Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಡಾಲ ಅಂಕಲಗಿ ದುರಂತ ಸಚಿವ ಕಾರಜೋಳ‌ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

localview news

ಬೆಳಗಾವಿ :ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಡಾಲ ಅಂಕಲಗಿ ಗ್ರಾಮದ ದುರಂತದ ವಿಷಯ ತಿಳಿದು ಕೂಡಲೇ ಕಾಳಜಿಯಿಂದ ಮೃತಪಟ್ಟ ಪ್ರತಿಯೊಬ್ಬರಿಗೂ ತಲಾ ಎರಡೂ ಲಕ್ಷದಂತೆ 14 ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಬಡ ಕುಟುಂಬ ಹಾಗೂ ಕರ್ನಾಟಕ ಸರಕಾರದ ಪರವಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಲಸಂಪನ್ಮೂಲ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದರು. ಗುರುವಾರ ಬಡಾಲ ಅಂಕಲಗಿಗೆ ಭೇಟಿ ನೀಡಿ‌ ಪತ್ರಕರ್ತರ ಜೊತೆ ಮಾತನಾಡಿದರು. ಮಹಾನವಮಿ ಅಮವಾಸ್ಯೆಯ ದಿನ ಬಡಲಾ ಅಂಗಲಗಿಯಲ್ಲಿ ಗ್ರಾಮದಲ್ಲಿ ಬಡವರ ಮನೆ ಬಿದ್ದು ಏಳು ಜನ ಮೃತಪಟ್ಟಿದ್ದು ಅತ್ಯಂತ ‌ನೋವಿನ ಸಂಗತಿ. ಆ ನೋವನ್ನು ತುಂಬಿಕೊಡಲು ಯಾರಿಂದಲೂ ಸಾಧ್ಯವಿಲ್ಲ.

ಸರಕಾರದಿಂದ ಪರಿಹಾರ ಕೊಡಬಹುದು. ಆದರೆ ಪ್ರಾಣ ಮರಳಿ ಕೊಡಲು ಸಾಧ್ಯವಿಲ್ಲ. ಮೃತಪಟ್ಟ ಪ್ರತಿಯೊಬ್ಬರಿಗೂ ತಲಾ ಐದು ಲಕ್ಷ ರೂ.ಗಳಂತೆ 35 ಲಕ್ಷ ರೂ.ಗಳ ಪರಿಹಾರವನ್ನು ಸರಕಾರದ ವತಿಯಿಂದ ನೀಡಲಾಗಿದೆ. ಮನೆ ಹಾನಿಯಾಗಿರುವ ಕುರಿತು ಸರಕಾರದಿಂದ ಐದು ಲಕ್ಷ ರೂ. ಅನುದಾನದಲ್ಲಿ ಮನೆ ನಿರ್ಮಾಣ‌ ಮಾಡಿ ಕೊಡಲಾಗುವುದು ಎಂದರು.