Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಾಲೆ ಎಂದರೆ ಸರಸ್ವತಿ ದೇಗುಲ: ಶಾಸಕ‌ ಕುಮಠಳ್ಳಿ

localview news

ಅಥಣಿ:ಶಾಲೆ ಎಂದರೆ ಸರಸ್ವತಿ ದೇಗುಲ, ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಜೀವನ ನಡೆಸುವ ಕಲೆ, ಸಂಸ್ಕ್ರತಿಯನ್ನು ತಿಳಿಸುವ ಕೇಂದ್ರಗಳು. ಶಿಕ್ಷಕರು, ಸೈನಿಕರು, ರೈತರು ನಮ್ಮ ಭಾರತ ದೇಶದ ಬೆನ್ನೆಲುಬು, ಈಗಾಗಲೇ ಮತಕ್ಷೇತ್ರದಾದ್ಯಂತ ಸುಮಾರು105 ಶಾಲಾ ಕೊಠಡಿಗಳನ್ನು 12 ಕೋ ರೂ ಅನುದಾನದಲ್ಲಿ ಸಂಪೂರ್ಣವಾಗಿ ನಿರ್ಮಾಣ ಮಾಡಲಾಗಿದೆ ಎಂದು ಅಥಣಿ ಶಾಸಕ,‌ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು.

ಅವರು ಸ್ಥಳೀಯ ಖಿಳೆಗಾವಿ ರಸ್ತೆಗೆ ಹೊಂದಿಕೊಂಡ ಸರಕಾರಿ ಪದವಿ ಪೂರ್ವ ಕಾಲೇಜ ಕಟ್ಟಡದ ಉದ್ಘಾಟನೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು ಮತಕ್ಷೇತ್ರದಾದ್ಯಂತ ಇನ್ನೂ 118 ಶಾಲಾ ಕೊಠಡಿಗಳ ಬೇಡಿಕೆ ಇದ್ದು 13 ಕೋ ರೂ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇಲ್ಲಿನ ಶಿಕ್ಷಕರ ಪಾತ್ರ ಬಲುದೊಡ್ಡದು, ಇಲ್ಲಿನ ಶಿಕ್ಷಕರು ಇಂದು ಡ್ರೇಸ್ ಕೋಡ್ ಮಾಡಿ. ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಿ ಎಂದರು.

ಇಲ್ಲಿ ವಿದ್ಯಾರ್ಥಿಗಳು ಎರಡು ವರ್ಷ ಸರಿಯಾಗಿ ಅಧ್ಯಯನ‌ಮಾಡಿ ಇದು ನಿಮ್ಮ‌ಜೀವನವನ್ನು ಸುಂದರವಾಗಿ ನಿರ್ಮಿಸುವಂತಹ ವ್ಯವಸ್ಥೆಯಾಗಿದೆ, ಎಲ್ಲ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಿ ಎಂದರು ಜೊತೆಗೆ ಎಲ್ಲ ವಿದ್ಯಾರ್ಥಿಗಳಿಗೆ ನಾನು ಎಲ್ಲರನ್ನು ಸಹೋದರ ಸಹೋದರಿ ಎಂಬ ಭಾವನೆಯಿಂದ ನೋಡುತ್ತೆನೆ ಎಂದು ಪ್ರಮಾಣ ಎಲ್ಲರಿಗೂ ಮಾಡಿಸಿ ಉತ್ತಮ ವಾತಾವರಣ ನಿರ್ಮಾಣ ನಿರ್ಮಿಸಿ ಎಂದು ಸಲಹೆ ನೀಡಿದರು.

ಈ ವೇಳೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣಾ ವಾಲಿ, ಪ್ರಾಚಾರ್ಯ ಎಸ್ ಎಮ್ ಜಂಗಲಗಿ, ಮಲ್ಲು ಹುದ್ದಾರ, ನಿಂಗಪ್ಪ ನಂದೇಶ್ವರ, ಮಲ್ಲು ಹಂಚಿನಾಳ, ಮಲ್ಲಿಕಾರ್ಜುನ ಕೆಂಪಿ, ಶಶಿ ಸಾಳವೆ ಸೇರಿದಂತೆ ಇತರರು ಉಪಸ್ಥಿತರಿದ್ದರು.