Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಹಾಬಂದರ ಇಸ್ಲಾಂಪೂರ ಮಧ್ಯದ ಸರ್ಕಲ್ ಗೆ ಶ್ರೀ ಮಹರ್ಷಿ ವಾಲ್ಮೀಕಿ ಸರ್ಕಲ್ ಎಂದು ನಾಮಕರಣ

localview news

ಯಮಕನಮರಡಿ: ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಶಹಾಬಂದರ ಇಸ್ಲಾಂಪೂರ ರಸ್ತೆಯ ಸರ್ಕಲ್ ಗೆ ಮಹರ್ಷಿ ವಾಲ್ಮೀಕಿ ಸರ್ಕಲ್ ಎಂದು ನಾಮಕರಣ ಮಾಡಿದರು. ಹುಕ್ಕೇರಿ ತಾಲೂಕಿನ ಯಮಕನಮರಡಿ ಕ್ಷೇತ್ರದ ಶಹಾಬಂದರ ಇಸ್ಲಾಂಪೂರ ಸುತ್ತಲಿನ ಗ್ರಾಮಸ್ಥರು ಸೇರಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಿ ಪಾಶ್ಚಾಪೂರ ಬೆಳಗಾವಿ ಮಾರ್ಗದಲ್ಲಿರುವ ಶಹಾಬಂದರ ಇಸ್ಲಾಂಪೂರ ಗ್ರಾಮದ ರಸ್ತೆಯ ಮಧ್ಯೆ ಇರುವ ಸರ್ಕಲ್ ಗೆ ' ಶ್ರೀ ಮಹರ್ಷಿ ವಾಲ್ಮೀಕಿ ಸರ್ಕಲ್ ' ಎಂದು ನಾಮಕರಣ ಮಾಡಿದರು. ಶಹಾಬಂದರ, ಇಸ್ಲಾಂಪೂರ, ಚಿಕ್ಕಲದಿನ್ನಿ, ಗೆಜಪತಿ, ಗುಟಗುದ್ದಿ, ಯಲ್ಲಾಪೂರ ಹಾಗೂ ರಾಜಕಟ್ಟಿ ಗ್ರಾಮದ ಹಿರಿಯರು ಹಾಗೂ ಯುವಕರು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.