Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಭವ್ಯ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಕಾರಣ: ಸಿಂಗೆ

localview news

ಅಥಣಿ : ಸ್ವಾತಂತ್ರ್ಯಾ ನಂತರ ಭವ್ಯ ಬಡತನದಿಂದ ಮೈ ಕೊಡವಿಕೊಂಡು ಎದ್ದು ಭವ್ಯ ಭಾರತ ನಿರ್ಮಾಣವಾಗಬೇಕಾದರೆ ಕಾಂಗ್ರೇಸ್ ಪಕ್ಷವೇ ಮೂಲ ಕಾರಣ, ಬಿಜೆಪಿ ಸರಕಾರ ಕೇವಲ ಬಣ್ಣ ಬಣ್ಣದ ಮಾತುಗಳನ್ನು ಹೇಳುತ್ತಾ ಜನರಿನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಅಥಣಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಅವರು ಹೇಳಿದರು.

ಅವರು ಸ್ಥಳೀಯ ಮುಖಂಡ ವಿನಾಯಕ ದೇಸಾಯಿ ಅವರ ಕಾರ್ಯಾಲಯದಲ್ಲಿ ಅಥಣಿ ನಗರ ಮತ್ತು ಬ್ಲಾಕ್ ಕಾಂಗ್ರೇಸ್ ಕಮೀಟಿ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ನೆನಪಿನಲ್ಲಿ ಅಥಣಿ ಪುರಸಭೆಯ ವಾರ್ಡ ಮಟ್ಟದ ಮಹಾತ್ಮಾ ಗಾಂಧಿ ಗ್ರಾಮಸ್ವರಾಜ್ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹಿಂದೆ ಕಾಂಗ್ರೇಸ್ ಪಕ್ಷದ ಆಡಳಿತವಿದ್ದಾಗ ಒಂದೆ ಒಂದು ರೂ ಬೆಲೆ ಹೆಚ್ಚಾದಾಗ ರಸ್ತೆಗಿಳಿದು ಪ್ರತಿಭಟನೆ ಮಾಡ್ತಿದ್ದವರು ಇದೀಗ ಎಲ್ಲಿದ್ದಾರೆ ? ಜನಸಾಮಾನ್ಯರ ದಿನಬಳಕೆ ವಸ್ತುಗಳಾದ ಪೆಟ್ರೋಲ್, ಅಡುಗೆ ಎಣ್ಣೆ, ಗ್ಯಾಸ್ ಇತ್ಯಾದಿಗಳ ಬೆಲೆ ಹೆಚ್ಚಳ‌ ಮಾಡಿ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಬಿಜೆಪಿಯವರು ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡ ಬಸವರಾಜ ಬುಟಾಳಿ ಅವರು ಮಾತನಾಡುತ್ತಾ ನಮ್ಮ ಯುವಕರು ಹೆಚ್ಚಾಗಿ ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಕಾರ್ಯಗಳನ್ನು ಹೆಚ್ಚಾಗಿ ಪ್ರಚಾರ ಮಾಡಬೇಕು, ಮುಂಬರುವ ವಾರ್ಡ ಚುಣಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಗೆಲ್ಲುವಂತೆ ನಾವೆಲ್ಲ ಸೇರಿ ಪಣ ತೊಡಬೇಕಿದೆ ಎಂದರು.

ಅನಂತರ ಮುಖಂಡರಾದ ರಾವಸಾಬ ಐಹೊಳೆ, ಧರೆಪ್ಪ ಠಕ್ಕಣ್ಣವರ, ಸುನೀತಾ ಐಹೋಳೆ, ವಿನಾಯಕ ದೇಸಾಯಿ, ಅಸ್ಲಂ‌ ನಾಲಬಂದ ಅವರು ಮಾತನಾಡಿದರು.ಈ ವೇಳೆ ಅಥಣಿ ಬ್ಲಾಕ್ ಯೂಥ್ ಅಧ್ಯಕ್ಷ ರವಿ ಬಡಕಂಬಿ, ಮಹಾದೇವಿ ಹೋಳಿಕಟ್ಟಿ, ರೇಖಾ ಪಾಟೀಲ, ರಮೇಶ‌ ಮಾಳಿ, ಮಹಾಂತೇಶ ಭಾಸಿಂಗಿ, ಲಕ್ಷ್ಮಣ ಬಡಕಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.