Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸರಳ ರೀತಿಯಲ್ಲಿ ಕಿತ್ತೂರು ಉತ್ಸವ ಆಚರಣೆ: ಸಚಿವ ಕಾರಜೋಳ

localview news

ಬೆಳಗಾವಿ:ಕಿತ್ತೂರಿನ ಗತವೈಭವದ ಇತಿಹಾಸವನ್ನು ಅನಾವರಣ ಮಾಡುವ ರೀತಿಯಲ್ಲಿ ಕಿತ್ತೂರು ಉತ್ಸವವನ್ನು ಮಾಡುತ್ತೇವೆ. ಸರಕಾರಕ್ಕೆ ಜನರ ಪ್ರಾಣ ಮುಖ್ಯ. ಮೈಸೂರು ದಸರಾ ಮಾದರಿಯಲ್ಲಿ ಕಿತ್ತೂರು ಉತ್ಸವ ಮಾಡಲು ಸಾಧ್ಯವಿಲ್ಲ. ಬೆಳಗಾವಿ ಗಡಿನಾಡು ಆಗಿರುವುದರಿಂದ ನೆರೆಯ ರಾಜ್ಯದ ಜನರು ಆಗಮಿಸುವ ಸಂಭವ ಇರುತ್ತದೆ. ಈ‌ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಿತ್ತೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ.ಅದರತ್ತ ಗಮನ ಹರಿಸಲಾಗುವುದು. ಕಿತ್ತೂರು ಕರ್ನಾಟಕ ಮಾಡುವ ಸಂಬಂಧ ಅದರ ಸಾಧಕ‌ ಭಾದಕ ವಿಚಾರ ಮಾಡಬೇಕಾಗುತ್ತದೆ. ಕಿತ್ತೂರು ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು, ಹೈದರಾಬಾದ್ ಕರ್ನಾಟಕ ಹೆಸರು ಬದಲಾವಣೆ ಮಾಡಲು ಕಾರಣ ಇದೆ. ಹೈದ್ರಾಬಾದ್ ನಿಜಾಮರ ಆಡಳಿತದಲ್ಲಿ ಹೈದರಾಬಾದ್ ಕರ್ನಾಟಕ ಎಂದು ನಾಮಕಾರಣ ಮಾಡಿದರು. ಹೈದರಾಬಾದ್ ಕರ್ನಾಟಕದಲ್ಲಿ ಗುಲಾಮಗಿರಿ ಆಡಿತವಾಗಬಾರು. ಶರಣರ ಆಡಳಿತವಾಗಬೇಕೆಂಬ ಉದ್ದೇಶದಿಂದ ಮಾಡಲಾಗಿದೆ ಎಂದರು.

ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೊಡುಗೆಗಳು ಸಾಕಷ್ಟಿವೆ. ಸರ್ವರ ಕಲ್ಯಾಣ ಏಳಿಗೆ ನಮ್ಮ ಚುನಾವಣೆಯ ಗುರಿ. ಈ‌ ನಿಟ್ಟಿನಲ್ಲಿ ಬಿಜೆಪಿ ಎರಡೂ ಕ್ಷೇತ್ರದಲ್ಲಿ ಗೆಲವು ಸಾಧಿಸಲಿದೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.