಾಬ್ದಾರಿಯುತ ವ್ಯಕ್ತಿಯ ನಡುವಳಿಕೆ ಮತ್ತು ಈ ತರ ಶಬ್ಧ ಪ್ರಯೋಗ ನಿಜಕ್ಕೂ ಶೋಭೆ ತರುವಂತದ್ದಲ್ಲ.

ಕೂಡಲೇ ಅವರು ಕ್ಷಮೆ ಯಾಚನೆ ಮಾಡಬೇಕು ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ವತಿಯಿಂದ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇನ್ನೂ ಬಸವ ಸೇನೆಯ ಮುಖಂಡ ಸುರೇಶ ಕಿರಾಯಿ ಮಾತನಾಡಿ ಬಿಜೆಪಿ ಅಂತಹ ಒಂದು ಶಿಸ್ತಿನ ಪಕ್ಷದಲ್ಲಿದ್ದ ಜವಾಬ್ದಾರಿ ವ್ಯಕ್ತಿಯ ಈ ತರ ಹೇಳಿಕೆ ಖಂಡನೀಯ.

ಇವರಿಗೆ ಪಕ್ಷ ಈ ತರ ಸಂಸ್ಕಾರ ಹೇಳುತ್ತಾ? ಮುಂದಿನ ದಿನಗಳಲ್ಲಿ ಯಾವುದೇ ಎಲೆಕ್ಷನ್ ಗಿಮ್ಮಿಕ್ ಸಲುವಾಗಿ ಈ ತರ ಹೇಳಿಕೆ ಸರಿಯಲ್ಲ ಅವ್ರು ವಿಷಯವಾಗಿ ಕ್ಷೇಮ ಯಾಚಿಸಬೇಕು ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ಬಸವೇನೆ ವತಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ರು.