Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಹರ್ಷ ಶುಗರ್ಸ್ ಕಬ್ಬು ನುರಿಸುವ ಹಂಗಾಮಿಗೆ ಅದ್ಧೂರಿ ಚಾಲನೆ

localview news

ಸವದತ್ತಿ : ಹರ್ಷ ಶುಗರ್ಸ್ ನಲ್ಲಿ 2021-22 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಬಾಯ್ಲರ್ ಪ್ರದೀಪನದ ಮೂಲಕ ಹೂಲಿ ಸಾಂಬಯ್ಯನ ಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು. ಜೊತೆಗೆ ಕಾರ್ಖಾನೆಗೆ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಕಬ್ಬು ಪೂರೈಕೆ ಮಾಡಿದ 10ಕ್ಕೂ ಹೆಚ್ಚು ರೈತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಲ್ಲದೆ, ಕಾರ್ಖಾನೆಯ ಉದ್ಯೋಗಿಗಳಿಗೆ ಹೊಸದಾಗಿ ನಿರ್ಮಿಸಲಾದ ವಸತಿ ಸಮುಚ್ಛಯಗಳ ಹಾಗೂ ಹೊಸ ಕಂಟ್ರೋಲ್ ರೂಮ್ ನ ವಾಸ್ತು ಶಾಂತಿಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಹರ್ಷ ಶುಗರ್ಸ್ ನ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್, ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ, ನಿರ್ದೇಶಕ ಮೃಣಾಲ ಹೆಬ್ಬಾಳಕರ್, ಜನರಲ್‌ ಮ್ಯಾನೇಜರ್ ಸದಾಶಿವ ತೋರಾಟ್, ಕೇನ್ ಜನರಲ್ ಮ್ಯಾನೇಜರ್ ಎನ್ ಎಮ್ ಪಾಟೀಲ, ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಚೌಕಿಮಠ್, ಎಲ್ಲ ಸದಸ್ಯರು, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಕಿತ್ತೂರು ಹಾಗೂ ಸವದತ್ತಿ ಭಾಗದ ರೈತ ಮುಖಂಡರು ಉಪಸ್ಥಿತರಿದ್ದರು.