ಬಡಾಲ ಅಂಕಲಗಿ ದುರಂತ: ಕಂಬನಿ ಮಿಡಿದ ಸಂಸದೆ ಅಂಗಡಿ
ಬೆಳಗಾವಿ :ಧಾರಾಕಾರವಾಗಿ ಸುರಿದ ಮಳೆಗೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮಕ್ಕೆ ಗುರುವಾರ ಸಂಸದೆ ಮಂಗಳಾ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಸಂಸದೆ ಮಂಗಳಾ ಅಂಗಡಿಯ ಮುಂದೆ ಅಳಲು ತೋಡಿಕೊಂಡು ಮೃತಪಟ್ಟ ಕುಟುಂಬಸ್ಥರ ಸಂಬಂಧಿಗಳು ಧಾಕಾರ ಮಳೆಯಿಂದ ಏಕಾಏಕಿ ಮನೆಯ ಗೋಡೆ ಕುಸಿದಿದ್ದರಿಂದ ಸ್ಥಳದಲ್ಲಿಯೇ ಐವರು ಜನರು ಮೃತಪಟ್ಟರು.
ಸಾವು, ಬದುಕಿನ ನಡುವೆ ಹೋರಾಟ ನಡೆಸಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಲಿಲ್ಲ ಎಂದು ಅಳಲು ತೋಡಿಕೊಂಡರು.