ದೇಶ ಕಾಯುವ ಸೈನಿಕ ನಿಜವಾದ ಆತ್ಮ : ಪ್ರಭುಚನ್ನಬಸವ ಮಹಾಸ್ವಾಮಿಗಳು
ಅಥಣಿ:ಭಾರತ ದೇಶದ ನಿರ್ಮಾಣದಲ್ಲಿ ಲಕ್ಷಾಂತರ ಸೈನಿಕರ ತ್ಯಾಗದ ಬಲಿದಾನವಿದೆ, ದೇಶಕ್ಕೆ ಸೇವೆ ಸಲ್ಲಿಸಿದ ಯೋಧನಿಗೆ ಗೌರವ ಸಲ್ಲಿಸುವುದು ಸ್ಮರಣೀಯ ಕಾರ್ಯ, ಆಧ್ಯಾತ್ಮ ಹಾಗೂ ದೇಶಕಾಯುವ ಸೈನಿಕ ಭಾರತದ ನಿಜವಾದ ಆತ್ಮ ಎಂದು ಮೋಟಗಿ ಮಠದ ಪ್ರಭುಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ಅವರು ಸ್ಥಳೀಯ ನಿವಾಸಿ ಉದ್ದಪ್ಪಾ ಮಕಾಣಿಯವರು 17 ವರ್ಷ ಭಾರತೀಯ ಸೈನ್ಯದಲ್ಲಿ (ಯೋಧನಾಗಿ) ಸೇವೆ ಸಲ್ಲಿಸಿ ನಿವೃತ್ತಿಹೊಂದಿ ತಾಯ್ನಾಡಿಗೆ ಮರಳಿದ ನಿಮಿತ್ಯ ಹಮ್ಮಿಕೊಂಡ ಸ್ವಾಗತಪರ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸೈನಿಕರ ತ್ಯಾಗ ನಿಜವಾದ ತ್ಯಾಗ ಅವರಂಥ ತ್ಯಾಗ ಮಾಡುವವರು ಯಾರೂ ಇಲ್ಲ ಎಂದರು,
ಅಥಣಿ ಶಾಸಕ ಹಾಗೂ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಮಾತನಾಡುತ್ತಾ 17 ವರ್ಷ ತಮ್ಮ ಜೀವನದ ಅಮೂಲ್ಯ ಸಮಯವನ್ನು ದೇಶಸೇವೆಗಾಗಿ ಮೀಸಲಿಟ್ಟ ಉದ್ದಪ್ಪ ಅವರ ಸೇವೆ ಶ್ಲಾಘನೀಯ, ಸೈನಿಕ, ರೈತ, ಶಿಕ್ಷಕರು ದೇಶದ ಆಧಾರಸ್ಥಂಭಗಳು, ಅಂತಹ ಯೋಧ ಉದ್ದಪ್ಪ ಅವರನ್ನು ಸನ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಹಿರಿಯ ಮುಖಂಡ ಸದಾಶಿವ ಬುಟಾಳಿ ಅವರು ಮಾತನಾಡುತ್ತಾ ದೇಶ ಸೇವೆ ಸಮರ್ಪಣಾ ಮನೋಭಾವದಿಂದ ಸಲ್ಲಿಸಿ ತಾಯ್ನಾಡಿಗೆ ಮರಳಿದ ಉದ್ದಪ್ಪಾ ಅವರ ಸೇವೆ ಶ್ಲಾಘನೀಯ, ಜೊತೆಗೆ ಉದ್ದಪ್ಪಾ ಅವರು ಮುಂದೆ ತಮ್ಮ ಮಗನನ್ನೂ ಸಹ ಸೇನೆಗೆ ಸೇರಿಸುತ್ತೆನೆಂದು ಹೇಳಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅನಂತರ ಯೋಧ ಉದ್ದಪ್ಪಾ ಮಾಕಾಣಿ ಅವರು ಮಾತನಾಡುತ್ತಾ ತಮ್ಮ 17 ವರ್ಷ ಸೈನ್ಯದಲ್ಲಿ ಸಲ್ಲಿಸಿದ ಸೇವೆಯ ಬಗೆಗೆ ತಿಳಿಸುತ್ತಾ ಅದ್ದೂರಿಯಿಂದ ಬರಮಾಡಿಕೊಂಡ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿ,
ಅಥಣಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗುರಪ್ಪ ಮಗದುಮ್ ಅವರು ಮಾತನಾಡುತ್ತಾ ಯಾವ ದೇಶದಲದಲಿ ಸೈನಿಕರಿಗೆ ಹಾಗೂ ರೈತರಿಗೆ ಮರ್ಯಾದೆ ಸಿಗುತ್ತೋ ಆ ದೇಶದ ಮಾದರಿ ದೇಶ ಅಂತಹ ಒಂದು ವಿಶೇಷತೆಯನ್ನು ನಾನಿಂದು ಅಥಣಿಯಲ್ಲಿ ಕಂಡೆ ಎಂದರು.
ಈ ಸಮಾರಂಭದಲ್ಲಿ ಶೆಟ್ಟರಮಠದ ಮರುಳಸಿದ್ದ ಮಹಾಸ್ವಾಮಿಗಳು, ಸುರೇಶ ಮಹಾರಾಜರು, ಧರೆಪ್ಪ ಠಕ್ಕಣ್ಣವರ, ಶಿವಾನಂದ ಗುಡ್ಡಾಪೂರ, ಮಹಾದೇವಿ ಮಾಕಾಣಿ, ರಾಜಶ್ರೀ ಮಾಕಾಣಿ, ಕಲ್ಲಪ್ಪ ಮೇತ್ರಿ, ಹೊಳೆಪ್ಪ ಪೂಜಾರಿ, ಲಕ್ಕಪ್ಪ ಯಕ್ಕಂಚಿ, ಜ್ಯೋತಿಬಾ ಮಾಕಾಣಿ, ಹಣಮಂತ ಕೋಬ್ರಿ, ಶಿವಾನಂದ ಗುಡ್ಡಾಪೂರ, ಶ್ರೀಕಾಂತ ಪೂಜಾರಿ, ಮುರಗೆಪ್ಪಾ ಮೇತ್ರಿ, ಅಣ್ಣಪ್ಪ ಮೇತ್ರಿ, ಮುರುಗೇಶ ಬಾನಿ ಸೇರಿದಂತೆ ಅಪಾರ ಬಂಧು ಬಳಗದವರು ಉಪಸ್ಥಿತರಿದ್ದರು.