Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅ.21 ರಂದು ಸಂಗ್ಯಾಬಾಳ್ಯಾ ನಾಟಕ ಪ್ರದರ್ಶನ: ಕಲಕರ್ಣಿ

localview news

ಅಥಣಿ : ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಜೆ ಇ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ದಿ.21 ರಂದು ಶತದಳ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಂಗ್ಯಾಬಾಳ್ಯಾ ಬೈಲಾಟ ಪ್ರದರ್ಶನವಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ರಾಮ ಬಿ ಕುಲಕರ್ಣಿ ಅವರು ಹೇಳಿದರು.

ಅವರು ಸ್ಥಳೀಯ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡುತ್ತಾ  ದಿನಾಂಕ‌ 21 ರಂದು ಬೆಳಿಗ್ಗೆ 10 ಗಂಟೆಗೆ ಆರ್. ಎಚ್. ಕುಲಕರ್ಣಿ ಸಭಾಭವನದಲ್ಲಿ ಮೊದಲಿಗೆ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶತದಳ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಜರುಗಲಿದ್ದು ಬೆಂಗಳೂರಿನ ಸಾಹಿತಿ ಡಾ ಕೆ ಆರ್ ಸಿದ್ದಗಂಗಮ್ಮ ಮುಖ್ಯ ಅತಿಥಿಯಾಗಿ, ಅಧ್ಯಕ್ಷತೆಯನ್ನು ಡಾ ರಾಮ ಬಿ ಕುಲಕರ್ಣಿ ಅವರು, ಉಪಸ್ಥಿತರಾಗಿ ಪ್ರಧಾನ ಸಂಪಾದಕ ಅರವಿಂದರಾವ ದೇಶಪಾಂಡೆ, ಡಾ ಬಾಳಾಸಾಹೇಬ ಲೋಕಾಪೂರ, ಡಾ ವಿ ಎಸ್ ಮಾಳಿ ಅವರು ಉಪಸ್ಥಿತರಾಗಿ ಇರಲಿದ್ದಾರೆಂದು ಹೇಳಿದರು.

ಅನಂತರ ಮಧ್ಯಾಹ್ನ 12 ಗಂಟೆಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಳಗಾವಿ, ಶ್ರೀ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಸದಾಶಿವ ಸಂಗ್ಯಾ ಬಾಳ್ಯಾ ಮಹಿಳಾ ನಾಟಕ ಮಂಡಳಿ, ಡಾ ಲಕ್ಷ್ಮೀಬಾಯಿ ನೀಲಪ್ಪನವರ ಸಾಲಹಳ್ಳಿ ಇವರಿಂದ ಸಂಗ್ಯಾ ಬಾಳ್ಯಾ ಬೈಲಾಟ್ ಪ್ರದರ್ಶನವಿದ್ದು ಅಧ್ಯಕ್ಷತೆಯನ್ನು ಡಾ ರಾಮ‌ ಬಿ ಕುಲಕರ್ಣಿ, ಉದ್ಘಾಟಕರಾಗಿ ಅರವಿಂದರಾವ ದೇಶಪಾಂಡೆ, ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕ್ರತಿ ಇಲಾಖೆ ಬೆಳಗಾವಿಯ ವಿದ್ಯಾವತಿ ಭಜಂತ್ರಿ ಅವರು ಇರಲಿದ್ದು ಉಪಸ್ಥಿತರಾಗಿ ಪ್ರಾಚಾರ್ಯ ಆರ್ ಎಮ್ ದೇರಡ್ಡಿ ಅವರು ಇರಲಿದ್ದಾರೆಂದು ತಿಳಿಸಿದರು.

ಈ ವೇಳೆ ಮಾತನಾಡಿದ ಕೆ ಎ ಲೋಕಾಪೂರ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅರವಿಂದರಾವ ದೇಶಪಾಂಡೆ ಮಾತನಾಡುತ್ತಾ ಕೊರೊನಾ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆ ಸ್ಮರಣ ಸಂಚಿಕೆ ಬಿಡುಗಡೆ ತಡವಾಗಿದೆ. ಶತದಳ ಸ್ಮರಣ ಸಂಚಿಕೆ ನಮ್ಮ ಸಂಸ್ಥೆಯ ಇತಿಹಾಸ ಹಲವಾರು ಹಿಂದಿನ ವಿದ್ಯಾರ್ಥಿಗಳ ಅನುಭವದ ಜೊತೆಗೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಮಹನಿಯರ ಸಮಸ್ಥ ಚಿತ್ರಣವಿದೆ ಈ ಪುಸ್ತಕ ಪ್ರತಿಯೊಬ್ಬ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳ ಮನೆಯಲ್ಲಿ ಇರಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್ ವಿ ಜೋಶಿ, ಸಹಕಾರ್ಯದರ್ಶಿ ರವಿ ಕುಲಕರ್ಣಿ ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಈ ವೇಳೆ ಆರ್ ಎ ಜೋಶಿ, ಗಿರೀಶ ಕುಲಕರ್ಣಿ, ನಿಲೇಶ ಝರೆ, ಎಮ್‌ ಪಿ ಮೇತ್ರಿ, ಆರ್ ಎ ನಾಯಿಕ, ಪಿ ಟಿ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು