ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಶಿಕ್ಷಣಾಧಿಕಾರಿ ಸಾಂತ್ವಾನ
ಅಥಣಿ: ಗ್ರಾಮದಲ್ಲಿ ಶನಿವಾರ ಸಂಜೆ ಕರಿಮಸೂತಿ ಏತ ನೀರಾವರಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪಿದ ಹಿನ್ನೆಲೆ ಇಂದು ಬೆಳಗ್ಗೆ ಶಿಕ್ಷಣ ಇಲಾಖೆಯ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಗೌಡಪ್ಪ ಖೋತ ಮಕ್ಕಳ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾತ್ವಂನ ಹೇಳಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎ. ಖೋತ ಮಾತನಾಡಿ ಮಕ್ಕಳು ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬಹಳ ದುಃಖವನ್ನುಟ್ಟು ಮಾಡಿದೆ. ಮೃತರ ಮಕ್ಕಳಿಗೆ ಸರಕಾರ ಶಿಕ್ಷಣ ಇಲಾಖೆಯಿಂದ ವಿಧ್ಯಾರ್ಥಿ ಕ್ಷೇಮಾಭಿವೃದ್ದಿ ನಿಧಿಯಿಂದ ತಲಾ ಒಂದು ಮಕ್ಕಳಿಗೆ ೫೦ ಸಾವಿರ ರೂ. ಸಹಾಯಧನ ಸಿಗಲಿದೆ. ಇದಕ್ಕೆ ಬೇಕಾದ ಎಲ್ಲ ದಾಖಲಾತಿಗಳನ್ನು ನಾಳೆಗೆ ಶಾಲೆಯಿಂದ ಪಡೆದುಕೊಂಡು ಮೇಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.
ಅಥಣಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಕುಟುಂಬಸ್ಥರಿಗೆ ಸಾತ್ವಂನ ಹೇಳಿ ಮಾತನಾಡಿ, ಮಕ್ಕಳ ಕುಟುಂಬ ಅತೀ ಕಡು ಬಡತನವಿರುವ ಕುಟುಂಬ. ದಿನವೂ ಕೂಲಿ ಮಾಡುವಂತವರು, ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಕುಟುಂಬಕ್ಕೆ ಸರಕಾರದಿಂದ ಸಿಗುವ ಸಹಾಯಧನವನ್ನು ಸಂಬAದಿಸಿದವರ ಗಮನಕ್ಕೆ ತಂದು ಬೇಗನೆ ಸಹಾಯಧನ ನೀಡುವಂತೆ ಆಗ್ರಹಿಸಲಾವುದು ಎಂದರು.
ಈ ವೇಳೆ ಶಿಕ್ಷಣ ಇಲಾಖೆಯ ಸಿಆರ್ಪಿ ಮಹಾಂತೇಶ ಗುಡದಿನ್ನಿ, ಬಿಆರ್ಪಿ ಅಕ್ಬರ ಮುಜಾವರ, ನೂರಅಹ್ಮದ್ ಡೊಂಗರಗಾಂವ, ಅಶೋಕ ಕೊಡಗ, ಚಿದಾನಂದ ತಳಕೇರಿ, ಶಂಕರ ಪೂಜಾರಿ, ಅಣ್ಣೇಶ ಗುರಪ್ಪಗೋಳ, ಗೋಪಾಲ ಗುರಪ್ಪಗೋಳ, ಅಣ್ಣಪ್ಪ ಪುಂಡಿಪಲ್ಲೆ, ವಿನಾಯಕ ಪುಂಡಿಪಲ್ಲೆ, ದೇವೇಂದ್ರ ಗುರಪ್ಪಗೋಳ, ವಿಕಾಸ ಗುರಪ್ಪಗೋಳ, ಅಶೋಕ ಮೆಂಡಿಗೇರಿ, ಸುನೀಲ ಗುರಪ್ಪಗೋಳ, ಪ್ರಕಾಶ ಸಿಂಗೆ ಸೇರಿದಂತೆ ಅನೇಕರು ಇದ್ದರು