Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಿಂದಗಿ ಬಿಜೆಪಿ ಮುಖಂಡರಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಡಿಸಿಎಂ ಸವದಿ

localview news

ಅಥಣಿ:ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಅವರನ್ನು ಅಭ್ಯರ್ಥಿಯೆಂದು ವರಿಷ್ಠರು ಆಯ್ಕೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯ ಇನ್ನುಳಿದ ಬಿಜೆಪಿ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ಸಿಂದಗಿ ಉಪಚುನಾವಣೆ ಉಸ್ತುವಾರಿ ಲಕ್ಷ್ಮಣ್ ಸವದಿ ಅಥಣಿಯಲ್ಲಿ ಹೇಳಿಕೆ ನೀಡಿದರು.

ಅಥಣಿ ಪಟ್ಟಣದಲ್ಲಿ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ನೂತನ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ ನೆರವೇರಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿ, ಹತ್ತಾರು ಜನರನ್ನು ಪಕ್ಷದ ಅಭ್ಯರ್ಥಿಗಳು ಎಂದು ಆಯ್ಕೆ ಮಾಡುದಿಲ್ಲ, ಒಬ್ಬರನ್ನೇ ಆಯ್ಕೆ ಮಾಡುವುದು ಪಕ್ಷ ಅಂದಮೇಲೆ ಸಣ್ಣಪುಟ್ಟ ವೈಮನಸು ಇರುವುದು ಸಹಜ, ನಾನು ಎರಡು ದಿನ ಸಿಂದಗಿ ಕ್ಷೇತ್ರದಲ್ಲಿ ಇದ್ದುಕೊಂಡು ಎಲ್ಲಾ ನಮ್ಮ ಬಿಜೆಪಿ ಮುಖಂಡರನ್ನು ಒಗ್ಗೂಡಿಸಿ ಮತದಾರರ ಬಳಿ ಹೋಗುತ್ತವೆ, ನಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತವೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಬಿಜೆಪಿ ಪಕ್ಷದಿಂದ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬರುತ್ತಾರೆ ಮಾಜಿ ಶಾಸಕ ರಾಜು ಕಾಗೆ ಹೇಳಿಕೆ ವಿಚಾರ:

ಇನ್ನೂ ಸಾರ್ವರ್ತಿಕ ಚುನಾವಣೆಗೆ 16 ತಿಂಗಳು ಬಾಕಿ ಇದೆ ರಾಜು ಕಾಗೆ ಅವರು ಯಾಕೆ ಆ ರೀತಿ ಹೇಳಿದ್ದಾರೆಂಬುದು ಗೊತ್ತಿಲ್ಲ, ಮಾಜಿ ಶಾಸಕ ರಾಜು ಕಾಗೆ 16 ತಿಂಗಳ ಬಳಿಕ ಅವರು ಎಲ್ಲಿ ಇರುತ್ತಾರೆ ಎಂಬುದು ಅವರನ್ನೇ ಕೆಳಿ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಅವರು ಕಾಗವಾಡ ಮಾಜಿ ಶಾಸಕ ಕಾಗೆ ಅವರಿಗೆ ಟಾಂಗ್ ನೀಡಿದರು.

ಆರ್ ಎಸ್ ಎಸ್ ನಲ್ಲಿ ಗುರ್ತಿಸಿಕೊಂಡವರು ಐಪಿಎಸ್ ಐಎಎಸ್ ಅಧಿಕಾರಿಗಳು ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು, ಈ ಹೇಳಿಕೆಯನ್ನು ಲಕ್ಷ್ಮಣ್ ಸವದಿ ಸ್ವಾಗತಿಸಿ, ಆರ್ ಎಸ್ ಎಸ್ ನವರು ಐಪಿಎಸ್ ಐಎಎಸ್ ಅಧಿಕಾರಿ ಆದರೆ ಸಂತೋಷದ ವಿಷಯ. ಅಂತ ಅಧಿಕಾರಿಗಳು ಎಲ್ಲಿರುತ್ತಾರೆ ನಾವು ಅವರಿಗೆ ಹೋಗಿ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದರು.