ಮಾಜಿ ಸಚಿವ ರಮೇಶ ಪರ ಬ್ಯಾಟ್ ಬಿಸಿದ ಸಚಿವ ನಾರಾಯಣ
ಬೆಳಗಾವಿ:ರಮೇಶ್ ಜಾರಕಿಹೊಳಿ ನಮ್ಮ ನಾಯಕರು ಎಲ್ಲಾ ರೀತಿ ವಿಶ್ವಾಸಕ್ಕೆ ತಗೆದುಕೊಂಡು ಅವರ ಭಾವನೆಗೆ ಪೂರಕವಾಗಿ ಪಕ್ಷದಲ್ಲಿ ಸ್ಪಂದಿಸುವಂತದ್ದಾಗುತ್ತೆ. ಅವರಿಗೆ ನೋವು ಆಗಿರಬಹುದು ಸಹಜ ಅಲ್ವಾ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ ನಾರಾಯಣ ಹೇಳಿದರು.
ಬುಧವಾರ ನಗರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು. ರಮೇಶ ಜಾರಕಿಹೊಳಿ ಅವರು ನೊಂದಿರುತ್ತಾರೆ, ಪರಿಸ್ಥಿತಿ ಹಾಗಿದೆಯಲ್ಲಾ.ಆದ್ರೆ ಅವರು ನಮ್ಮ ನಾಯಕರು. ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನ ನಮ್ಮ ಪಕ್ಷದಲ್ಲಾಗುತ್ತೆ.ಅವರ ಸಹಕಾರ, ಅವರ ಕಾರ್ಯವನ್ನು ಪಕ್ಷ ಯಾವಾಗಲೂ ಶ್ರಮಿಸುತ್ತೆ ನಾನು ಇರ್ತೀನಿ, ನಮ್ಮ ಪಕ್ಷದಲ್ಲಿ ಅವರು ಹೇಳ್ತಾರೆ ಎಂದು ರಮೇಶ್ ಜಾರಕಿಹೊಳಿ ಪರ ಸಚಿವ ಡಾ.ಅಶ್ವತ್ಥ್ ನಾರಾಯಣ್ ಬ್ಯಾಟಿಂಗ್ ಮಾಡಿದರು.
ಸರ್ಕಾರದಿಂದ ಐಟಿ ದುರ್ಬಳಕೆ ಎಂಬ ಕಾಂಗ್ರೆಸ್ ಆರೋಪ ವಿಚಾರ, ಐಟಿ ದುರ್ಬಳಕೆ ಪ್ರಶ್ನೆಯೇ ಇಲ್ಲ ಕಾನೂನು ಪಾಲನೆ ಮಾಡುವಂತಿದೆಕಾನೂನು ಉಲ್ಲಂಘನೆ ಯಾರೇ ಮಾಡಿದ್ರೂ ಕ್ರಮ ಕೈಗೊಳ್ಳೋದು ಸರ್ಕಾರದ ಕರ್ತವ್ಯ.ಮಾಜಿ ಸಿಎಂ ಸಿದ್ದರಾಮಯ್ಯ - ಹೆಚ್ಡಿಕೆ ಮಧ್ಯೆ 'ಪುಟಗೋಸಿ ಫೈಟ್' ವಿಚಾರ ನಾವೇನು ಹೇಳೋಣ ಅವರವರೇ ಮಾತನಾಡಿಕೊಳ್ತಿದ್ದಾರೆ ಎಂದರು.
ಅವರ ಪಕ್ಷದವರೇ ಹೇಳಿಕೆ ಕೊಟ್ಟ ಮೇಲೆ ವಿಶ್ಲೇಷಣೆ ಮಾಡಲಿಕ್ಕೆ ಅವಕಾಶ ಇಲ್ಲ.ಅವರ ಪಕ್ಷದವರೇ ಹೇಳಿದ್ದಾರಂದ್ರೆ ಅರ್ಥ ಮಾಡಿಕೊಳ್ಳಿ ಯಾವ ಪರಿಸ್ಥಿತಿ ಇದೆ. ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಪೈಪೋಟಿ ವಿಚಾರ.ಈ ವಿಚಾರದಲ್ಲಿ ಸಿಎಂ ಏನೂ ಮಾಡಬೇಕೆಂದು ನಿಶ್ಚಯ ಮಾಡ್ತಾರೆ.
ಅವರೇ ಮುಂದುವರಿಸುತ್ತಾರಾ, ಬೇರೆಯವರಿಗೆ ಕೊಡ್ತಾರಾ.ಸಿಎಂ ಈಗಾಗಲೇ ಹೇಳಿದ್ದಾರೆ.ಸಿಎಂ ಎಲ್ಲಾ ಜೊತೆ ಸಮಾಲೋಚನೆ ಮಾಡ್ತೀವಿ ಎಂದಿದ್ದಾರೆ. ಸಿಎಂ ಬೆಂಗಳೂರು ಉಸ್ತುವಾರಿ ಜವಾಬ್ದಾರಿ ನೀಡಿದ್ರೆ ನಿಭಾಯಿಸ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆ ಸನ್ಮಾನ್ಯ ಮುಖ್ಯಮಂತ್ರಿಗಳು ಕೊಟ್ಟರೇ ಖಂಡಿತ ಮಾಡೋಣ ಎಂದು ಹೇಳಿದರು.
ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಒಲವು ವ್ಯಕ್ತಪಡಿಸಿದ ಡಾ.ಅಶ್ವತ್ಥ್ ನಾರಾಯಣ್. ಸಚಿವ ಆರ್.ಅಶೋಕ್ ವಿರುದ್ಧ ವಿ.ಸೋಮಣ್ಣ ವಾಗ್ದಾಳಿ ವಿಚಾರ ಏನೇ ಸಮಸ್ಯೆ ಇದ್ರೂ ಸರಿಪಡಿಸಿಕೊಳ್ಳುವಂತದ್ದು ಎಂದರು.