Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರೈತ ಹೊರಾಟಗಾರ, ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ ಇನ್ನು ನೆನಪು ಮಾತ್ರ

localview news

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿರವರ ಅಂತ್ಯಕ್ರಿಯೆ ಬೆಳಗಾವಿಯ ಸದಾಶಿವ ನಗರ ಸ್ಮಶಾನದಲ್ಲಿ ಲಿಂಗಾಯತ ಸಂಪ್ರದಾಯದಂತೆ ಸಕಲ ಗೌರವಗಳೊಂದಿಗೆ ನೆರವೇರಿತು.

ನಿನ್ನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಾವಳಗಿ ಮಠಕ್ಕೆ ಹರಕೆ ಪಾದಯಾತ್ರೆ ಹೋಗುವ ವೇಳೆ ತೀವ್ರ ಅಸ್ವಸ್ಥರಾಗಿ ಕೊನೆಯುಸಿರೆಳಿದಿದ್ದ ಕಲ್ಯಾಣರಾವ್ ಮುಚಳಂಬಿ ಅಂತ್ಯಕ್ರಿಯೆ ಇಂದು ನೆರವೇರಿತು. ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ಬೆಳಗಾವಿಯ ಆಂಜನೇಯ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ವಿವಿಧ ಕ್ಷೇತ್ರಗಳ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಬೆಳಗಾವಿಯ ಆಂಜನೇಯ ನಗರ ನಿವಾಸದಿಂದ ಎಸ್.ಬಿ.ಸಿದ್ನಾಳ್ ವೃತ್ತದ ಮಾರ್ಗವಾಗಿ ಮಹಾಂತೇಶ ನಗರ, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯವರೆಗೂ ಮೆರವಣಿಗೆ ಸಾಗಿತು.

ಸದಾಶಿವನಗರದ ರುದ್ರಭೂಮಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜ‌ನಸ್ತೋಮವೇ ನೆರೆದಿತ್ತು. ಗದಗದ ಜಗದ್ಗುರು ಡಾ.ತೊಂಟದ ಸಿದ್ಧರಾಮ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು, ಸಾವಳಗಿ ಸಿದ್ಧಸಂಸ್ಥಾನಮಠದ ಕುಮಾರೇಂದ್ರ ಜಗದ್ಗುರುಗಳು, ಕಾರಂಜಿಮಠ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಘಟಪ್ರಭಾ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾಜು೯ನ ಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಘಟಪ್ರಭಾದ ಶ್ರೀ ವಿರುಪಾಕ್ಷ ದೇವರು, ಶ್ರೀ ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮಿಗಳು ಸುತಗಟ್ಟಿ ಶಿವಾಪೂರ ಸೇರಿದಂತೆ ವಿವಿಧ ಮಠಾಧೀಶರು ಕಲ್ಯಾಣರಾವ್ ಮುಚಳಂಬಿರವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬೆಳಗಾವಿ ಸಂಸದೆ ಶ್ರೀಮತಿ ಮಂಗಲಾ ಅಂಗಡಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನೀಲ ಬೆನಕೆ, ಮಾಜಿ ಸಚಿವರಾದ ಶಶಿಕಾಂತ ನಾಯ್ಕ್, , ಎ.ಬಿ.ಪಾಟೀಲ, ಬಿಜೆಪಿ ಮುಖಂಡ ಎಂ.ಬಿ.ಜಿರಲಿ, ರುದ್ರಣ್ಣ ಚಂದರಗಿ, ಮಾಜಿ ಮೇಯರ ನಿಂಗಪ್ಪ ನಿರ್ವಾಣಿ, ಜೆಡಿಎಸ್ ನಾಯಕ ಅಶೋಕ ಪೂಜಾರಿ, ಸ್ಥಳೀಯ ಕಾರ್ಪೊರೇಟರ್ ರಾಜಶೇಖರ್ ಡೋಣಿ, ಭಾರತ ಸೇವಾದಳ ರಾಜ್ಯ ಉಪದಳಪತಿ ಬಸವರಾಜ ಹಟ್ಟಿಗೌಡರ ಉಪಸ್ಥಿತರಿದ್ದರು. ರೈತ ಮುಖ‌ಂಡರಾದ ಲಿಂಗರಾಜ ಪಾಟೀಲ, ಶಿವನಗೌಡ ಪಾಟೀಲ, ಸಿದಗೌಡ ಮೋದಗಿ, ಶಿವಪುತ್ರಪ್ಪ ಜಕಬಾಳ, ರಾಮಣ್ಣ ಹುಕ್ಕೇರಿ, ಚೂನಪ್ಪ ಪೂಜೇರಿ,ಮಲ್ಲಿಕಾಜು೯ನ ವಾಲಿ, ಅಪ್ಪಾಸಾಹೇಬ್ ದೇಸಾಯಿ, ಬಸಪ್ಪ ಕಪ್ಪಲಗುದ್ದಿ, ಭೀಮಶಿ ಕಡಾಡಿ, ರಾವಸಾಹೇಬ್ ಬೆಳಕೂಡ್, ಬಾಳಪ್ಪ ಪಾಟೀಲ್, ರಾಜಕುಮಾರ್ ಜಂಬಗಿ, ರಮೇಶ್ ಬೆಳಕೂಡ್, ಸುರೇಶ್ ಕಾಡದೇವರ, ರಮೇಶ್ ತುಕ್ಕಾನಟ್ಟಿ, ಕಲಗೌಡ ಪಾಟೀಲ್ ಅಗಸಗಾ, ಪರ್ವತಗೌಡ ಬಾಬಾಗೌಡ ಪಾಟೀಲ್ ಚಿಕ್ಕಬಾಗೇವಾಡಿ, ಟಬ್ಬಗೌಡ ಪಾಟೀಲ್ ಚಿಕ್ಕೋಡಿ, ಸಾಹಿತಿಗಳಾದ ಯ.ರು ಪಾಟೀಲ, ಬಸವರಾಜ ಗಾರಗಿ, ಚಿತ್ರ ನಟ ಸಿ.ಕೆ.ಮೆಕ್ಕೇದ, ನಿವೃತ್ತ ಪ್ರಾಚಾರ್ಯ ಎಸ್ ಬಿ ಚೋಬಾರಿ, ಶಿವಕುಮಾರ ಕಟ್ಟಿಮನಿ, ಸುರೇಶ ಪಾಟೀಲ, ಸುರೇಶ ಕಾಡದವರ, ಮಹಾಂತೇಶ ತಾಂವಶಿ, ಗಣುಸಿಂಘ ರಜಪೂತ , ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ, ಬೆಳಗಾವಿಯ ದಿನಪತ್ರಿಕೆಗಳ ಸಂಪಾದಕರು ಗಳಾದ ಲೋಕದರ್ಶನದ ಶರತ್ಚಂದ್ರ ದೇಸಾಯಿ , ನಾಡೋಜ ದಿನಪತ್ರಿಕೆಯ ಸಲೀಮ್ ಧಾರವಾಡ್ಕಕರ್ , ಲೋಕವಾರ್ತೆ ದಿನಪತ್ರಿಕೆಯ ಹಿರೋಜಿ ಮಾವರ್ಕರ್. ಹಳ್ಳಿಯ ಸಂದೇಶದ ಕುಂತಿನಾಥ ಕಲಮನಿ , ಹಿರಿಯ ಪತ್ರಕರ್ತರಾದ ಎಂ ಎನ್ ಪಾಟೀಲ ,ಅಶೋಕ್ ಜೋಶಿ , ಈಶ್ವರ ಹೂಟಿ, ಪಾರೇಶ ಭೋಸಲೆ , ಶ್ರೀಶೈಲ ಮಠದ, ಮುನ್ನಾ ಬಾಗವಾನ್ , ವಿರೂಪಾಕ್ಷ ಕವಟಗಿ , ಸುಧಾಕರ ತಳವಾರ, ಗಂಗಾಧರ , ಕಟಾವಕರ, ಮೋಹನ ಗಡಾದ, ಬೆಂಗಳೂರು ಪ್ರೆಸ್ ಕ್ಲಬ್ ನಿರ್ದೇಶಕ ಕೆ ಎಸ್ ನಾಗರಾಜ್ , ಕಾಂಗ್ರೇಸ ನಾಯಕರಾದ ಲಖನ ಸಂಸುದ್ದಿ, ಮಾರುತಿ ವಿಜಯನಗರ, ಯಲ್ಲಪ್ಪ ಕಪ್ಪಲಗುದ್ದಿ, ಸುರೇಶ ಕರೋಶಿ ಸ್ಥಳೀಯ ಮತ್ತು ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸ್ಥಳೀಯ ಜನಪ್ರತಿನಿಧಿಗಳು , ಮುಚಳಂಬಿಯವರ ಸಂಬಂಧಿಕರು ಬಂಧು ಬಳಗದವರು ಭಾಗವಹಿಸಿದ್ದರು. ಮಲ್ಲಾಪೂರ , ಘಟಪ್ರಭಾ . ಗೋಕಾಕ, ಶಿವಾಪೂರ, ಕೊಳವಿ, ಅಕ್ಕತಂಗೇರಹಾಳ, ಬೆಳಗಾವಿ, ಗುಲಬಗಾ೯ , ಕಲ್ಲೋಳ್ಳಿ, ಯ ದಿವಂಗತರ ಅತ್ಮೀಯರು ಭಾಗವಹಿಸಿದ್ದರು .

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಿಲ್ಲೆಯ ಓರ್ವ ರೈತ ಹೋರಾಟಗಾರರು ಮತ್ತು ರೈತ ಚಿಂತಕರು ಆಗಿದ್ದ ಕಲ್ಯಾಣರಾವ್ ಮುಚಳಂಬಿ ಅವರು ನಿಧನರಾಗಿದ್ದು ನಮಗೆ ತೀವ್ರ ಆಘಾತವಾಗಿದೆ. ರೈತ ಮುಖಂಡ ಪ್ರೋ.ಎಂ.ಡಿ.ನಂಜುಂಡಸ್ವಾಮಿ ಅವರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ರೈತರ ಹೋರಾಟಗಳು ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಹಸಿರು ಕ್ರಾಂತಿ ಪತ್ರಿಕೆಯನ್ನು ಹುಟ್ಟು ಹಾಕಿ ಓರ್ವ ಪತ್ರಕರ್ತರಾಗಿಯೂ ಯಶಸ್ವಿಯಾಗಿದ್ದರು ಎಂದು ಸ್ಮರಿಸಿಕೊಂಡರು.ರೈತ ಮುಖಂಡ ಚೂನಪ್ಪ ಪೂಜಾರಿ ಅವರು ಮಾತನಾಡಿ ಕಲ್ಯಾಣರಾವ್ ಮುಚಳಂಬಿ ಅವರ ನಿಧನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಇಡೀ ರೈತರಿಗೆ ದೊಡ್ಡ ಆಘಾತವಾಗಿದೆ‌. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.