Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯುಪಿ ರೈತರ ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹ

localview news

ಬೆಳಗಾವಿ:ಉತ್ತರ ಪ್ರದೇಶದ ಲಿಖಿಂಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹಾಯ್ದು 3ಜನ ರೈತರ ಹತ್ಯೆ ಮಾಡಿದ ಆರೋಪಿಯನ್ನು ಗುಂಡಾ ಕಾಯ್ದೆಯಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಭಾರತೀಯ ಕೃಷಿಕ ಸಮಾಜ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನು ವಿರೋಧಿಸಿ ಉತ್ತರ ಪ್ರದೇಶ, ಪಂಚಾಬ, ಹರಿಯಾಣ ಭಾಗಗಳಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊರಾಟ ಮಾಡುತ್ತಿರುವ ರೈತರ ಮೇಲೆ ವಾಹಾನ ಹರಿಸಿ 3 ಜನ ರೈತರನ್ನು ಹತ್ಯೆ ಮಾಡಿ 11 ಜನ ಆಸ್ಪತ್ರೆಯಲ್ಲಿ ಸಾವು, ಬುದುಕಿನ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಕೆಲವರ ಪರಿಸ್ಥಿತಿ ಗಂಭೀರವಾಗಿದೆ.

ಕೇಂದ್ರ ಸರಕಾರದ ಗೃಹಖಾತೆ ರಾಜ್ಯ ಸಚಿವ ಅಜಯ ಮಿಶ್ರತೇಣಿ ಅವರ ಮಗ ನರಹಂತಕನನ್ನು ಕೂಡಲೇ ಗುಂಡಾ ಕಾಯ್ದೆಯಲ್ಲಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.ಕೊಲೆಗಡುಕ ಮಗನ ತಂದೆಯ್ನು ಕೇಂದ್ರ ಸಚಿವ ಸ್ಥಾನದಿಂದ ತತಕ್ಷಣ ವಜಾ ಮಾಡಬೇಕು. ಪ್ರತಭಟನಾ ನಿರತ ರೈತರ ಮೇಲೆ ಒಂದಿಲ್ಲ ಒಂದು ಮಾರಣಾಂತಿಕ ಹಲ್ಲೆ, ಪ್ರಾಣಹಾನಿ ಹತ್ಯೆ ಮಾಡಿದರು. ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸದೆ ಇರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೋಲೆ ಮಡಿದಂತಾಗಿದೆ.

ಕಾರಣ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿ ನ್ಯಾಯ ಸಮ್ಮತ ಬೇಡಿಕೆಗಾಗಿ ಶಾಂತಿಯುತವಾಗಿ ಪ್ರತಿಭಟನಾ ನಿರತ ರೈತರಿಗೆ ಭದ್ರತೆಯನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದರು.ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ರಮೇಶ ವಾಲಿ, ಸಂತೋಷ ಕಾಮತ, ಬಿ.ಎನ್.ಹನುಮಂತ, ಸುಭಾಷ ಪಾಟೀಲ ಸೇರಿದಂತೆ ಮೊದಲಾದವರು ಹಾಜರಿದ್ದರು.