Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬುಡಾ ಯೋಜನೆ ಈ ಸಭೆಯಲ್ಲಿ ಅನುಷ್ಠಾನಗೊಳಿಸಿ: ಅ.22 ರಂದು ಬೃಹತ್ ರ್ಯಾಲಿಗೆ ನಿರ್ಣಯ

localview news

ಬೆಳಗಾವಿ:ನಗರಾಭಿವೃದ್ಧಿ ಪ್ರಾಧಿಕಾರದ ಅ.25ರ ಬುಡಾ ಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆ ಅನುಷ್ಠಾನಗೊಳಿಸಲು ಕರೆಯಲಾಗಿರುವ ಸಭೆಯಲ್ಲಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸದಸ್ಯರು ಹಾಜರಾಗಬೇಕೆಂದು ಅ.22 ರಂದು ಬೆಳಗ್ಗೆ 10.30ಕ್ಕೆ ಚನ್ನಮ್ಮ ವೃತ್ತದಿಂದ ಬೃಹತ್ ರ್ಯಾಲಿ ನಡೆಸಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ವಿವಿಧ ಪಕ್ಷಗಳ ಮುಖಂಡರು ಸೋಮವಾರ ನಿರ್ಣಯ ತೆಗೆದುಕೊಂಡರು.

ಸೋಮವಾರ ಮಾರುತಿ ಗಲ್ಲಿಯ ಮಾರುತಿ ದೇವಸ್ಥಾನದಲ್ಲಿ ಕರೆಯಲಾದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡರು.

ಕಣಬರಗಿಯ ಸ್ಕಿಮ್ ನಂಬರ್ 61ಕ್ಕೆ ಸರಕಾರದಿಂದ ಅನುಮೋದನೆ ನೀಡಲಾಗಿದೆ. ಈಗಾಗಲೇ ಹೊಸ ಬಡಾವಣೆಗಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಬುಡಾದಲ್ಲಿ ಬಂದಿವೆ. ಈ ಯೋಜನೆಯನ್ನು ಬುಡಾದಲ್ಲಿ ಕರೆಯಲಾದ ಸಭೆಯಲ್ಲಿ ಅನುಷ್ಠಾನಕ್ಕೆ ತರಲು ಎಲ್ಲರು ಶ್ರಮಿಸಬೇಕೆಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಈಗಾಗಲೇ ಕಳೆದ ಮೂರು ಬಾರಿ ಕರೆಯಲಾದ ಸಭೆಯಲ್ಲಿ ಶಾಸಕರು, ಅಧಿಕಾರಿಗಳು ಹಾಗೂ ಬುಡಾದ ಸದಸ್ಯರು ಸಭೆಗೆ ಬಾರದೆ ಗೈರಾಗಿ ಉಳಿದಿದ್ದರು. ಬರುವ ಅ.25ರಂದು ನಡೆಯುವ ಸಭೆಗೆ ಎಲ್ಲರೂ ಒಗ್ಗಟ್ಟಾಗಿ ಬೆಳಗಾವಿ ಜಿಲ್ಲೆಯ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಬೆಳಗಾವಿ ನಗರದಲ್ಲಿ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಭೆಯಲ್ಲಿ ಅನುಷ್ಠಾನ ಮಾಡಬೇಕೆಂದು ಅ.22 ರಂದು ಬೃಹತ್ ರ್ಯಾಲಿ ನಡೆಸುತ್ತಿದ್ದು, ಬುಡಾ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ರ್ಯಾಲಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.ಕಾಂಗ್ರೆಸ್ ಮುಖಂಡ ಆರ್.ಪಿ.ಪಾಟೀಲ, ವಿಜಯ ಪಾಟೀಲ, ಮುಕ್ತಾರ ಇನಾಮದಾರ, ಅರ್ಚನಾ ಮೇತ್ರಿ, ರಾಜಕುಮಾರ ಟೋಪಣ್ಣವರ, ಮನೋಹರ ಪಾಟೀಲ, ಎಲ್.ಬಿ.ಸಾವಂತ, ರಾಜು ಮರವೆ, ಸಿದ್ದರಾಯ ಸಿಗಿಹಳ್ಳಿ, ಶುಭಂ ಸೆಳಕೆ, ಎನ್.ಕೆ.ನಳವಡೆ, ಸುಜೀತ ಮುಳಗುಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.