Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಹೊಸಟ್ಟಿ ಹೊರವಲಯದಲ್ಲಿ ರಸ್ತೆ ಕಾಮಗಾರಿ ಚಾಲನೆ.

localview news

ಅಥಣಿ:ಅಥಣಿ ಗ್ರಾಮೀಣ ಸಂಕೋನಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಹೊಸಟ್ಟಿ ಗ್ರಾಮದ ಹೊರವಲಯದಲ್ಲಿ ಸರಗರ ತೋಟಕ್ಕೆ ಹೊಂದಿಕೊಂಡ ರಸ್ತೆಗೆ ಸುಮಾರು 05 ಲಕ್ಷ ರೂ ಅನುದಾನದಲ್ಲಿ ಮುರುಗು(ಗರಸು) ಹಾಕುವ ಪ್ರಕ್ರಿಯೆಗೆ ನಿನ್ನೆ ಊರಿನ ಹಿರಿಯರು ಹಾಗೂ ಮುಖಂಡರು ಸೇರಿ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಬಿಜೆಪಿ ಅಥಣಿ ಮಂಡಲ ಅಧ್ಯಕ್ಷ ಶ್ರೀಶೈಲ ನಾಯಿಕ ಅವರು ನಮ್ಮ ಹೊಸಟ್ಟಿ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗಾಗಿ ಎಲ್ಲ ಗ್ರಾ.ಪಂ ಸದಸ್ಯರು ಶ್ರಮಪಡುತ್ತಿದ್ದಾರೆ, ಬಹಳ ಹಿಂದಿನ ಬೇಡಿಕೆಯಾದ ಈ ರಸ್ತೆ ಪ್ರಕ್ರಿಯೆಗೆ ಇವತ್ತು ಚಾಲನೆ ನೀಡಲಾಗಿದ್ದು ಮುಂದಿನ ಕಾರ್ಯಗಳಿಗೆ ಮುಂದಿನ ದಿನಮಾನಗಳಲ್ಲಿ ಚಾಲನೆ ನೀಡಿ ಊರಿನ ಅಭಿವೃದ್ದಿ ಮಾಡಲಾಗುತ್ತದೆ ಎಂದರು.

ಅನಂತರ ಮಾತನಾಡಿದ ಗ್ರಾ.ಪಂ ಸದಸ್ಯ ಪರಶುರಾಮ ಸೋನಕರ ಅವರು ಹೊಸಟ್ಟಿ ಗ್ರಾಮದ ನೂತನ ಸದಸ್ಯರು ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ ಅವರ ಎಲ್ಲ ಕೆಲಸಗಳಿಗೆ ಗ್ರಾಮದ ಸಮಸ್ತರು ಕೈಜೋಡಿಸಿ ಎಂದರು.

ಈ ವೇಳೆ ಗ್ರಾ.ಪಂ ಸದಸ್ಯರಾದ ಮೈಬೂಬ ಮಕಾಂದಾರ, ಲಕ್ಷ್ಮಣ ನಾಯಿಕ, ಸಂಜಯ ಹಣಮಾಪೂರೆ, ಮುಖಂಡರಾದ ಕಬೀರ ಆಲಬಾಳ, ಅವಿನಾಶ ಹಣಮಾಪೂರೆ, ರಾಮು ನಾಯಿಕ, ಸಿದ್ದಪ್ಪ ಸರಗರ, ಮಾಳಪ್ಪ ಸರಗರ, ಕುಮಾರ ಅಲಾಸೆ, ಸುರೇಶ ಅಲಾಸೆ, ಕೃಷ್ಣಾ ಸರಗರ, ಚಂದು ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.