Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೆಎಲ್ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ದತ್ತಿ ಪ್ರಶಸ್ತಿ : ವಕೀಲರೆ ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಿ

localview news

ಬೆಳಗಾವಿ:ಕರ್ನಾಟಕ ಲಾ ಸೊಸೈಟಿಯ ರಾಜ ಲಖಮಗೌಡ ಕಾನೂನು ಮಹಾವಿದ್ಯಾಲಯದ ದತ್ತಿ ಪ್ರಶಸ್ತಿ ಪುರಸ್ಕಾರ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಮಂಜುನಾಥ ನಾರಾಯಣ ಭಟ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸಿ. ಜೆ. ಎಂ ನ್ಯಾಯಾಧೀಶರು ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಎಲ್ ಎಲ್ ಬಿ ವಿದ್ಯಾರ್ಥಿ ಕೃಷ್ಣ ಬಾಂದೋಕರ್ ಅವರು ಪ್ರತಿಷ್ಟಿತ ಎಂ. ಕೆ ನಂಬಿಯಾರ ಸ್ವರ್ಣ ಪದಕ ಪಡೆದರು.

ಭಾರತ ಸರ್ಕಾರದ ಅಟಾರ್ನಿ ಜನರಲ್ ಕೆ. ಕೆ ವೇಣುಗೋಪಾಲ ಅವರು ತಮ್ಮ ತಂದೆ ಹಾಗೂ ಸಂವಿಧಾನ ತಜ್ಞ ಎಂ. ಕೆ.ನಂಬಿಯಾರ ಅವರ ನೆನಪಿನಲ್ಲಿ ಸ್ಥಾಪಿಸಿದ ಈ ಪದಕವನ್ನು ಪ್ರಥಮ ಎಲ್ ಎಲ್ ಬಿ ಪರೀಕ್ಷೆಯಲ್ಲಿ ಸಂವಿಧಾನಿಕ ಕಾನೂನು ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ನೀಡಲಾಗುತ್ತದೆ.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶ ಭಟ್ ಅವರು ಯುವ ವಕೀಲರು ಬಡವರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡುವುದನ್ನು ತಮ್ಮ ಆದ್ಯತೆ ಎಂದು ತಿಳಿಯಲು ಸಲಹೆ ನೀಡಿದರು.

ಇದು ನಿಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ. ಕೇವಲ ಹಣ ಗಳಿಸುವುದೇ ವಕೀಲರ ಆದ್ಯತೆ ಆಗ ಬೇಕಾಗಿಲ್ಲ. ಈ ಸಮಾಜಕ್ಕೆ ಒಳ್ಳೆಯ ವಕೀಲರು ಹಾಗೂ ಒಳ್ಳೆಯ ನ್ಯಾಯಾಧೀಶರ ಅವಶ್ಯಕತೆ ಇದೆ. ಅದನ್ನು ಪೂರೈಸುವತ್ತ ನಿಮ್ಮ ಚಿತ್ತ ಇರಬೇಕು ಎಂದು ಅವರು ಹೇಳಿದರು.

ಅನೇಕ ಯುವ ವಕೀಲರು ಕೇವಲ ಒಬ್ಬ ಹಿರಿಯರ ಶಿಶಿಕ್ಷು ವಾಗಿ ಕೆಲಸ ಮಾಡುತ್ತಾ ಇರುತ್ತಾರೆ. ಅವರಿಗೆ ಕೇವಲ ಒಬ್ಬ ವಕೀಲರು ಆದರ್ಶ ವಾಗಿರಬಾರದು. ಅವರು ವಕೀಲರ ಸಂಘದ ಎಲ್ಲಾ ಸದಸ್ಯ ರಿಂದಲೂ ಪಾಠ ಕಲಿಯುವ ಅವಕಾಶ ಗಳು ಇರುತ್ತವೆ. ಅವುಗಳನ್ನು ಅವರು ಕಳೆದು ಕೊಳ್ಳಬಾರದು. ನ್ಯಾಯಾಲಯ ದಲ್ಲಿ ಕುಳಿತು ಪ್ರತಿ ವಕೀಲರ ವಾದ -ವಿವಾದ, ಪಾಟಿ ಸವಾಲು ಗಳನ್ನು ಗಮನಿಸಬೇಕು. ಅವುಗಳನ್ನು ತಮ್ಮ ಕಲಿಕೆಯ ಅವಕಾಶ ಗಳು ಎಂದು ತಿಳಿಯಬೇಕು. ಕಾಲೇಜಿನಲ್ಲಿ ಇದ್ದಾಗ ನಿಮ್ಮ ತಪ್ಪುಗಳನ್ನು ತಿದ್ದಲು ಶಿಕ್ಷಕರು ಇರುತ್ತಾರೆ. ಆದರೆ ನೀವು ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಆರಂಭಿಸಿದಾಗ ನಿಮ್ಮ ತಪ್ಪುಗಳನ್ನು ತಿದ್ದಲು ಯಾರೂ ಇರುವುದಿಲ್ಲ. ಹಿರಿಯ ವಕೀಲರಿಂದ ನೀವು ನೋಡಿ ಕಲಿಯಬೇಕು. ನಿಮ್ಮ ಒಂದು ಸಣ್ಣ ತಪ್ಪು ನಿಮ್ಮ ಕಕ್ಷಿದಾರನಿಗೆ, ಅವನ ಕುಟುಂಬಕ್ಕೆ, ಅವನ ಇಡೀ ತಲೆಮಾರಿಗೆ ತೊಂದರೆ ಕೊಡಬಹುದು. ಆದ್ದರಿಂದ ನೀವು ಹುಷಾರು ಆಗಿರಬೇಕು,’’ ಎಂದು ಅವರು ಹೇಳಿದರು.

ಸೊಸೈಟಿ ಕಾರ್ಯದರ್ಶಿ ವಿವೇಕ ಕುಲಕರ್ಣಿ ಅವರು ವಕೀಲಿ ವೃತ್ತಿಯ ಮೂಲ ತತ್ವ ವೇ ಪ್ರಾಮಾಣಿಕತೆ ಹಾಗೂ ಉದ್ದೇಶ ಶುದ್ಧಿ. ಯುವ ವಕೀಲರು ಕಾರ್ಯ ಕೌಶಲ್ಯ ಕಲಿತ ನಂತರ ಯಶಸ್ಸು ತಾನಾಗಿಯೇ ಬರುತ್ತದೆ. ಅದಕ್ಕೆ ಈ ವೃತ್ತಿ ಯ ಬಗ್ಗೆ ಒಂದು ಮಾತು ಇದೆ. ಮೊದಲು ಸರಸ್ವತಿ ಯನ್ನು ಒಳಿಸಿಕೊಳ್ಳಲು ಕಲಿಯಿರಿ. ಆ ನಂತರ ಲಕ್ಷ್ಮಿ ತಾನಾಗಿಯೇ ನಿಮ್ಮ ಬಳಿ ಬರುತ್ತಾಳೆ’’, ಎಂದು ಅವರು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್. ವಿ ಗಣಾಚಾರಿ ಯವರು ಯುವ ವಿದ್ಯಾರ್ಥಿಗಳು ವಕೀಲಿ ಪದವಿ ಪಡೆದ ಮೊದಲ ಕೆಲವು ವರ್ಷ ಗಳ ವರೆಗೆ ಪ್ರಾಯೋಗಿಕ ಜ್ಞಾನ ಪಡೆಯಲು ನಿಯೋಜಿಸಬೇಕು. ವಕೀಲರು ಎಂದರೆ ಜೀವನ ಪರ್ಯಂತ ವಿದ್ಯಾರ್ಥಿ ಯಾಗಿ ಇರುವವರು. ಯಾರೂ ಸದಾ ಕಲಿಕೆ ಯಲ್ಲಿ ತೊಡಗಿರುತ್ತಾರೋ, ಯಾರೂ ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತರೋ, ಯಾರೂ ಬಡ- ಬಗ್ಗರ ಬಗ್ಗೆ ಸಹಾನುಭೂತಿ ಇಟ್ಟುಕೊಂಡಿರುತ್ತರೋ, ಅವರಿಗೆ ವಕೀಲಿ ವೃತ್ತಿ ಎಂದಿಗೂ ಕೈ ಬಿಡುವುದಿಲ್ಲ. ಕೆಲವು ಯುವ ವಕೀಲರು ಮೊದಲ ಕೆಲ ವರ್ಷ ಹಣ ಗಳಿಕೆ ಸಾಧ್ಯ ಇಲ್ಲ ಎಂದುಕೊಂಡು ವೃತ್ತಿ ಬಿಟ್ಟು ಹೋಗುತ್ತಾರೆ. ನೀವು ಹಾಗೆ ಮಾಡಬೇಡಿ. ತಾಳ್ಮೆ ಯಿಂದ ಕೆಲಸ ಮಾಡುತ್ತೀರಿ. ನಿಮಗೆ ಯಶಸ್ಸು ಸಿಕ್ಕೆ ಸಿಗುತ್ತದೆ ಎಂದು ಹೇಳಿದರು. ಮೂವತ್ತು ವರ್ಷ ಕಷ್ಟ ಪಟ್ಟು ದ್ರಾಕ್ಷಿ ಬೆಳೆ ಪಡೆದ ರೈತ ನಿಗೆ ಮಹಾರಾಜರು ಸನ್ಮಾನ ಮಾಡಿದ ಕತೆಯನ್ನು ಅವರು ಹೇಳಿದರು. ಕೋವಿಡ್ ನಿಂದಾಗಿ ಕಾಲೇಜಿನ ಕೋಣೆ ಗಳಲ್ಲಿ ಪಾಠ ಇಲ್ಲದೇ ಹೋದರೂ ಕೇವಲ ಆನ್ಲೈನ್ ಪಾಠ ಗಳನ್ನು ಕೇಳಿಸಿ ಕೊಂಡ ಬಳಿಕವೂ ವಿದ್ಯಾರ್ಥಿಗಳು ತುಂಬಾ ಒಳ್ಳೆಯ ಅಂಕ ಗಳನ್ನು ಗಳಿಸಿದ್ದಾರೆ ಎಂದು ಅವರು ಸಂತೋಷ ವ್ಯಕ್ತ ಪಡಿಸಿದರು

ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೇಯಾ ಉತ್ತೂರೆ, ವಿದ್ಯಾರ್ಥಿಗಳಾದ ಬಸವಪ್ರಸಾದ ಸಂಕಪಾಲ, ಮಾಳವಿಕ ಹಾಗೂ ಇತರರು ತಮ್ಮ ಅನುಭವ ಹಂಚಿಕೊಂಡರು. ಪ್ರಾಂಶುಪಾಲ ಡಾ. ಎ. ಎಚ್ ಹವಾಲ್ದಾರ್ ಸ್ವಾಗತಿಸಿದರು. ಪ್ರೋ. ಪಿ. ಎ ಯಜುರ್ವೇದಿ ಅವರು ಅತಿಥಿ ಪರಿಚಯ ಮಾಡಿಕೊಟ್ಟರು, ವಿದ್ಯಾರ್ಥಿಗಳಲ್ಲಿ ಸುಹಾಸ್ ಹುದ್ದಾರ್ ಹಾಗೂ ಉಜ್ವಲಾ ಹವಾಲ್ದಾರ್ ಸರ್ವೋತ್ತಮ ಪ್ರಶಸ್ತಿ ಪಡೆದರು. ಪ್ರಿಯಾಂಕಾ ರಾಠಿ ಕಾರ್ಯಕ್ರಮ ನಡೆಸಿ ಕೊಟ್ಟರು, ಸ್ನೇಹ ಕುಲಕರ್ಣಿ ಗಾಯನ ಮಾಡಿದರು, ಮಹಿಳಾ ಪ್ರತಿನಿಧಿ ಪೂಜಾ ಬಾಡ ಕುಂದರಿ ವಂದಿಸಿದರು.