Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಭಾರತ ಶರಣರ ತವರೂರು: ಶಾಸಕ‌ ಕುಮಠಳ್ಳಿ

localview news

ಅಥಣಿ:ಭಾರತವು ಶರಣರು, ಸಂತರ ತಪೋಭೂಮಿ. ಇಲ್ಲಿನ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯಿಂದ ಜಗತ್ತಿನಲ್ಲಿಯೇ ಆಧ್ಯಾತ್ಮದ ಅಗ್ರಗಣ್ಯ ಕೇಂದ್ರ ಎಂದು ಪ್ರಖ್ಯಾತಿ ಹೊಂದಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.

ಅವರು ಮಂಗಳವಾರ ಪಟ್ಟಣದ ಶೆಟ್ಟರ ಮಠದ ಲಿಂಗೈಕ್ಯ ಶ್ರೀ ಮರುಳಸಿದ್ಧ ಶಿವಯೋಗಿಗಳ 129 ನೇ ಪುಣ್ಯಸ್ಮರಣೋತ್ಸವ ಹಾಗೂ ಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇಶದಲ್ಲಿ ಸುಮಾರು 1800 ಕ್ಕಿಂತಲೂ ಹೆಚ್ಚಿನ ಜಾತಿ ಧರ್ಮಗಳಿವೆ. ಆದರೆ ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ವಿಶೇಷ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯಿಂದ ಭಾರತ ವಿಶ್ವದಲ್ಲಿಯೇ ತನ್ನ ಹಿರಿಮೆ ಹೆಚ್ಚಿಸಿಕೊಂಡಿದೆ ಎಂದು ಬಣ್ಣಿಸಿದರು.

ಮುಂದುವರೆದು ಮಾತನಾಡುತ್ತಾ ಸಮಾಜ ಸುಧಾರಣೆಯಲ್ಲಿ ಮಠಗಳ ಹಾಗೂ ಸ್ವಾಮೀಜಿಗಳ ಕೊಡುಗೆ ಅಪಾರ. ದೇವಸ್ಥಾನಗಳು ಹಾಗೂ ಮಠಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ತಾಲೂಕಿನ ಧಾರ್ಮಿಕ ಕ್ಷೇತ್ರಗಳು, ಮಠಗಳ ಪ್ರಗತಿಗೆ ಲಕ್ಷಾಂತರ ರೂ. ಅನುದಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇನ್ನೂ ಹೆಚ್ಚಿನ ಅನುದಾನ ತಂದು ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅನಂತರ ಶೆಟ್ಟರ ಮಠದ ಮರುಳಸಿದ್ಧ ಮಹಾಸ್ವಾಮಿಗಳು, ವೀರೇಶ್ವರ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಸಿದ್ದಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಹಾಗೂ ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು.ಈ ವೇಳೆ ಧರೆಪ್ಪ ಠಕ್ಕಣ್ಣವರ, ವೀರಣ್ಣಾ ವಾಲಿ, ನಿಂಗಪ್ಪ ನಂದೇಶ್ವರ ಸೇರಿದಂತೆ ಹಲವು ಗಣ್ಯರು, ಅಪಾರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.