Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಹಿಳಾ ಶಕ್ತಿಯಿಂದ ದೇಶದಲ್ಲಿ ದೊಡ್ಡ ಬದಲಾವಣೆ ಸಾಧ್ಯ : ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ:ಮಹಿಳೆಯ ಶಕ್ತಿ ಅಪಾರವಾಗಿದ್ದು, ಅದು ಸಂಘಟನೆ ರೂಪದಲ್ಲಿ ಕ್ರೋಡೀಕರಣಗೊಂಡಾಗ ಅದು ನೂರ್ಮಡಿಗೊಳ್ಳುತ್ತದೆ. ಅದನ್ನು ಧನಾತ್ಮಕವಾಗಿ ಬಳಸಿಕೊಂಡರೆ ಈ ದೇಶದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿ ಗಣೇಶಪುರದ ಮಹಾಲಕ್ಷ್ಮಿ ನಗರದಲ್ಲಿ ಶ್ರೀ ಮಹಾಲಕ್ಷ್ಮಿ ಮಹಿಳಾ ಮಂಡಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿರಾಗಾಂಧಿ ಅವರು ಒಬ್ಬ ಮಹಿಳೆಯಾಗಿ ಈ ದೇಶವನ್ನು ಆಳಿರುವುದನ್ನು, ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಿರುವುದನ್ನು ನಾವ್ಯಾರೂ ಮರೆಯುವಂತಿಲ್ಲ. ನಾವು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಹಾಗಾಗಿ ಈ ಸಂಘಟನೆಯ ಮೂಲಕ ಗ್ರಾಮದಲ್ಲಿ ಉತ್ತಮ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗೋಣ. ನಿಮ್ಮ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಜೊತೆಗೆ ಸರಕಾರದಿಂದ ಸಂಘಟನೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದರು.

ಮಹಿಳಾ ಮಂಡಳದ ಅಧ್ಯಕ್ಷೆ ಅನಿತಾ ಬಿರಾದಾರ, ಪದಾಧಿಕಾರಿಗಳಾದ ಶೀಲಾ ಪಾಟೀಲ, ಶ್ರೀಮತಿ ಹುಕ್ಕೇರಿ, ಮಹಿಳಾ ಮಂಡಳದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.