ಬೆಳಗಾವಿ ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಅವಕಾಶ ನೀಡುವಂತೆ ಒಂದು ದಿನದ ಉಪವಾಸ ಸತ್ಯಾಗ್ರಹ.
ಬೆಳಗಾವಿ :ಕನ್ನಡ ರಾಜ್ಯೋತ್ಸವವು ಐತಿಹಾಸಿಕ ವೈಭವಪೂರಿತವಾಗಿ ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ. ಬೆಳಗಾವಿ ಕನ್ನಡ ರಾಜ್ಯೋತ್ಸವಕ್ಕೆ ಅದರದೆ ಆದ ಇತಿಹಾಸ ಇದೆ. ಆದರೆ ಕರೋನ ಮಹಮಾರಿಯಿಂದ ಎರಡು ವರ್ಷದಿಂದ ಐತಿಹಾಸಿಕ ಬೆಳಗಾವಿ, ಕನ್ನಡ ರಾಜ್ಯೋತ್ಸವ ಆಚರಣೆ ಮಾಡೊಕೆ ಆಗಿಲ್ಲ ಮತ್ತು ಸರ್ಕಾರದ ಆದೇಶದಂತೆ ಎಲ್ಲರೂ ನಡೆದುಕೊಂಡು ಬಂದಿದ್ದೇವೆ
ಆದರೆ ಇಂದು ಕರೋನ ಸಂಪೂರ್ಣವಾಗಿ ತಗ್ಗಿದೆ. ಮತ್ತು ಸರ್ಕಾರ ಕೂಡ ಎಲ್ಲ ಧಾರ್ಮಿಕ ಆಚರಣೆಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಮತ್ತು ಚಿತ್ರ ಮಂದಿರಗಳಗೆ ಈಗಾಗಲೇ ಅವಕಾಶ ನೀಡಿದ್ದು, ಅದೇ ರೀತಿ ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ದಿನಾಂಕ : 22-10-2021 ರಂದು ಬೆಳಗ್ಗೆ 10-00 ಗಂಟೆಯಿಂದ ಒಂದು ದಿವಸದ ಉಪವಾಸ ಸತ್ಯಾಗ್ರಹ ಮಾಡುವುದರ ಮುಖಾಂತರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ ಮತ್ತು ಈ ಉಪವಾಸ ಸತ್ಯಾಗ್ರಹದ ಹೋರಾಟವು ಕಾನೂನಿನ ಚೌಕಟ್ಟನಲ್ಲಿ ಶಾಂತ ರೀತಿಯಲ್ಲಿ ಇರುತ್ತದೆ ಹಾಗು ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ನೀಡಬೇಕೆಂದು ಕನ್ನಡ ಪರ ಹೋರಾಟಗಾರರು ವಿನಂತಿಸಿಕೊಂಡಿದ್ದಾರೆ.