Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪ್ರಿಯಾಂಕಾ ಗಾಂಧಿ ಬಂಧಿಸಿದ್ದು ಖಂಡನೀಯ: ನಾವಲಗಟ್ಟಿ

localview news

ಬೆಳಗಾವಿ :ಉತ್ತರ ಪ್ರದೇಶದ ಲಿಖಿಂಪುರ ಜಿಲ್ಲೆಯಲ್ಲಿ ರೈತರ ಮೇಲೆ‌ ಕಾರು ಚಲಾಯಿಸಿ ಹತ್ಯೆ ಮಾಡಿರುವುದು ಖಂಡನೀಯ. ರೈತರಿಗೆ ಸಾಂತ್ವನ ಹೇಳಲು ತೆರಳಿದ್ದ ಕಾಂಗ್ರೆಸ್ ಮುಂಖಡೆ ಪ್ರಿಯಾಂಕಾ ಗಾಂಧಿ‌ ಅವರನ್ನು ಬಂಧಿಸಿದ್ದು‌ ಹೇಯ ಕೃತ್ಯ ಎಂದು ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.

ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು‌. ದೇಶದಲ್ಲಿ ಸರಕಾರ ಜನಸಾಮಾನ್ಯರ, ರೈತರ, ಮಹಿಳೆಯರ ಮೇಲೆ‌ ದಬ್ಬಾಳಿಕೆ ಮಾಡುತ್ತಿರುವ ಕುರಿತು ಪ್ರತಿಭಟನೆ, ಧ್ವನಿ ಎತ್ತಿದರೆ ಅದನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ದೇಶಾದ್ಯಂತ ಪ್ರತಿಭಟನೆ, ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸುತ್ತಿಲ್ಲ.

ಸಣ್ಣ ಸಣ್ಣ ವಿಷಯದಲ್ಲಿ ಟ್ವಿಟ್ ಮಾಡಿ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆ ಬಗೆ ಹರಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ರೈತರು ಪ್ರತಿಭಟನೆ ಮಾಡುವ ವೇಳೆ ಕೇಂದ್ರದ ಸಚಿವರ ಮಗ ಕಾರು ಚಲಾಯಿಸಿ ರೈತರ ಹತ್ಯೆ ಮಾಡಿದ್ದು ಖಂಡನೀಯ ಎಂದರು.

ದೇಶದ ಜನರು ತಮ್ಮ ಬೇಡಿಕೆಗೆ ಈಡೇರಿಸಲು ಒತ್ತಾಯ ಮಾಡುವುದು ಸರ್ವೆ ಸಾಮಾನ್ಯ. ಅವರ ಮೇಲೆ ಹತ್ಯೆ ಮಾಡುವ ಮಟ್ಟಕ್ಕೆ‌ ಹೋಗುವುದು ಸರಿಯಲ್ಲ ಎಂದರು. ಪ್ರಿಯಾಂಕಾ ಗಾಂಧಿ ಅವರು ರೈತರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ. ಉತ್ತರ ಪ್ರದೇಶದ ಲಿಖಿಂಪುರ ಜಿಲ್ಲೆಯಲ್ಲಿ ಅವರನ್ನು ಬಂಧಿಸಿದ್ದನ್ನು ಕಾಂಗ್ರೆಸ್ ಕಟುವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ಮಾಜಿ ‌ಶಾಸಕರು, ಬಿಜೆಪಿ ‌ಗ್ರಾಮೀಣ‌ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಶಾಸಕಿ‌ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ಜವಾಬ್ದಾರಿ ‌ಸ್ಥಾನದಲ್ಲಿರುವ ಅವರು‌ ಹದ್ದುಬಸ್ತಿನಲ್ಲಿ ಅವರ ಹೇಳಿಕೆ ನೀಡಬೇಡು ಎಂದು ಎಚ್ಚರಿಸಿದರು. ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಟ್ಲರ್ ರೀತಿಯಲ್ಲಿ ಸರಕಾರ ನಡೆಸುತ್ತಿದ್ದಾರೆ.

ರೈತರ ಬಗ್ಗೆ ಕಾಳಜಿ ಇಲ್ಲ. ಕೇಂದ್ರದ ಸಚಿವರು ಯಾರೊಬ್ಬರು ಮುಂದೆ ಬಂದು ರೈತರ ಸಮಸ್ಯೆ ಬಗೆ ಹರಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಮಸೂದೆ ಕಾಯ್ದೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದನ್ನು ರದ್ದು ಮಾಡಿ‌ ಚರ್ಚೆ ಮಾಡಲು ಮೋದಿ ಸರಕಾರ ಮನಸ್ಸು ಮಾಡುತ್ತಿಲ್ಲ.

ರೈತರಿಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಕಾಂಗ್ರೆಸ್ ಮುಂಖಡೆ ಪ್ರಿಯಾಂಕಾ ಗಾಂಧಿ ಅವರಿಗೆ ಬಂಧಿಸಿದ್ದು ಸರಿಯಾದ ಕ್ರಮ ಅಲ್ಲಾ ಎಂದು ಹರಿಹಾಯ್ದರು. ಕೆಪಿಸಿಸಿ‌ ಸದಸ್ಯ ಪರಶುರಾಮ್ ವಗ್ಗನವರ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.