ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪೌಂಡೇಶನ್ ವತಿಯಿಂದ ಸ್ವಚ್ಛತಾ ಅಭಿಮಾನ
ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪೌಂಡೇಶನ್ ವತಿಯಿಂದ ಇಲ್ಲಿನ ತಹಿಶೀಲ್ದಾರ ಕಚೇರಿ ಆವರಣದಲ್ಲಿ ಸ್ವಚ್ಛತಾ ಅಭಿಮಾನ ಕಾರ್ಯಕ್ರಮವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ತಂಡದಿಂದ ಭಾನುವಾರ ನಡೆಸಲಾಯಿತು.
ಯುವಕರು, ಪತ್ರಕರ್ತರ ಸಂಘ, ಬಾಡಿ ಬಿಲ್ಡಿಂಗ್ ಅಸೋಶಿಯನ್ ಹಾಗೂ ಹಲವಾರು ಸಂಘ-ಸಂಸ್ಥೆಗಳು ಈ ಸ್ವಚ್ಛತಾ ಅಭಿಮಾನಕ್ಕೆ ಕೈಜೋಡಿಸಿದವು.
ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು, ಈ ವಾರ ಮೊದಲಿಗೆ ಕಚೇರಿ ಸ್ವಚ್ಛತೆಗೊಳ್ಳಿಸಲಾಗಿದೆ. ನೀರು ಹಾಗೂ ಸ್ವಚ್ಛತೆ ಸಮಸ್ಯೆಯಿಂದ ಈ ಕಚೇರಿ ಸೌಂಧರ್ಯ ಕಳೆದುಗೊಂಡಿತ್ತು. ಹಾಗಾಗಿ ಇಂದು ಕಚೇರಿಯಲ್ಲಿ ಸ್ವಚ್ಚತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ವಾರವೂ ಶಾಲೆಗಳು ಹಾಗೂ ನಗರದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸ್ವಚ್ಛತೆ ಮಾಡಲಾಗುವುದು. ಈ ಮಹತ್ವದ ಕಾರ್ಯಕ್ಕೆ ಯುವಕರು, ಹಲವಾರು ಸಂಘ-ಸಂಸ್ಥೆಗಳು ಈ ಕೈಜೋಡಿಸಿದ್ದಾರೆ ಎಂದು ಕಾಟೇಶ ಗೋಕಾಂವಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಟೇಶ ಗೋಕಾಂವಿ, ರಿಯಾಜ್ ಚೌಗಲಾ, ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಈ ಸ್ಚಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.