Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆ ಅವಶ್ಯವಾಗಿದೆ: ಜುಟ್ಟನವರ

localview news

ಬೆಳಗಾವಿ:ವಿದ್ಯಾರ್ಥಿಗಳು ಇಂದಿನ ದಿನಮಾನಗಳಲ್ಲಿ ಮಾತೃ ಭಾಷೆ ಕನ್ನಡ ಮತ್ತು ಮರಾಠಿ ಭಾಷೆಯೊಂದಿಗೆ ಇತರೆ ಭಾಷೆಗಳು ಕಲಿಯುವುದು ಅವಶ್ಯವಾಗಿದೆ ಎಂದು ಬಿಇಒ ರುದ್ರಗೌಡ ಜುಟ್ಟನವರ ಹೇಳಿದರು.ಭಾನುವಾರ ನಗರದ ರಾಜಶೇಖರ ಕೋಳಿಮಠ ಅವರು ರಚಿಸಿರುವ ಇಂಗ್ಲಿಷ್ ಮೇಡ್ ಇಸಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ರಾಜಶೇಖ ಕೋಳಿಮಠ ಮಹತ್ವದ ಸಾಧನೆ ಮಾಡಿದ್ದಾರೆ. ಲ ಭಾಷೆಯ‌ ಮೇಲೆ ಒಳ್ಳೆಯ ರೀತಿ ಮಾತನಾಡುವರಿಗೆ ರಾಷ್ಟ್ರ ಗೌರವ ಹೆಚ್ಚುತ್ತದೆ ಎಂದರು.

ಪ್ರಾರಂಭಿಕ ಹಂತದಲ್ಲಿ ಇಂಗ್ಲಿಷ್ ಕಲಿಯಲು ಹಿಂಜರಿಯುವ ಪರಿಸ್ಥಿತಿ ಇತ್ತು. ನೇರವಾಗಿ ಪಿಯುಸಿಗೆ ಬಂದ ಮೇಲೆ ಇಂಗ್ಲಿಷ್ ಕಡ್ಡಾಯವಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಅನಕೂಲವಾಗುವ ನಿಟ್ಟಿನಲ್ಲಿ ರಾಜಶೇಖರ ಕೋಳಿಮಠ ಅವರು ಇಂಗ್ಲಿಷ್ ಪುಸ್ತಕ ಬರೆದಿದ್ದಾರೆ. ಅದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದ್ದು, ಎಲ್ಲರೂ ಇಂಗ್ಲಿಷ್ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಗೌಡೇಶ ಪಾಟೀಲ, ಪ್ರಸಕ್ತ ಶೈಕ್ಷಣಿಕ ‌ದಿನಮಾನಗಳಲ್ಲಿ ಮಾತೃ‌ ಭಾಷೆಯ ಜತೆಗೆ ಇಂಗ್ಲಿಷ್ ಕಲಿಯುವುದು ಅತ್ಯವಶ್ಯಕವಾಗಿದೆ. ಬೇರೆ ದೇಶಗಳಿಗೆ ಹೋದಾಗ ಭಾಷೆಯ ಸಮಸ್ಯೆ ಎದುರಾಗುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಕಲಿಯುವುದು ಮುಖ್ಯವಾಗಿದೆ ಎಂದರು.

ಡಾ. ಸ್ಪೂರ್ತಿ ಮಾಸ್ತಿಹೋಳಿ ಮಾತನಾಡಿ, ಜ್ಞಾನಕ್ಕಾಗಿ ಸಾಕಷ್ಟು ಪುಸ್ತಕಗಳು ಇರುತ್ತದೆ. ಇಂಗ್ಲಿಷ್ ಕಲಿಯುವುದು ಕಡ್ಡಾಯವಾಗಿದೆ. ಶಿಕ್ಷಕರು ಹಾಗೂ ಪೋಷಕರು ಮಗುವಿನ ಇಂಗ್ಲಿಷ್ ಕಲಿಯಲು ಪ್ರೋತ್ಸಾಹಿಸಬೇಕು. ಅಂಗಾಗ ಮಾತ್ರ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆ ಕಲಿಯಲು ಸಾಧ್ಯವಾಗುತ್ತದೆ. ಈಗಾಗಲೇ ಭಾರತದ 10 ಪ್ರತಿಶತ ಜನರು ಇಂಗ್ಲಿಷ್ ಕಲಿತಿದ್ದಾರೆ. ಬೇರೆ ದೇಶಗಳಲ್ಲಿ‌ ಶುದ್ಧವಾಗಿ ಇಂಗ್ಲಿಷ್ ಮಾತನಾಡುವುದಿಲ್ಲ. ಎಲ್ಲ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯುವುದು ಕಡ್ಡಾಯವಾಗಿದೆ ಎಂದರು.

ರಾಜಶೇಖರ ಕೋಳಿಮಠ, ರೋಹಿತ, ಅಭ್ಯುದಯ ‌ಹಿರೇಮಠ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.